ಹುಬ್ಬಳ್ಳಿ-17:ಹುಬ್ಬಳ್ಳಿಯ ಚಾಮುಂಡೇಶ್ವರಿ ನಗರದಲ್ಲಿ, ಇತ್ತೀಚೆಗೆ ಅಶೋಕನಗರ ಪೊಲೀಸ್ ಠಾಣೆಯ ವತಿಯಿಂದ ಜೀತ ಪದ್ಧತಿ ನಿರ್ಮೂಲನಾ ಜಾಗೃತಿ ಸಭೆ ನಡೆಸಲಾಯಿತು.
ಸುಮಾರು ಜನ ಯುವಕರು ಮತ್ತು ಮಹಿಳೆಯರು ಸಭೆಯಲ್ಲಿ ಪಾಲ್ಗೊಂಡರು, ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪಿಎಸ್ಐ ಎಸ್ ಎಸ್ ಜಕ್ಕನಗೌಡ್ರ ಅವರು ಜೀತ ಪದ್ಧತಿ ಕುರಿತು ವಿಸ್ತಾರವಾದ ಮಾಹಿತಿ ನೀಡಿ, ಅದನ್ನು ಹೋಗಲಾಡಿಸಲು ಸಮಗ್ರ ಶಿಕ್ಷಣದ ಮಹತ್ವವನ್ನು ಜನರಿಗೆ ತಿಳಿಸಿಹೇಳಿದರು. ಯುವಕರು ಒಳ್ಳೆಯ ನಾಗರಿಕರಾಗಿ ಮುಂದಿನ ಭವಿಷ್ಯನಿರ್ಮಾಣದ ಜವಾಬ್ದಾರಿ ಇರುವುದರಿಂದ ದುಶ್ಚಟಗಳಿಗೆ ಬಲಿಯಾಗದೆ, ಸರಿಯಾದ ಶಿಕ್ಷಣ ಪಡೆದು ಒಳ್ಳೆಯ ಪ್ರಜೆಗಳಾಗಿ ದೇಶದ ಭದ್ರ ಬುನಾದಿ ಹಾಕಬೇಕು ಮತ್ತು ಪಾಲಕರು ಯಾವುದೇ ಕಾರಣಕ್ಕೆ ಜೀತ ಪದ್ದತಿಯಂಥವುಗಳಿಗೆ ತಮ್ಮ ಮತ್ತು ತಮ್ಮ ಮಕ್ಕಳ ಜೀವನವನ್ನು ಬಲಿಕೊಡಬಾರದು ಎಂದು ಹೇಳಿದರು.
ಸ್ಥಳೀಯ ಮುಖಂಡರಾದ ಶ್ರೀ ಮಂಜುನಾಥ ಕೊಂಡಪಲ್ಲಿ ಮಾತನಾಡಿ ಜೀತಪದ್ದತಿಯು ಇಂದಿಗೂ ಹಳ್ಳಿಗಳಲ್ಲಿ ಮತ್ತು ನಗರಪ್ರದೇಶಗಳಲ್ಲಿ ಮುಖ್ಯವಾಗಿ ಹೋಟೆಲ್ ಉದ್ಯಮಗಳಲ್ಲಿ ಜೀವಂತವಾಗಿರುವುದು ಚಿಂತಾಜನಕ ವಿಷಯವಾಗಿದೆ, ಆದರೆ ಈ ಸಾಮಾಜಿಕ ಪಿಡುಗನ್ನು ಹೋಗಲಾಡಿಸಲು ನಿರಂತರ ಶ್ರಮ ಪಡುತ್ತಿರುವ ಪೋಲಿಸ್ ಇಲಾಖೆಯ ಈ ಸಮಾಜ ಪರ ಕಾರ್ಯ ಶ್ಲಾಘನೀಯ ಎಂದರು, ಮತ್ತು ಈ ಸಂದರ್ಭದಲ್ಲಿ ಅಶೋಕನಗರ ಪೊಲೀಸ್ ಠಾಣೆಯ ಸಿಬ್ಬಂದಿಗೆ ಮತ್ತು ಹುಬ್ಬಳ್ಳಿ-ಧಾರವಾಡ ಕಮಿಷನರೇಟೀಗೆ ವಿಶೇಷ ಧನ್ಯವಾದಗಳನ್ನು ತಿಳಿಸಿದರು.
ಚಾಮುಂಡೇಶ್ವರಿ ನಗರದ ಅಧ್ಯಕ್ಷರಾದ ಶ್ರೀ ಪರಶುರಾಮ ಮಲ್ಯಾಳ, ಅಶೋಕನಗರ ಠಾಣೆಯ ASI ಎಂ ಕೆ ದೇಸಾಯಿ, ಹೆಡ್ ಕಾನ್ಸ್ಟೇಬಲ್ ಎಸ್ ಎಚ್ ಪಾಟೀಲ್, ಬೀರಣ್ಣ ನಾಟಿಕಾರ್ ಮುಂತಾದವರು ಉಪಸ್ಥಿತರಿದ್ದರು. ಕಾನ್ಸ್ಟೇಬಲ್ ಶಂಭು ಈರೇಶಣ್ಣವರ ಅವರು ವಂದಾರ್ಪಣೆ ಮಾಡಿದರು.