23/12/2024

ಬೆಳಗಾವಿ-25: ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಜಾತ್ರೆ, ಉತ್ಸವಗಳನ್ನು ನೋಡುವುದೇ ಚಂದ. ಇಡೀ ಗ್ರಾಮದ ಜನರು ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಶೃದ್ಧೆ, ಭಕ್ತಿಯಿಂದ ಪಾಲ್ಗೊಳ್ಳುತ್ತಾರೆ. ಗ್ರಾಮೀಣ ಜನರ ಒಗ್ಗಟ್ಟಿನ ಪ್ರತೀಕವಾಗಿ ಜಾತ್ರೆ ಹಾಗೂ ಉತ್ಸವಗಳು ನಡೆಯುತ್ತವೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದ್ದಾರೆ.

ಸುಕ್ಷೇತ್ರ ಬಡಾಲ ಅಂಕಲಗಿ ಗ್ರಾಮದ ಸದ್ಗುರು ಶ್ರೀ ಸಿದ್ಧಾರೂಢರ ಮೂರನೇಯ ಜಾತ್ರಾ ಮಹೋತ್ಸವದಲ್ಲಿ ಸೋಮವಾರ ಭಾಗವಹಿಸಿ ಅವರು ಮಾತನಾಡಿದರು. ಜನರು ಯಾಲವುದೇ ಭೇದ, ಭಾವವಿಲ್ಲದೆ ದೇವರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ತನು, ಮನ, ಧನದಿಂದ ತೊಡಗಿಸಿಕೊಳ್ಳುತ್ತಾರೆ. ಇಂತಹ ಸಾಂಪ್ರದಾಯಿಕ ಆಚರಣೆಗಳು ನಮ್ಮನ್ನು ಒಂದುಗೂಡಿಸುತ್ತವೆ ಎಂದು ಅವರು ತಿಳಿಸಿದರು.

ಈ ಸಮಯದಲ್ಲಿ ಹುಬ್ಬಳ್ಳಿಯ ರಾಜವಿದ್ಯಾಶ್ರಮದ ಶೋ.ಬ್ರ.ನಿಷ್ಠ ಭಾರತ ಭೂಷಣ ನವಚೇತನ ಶ್ರೀ ಷಡಕ್ಷರಿ ಮಹಾಸ್ವಾಮಿಗಳು, ಬಡಾಲ ಅಂಕಲಗಿ ಶ್ರೀರಾಮ ಮಂದಿರದ ಪರಮಪೂಜ್ಯ ಮೌನಯೋಗಿ ಶ್ರೀ ರಾಚಯ್ಯ ಮಹಸ್ವಾಮಿಗಳು, ಬಾಬು ಮಾಸಣ್ಣವರ, ಸಿದ್ದು ಚಾಪಗಾಂವಿ, ವಿಠ್ಠಲ ಅರ್ಜುನವಾಡಿ, ಬಸವಂತ ನಾಯ್ಕ, ಪಡೆಪ್ಪ, ರಾಮನಗೌಡ ಪಾಟೀಲ, ಮುಶೆಪ್ಪ ಉಪ್ಪಾರ, ಯಲಗೌಡ ಪಾಟೀಲ, ಮಲ್ಲಿಕಾರ್ಜುನ ಹಳಮನಿ ಉಪಸ್ಥಿತರಿದ್ದರು.

error: Content is protected !!