ಬೆಳಗಾವಿ-07:ಲಿಂಗಾಯತ ಸಂಘಟನೆ ವತಿಯಿಂದ ಬೆಳಗಾವಿಯ ಮಹಾಂತೇಶನಗರದ ಹಳಕಟ್ಟಿ ಭವನದಲ್ಲಿ ವಚನ ವಿಶ್ಲೇಷಣೆ ಕಾರ್ಯಕ್ರಮ ಮತ್ತು ಬೇಸಿಗೆ ರಜಾ ತರಗತಿಗಳಲ್ಲಿ ಸಂಘಟನೆ ವತಿಯಿಂದ ಹಮ್ಮಿಕೊಂಡ ಉಚಿತ ಬೇಸಿಗೆ ತರಬೇತಿ ಶಿಬಿರದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಉಚಿತ ತರಬೇತಿ ಕಾರ್ಯಕ್ರಮದ ಮುಖ್ಯ ಸಂಘಟಕ ಪ್ರಸಾದ ಹಿರೇಮಠ ಅಧ್ಯಕ್ಷತೆ ವಹಿಸಿ ಮಾತನಾಡಿ ಬಡ ಮಕ್ಕಳ ವಿದ್ಯಾರ್ಜನೆಗೆ ನನ್ನ ಕೈಲಾದ ಸಹಾಯ ಮಾಡಿರುವೆ ಮುಂಬರುವ ದಿನಗಳಲ್ಲಿ ಸಮಾಜದ ಮತ್ತು ಸಂಘಟನೆಯ ಸಹಕಾರ ಪಡೆದು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶ ಹೊಂದಿದ್ದೇನೆ ಎಂದರು. ಇದೇ ಸಂದರ್ಭದಲ್ಲಿ ಬೇಸಿಗೆ ತರಗತಿಗಳಲ್ಲಿ ಭಾಗವಹಿಸಿದ ಶಿಬಿರಾರ್ಥಿ ವಿದ್ಯಾರ್ಥಿಗಳಿಂದ ವಚನ ಪಠಣ ವಚನ ವಿಶ್ಲೇಷಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಶಂಕರ್ ಗುಡಸ, ಸದಾಶಿವ ದೇವರಮನಿ ಸೇರಿದಂತೆ ಇತರರು ಇತ್ತೀಚಿನ ದಿನಗಳಲ್ಲಿ ಶಿಕ್ಷಣ ವ್ಯಾಪಾರ ವಿಕರಣ ಆಗುತ್ತಾ ಸಾಗಿದೆ ಅಂತಹ ಈ ದಿನಗಳಲ್ಲಿ ನಮ್ಮ ಸಂಘಟನೆ ವತಿಯಿಂದ ವಿಶೇಷವಾಗಿ ಪ್ರಸಾದ ಹಿರೇಮಠ್ ರಂತವರ ದಾನಿಗಳ ಸರಕಾರದಿಂದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಯ ಮಾಡುವ ಅವಕಾಶ ಸಿಕ್ಕಿದ್ದು ಸಂಘಟನೆಯ ಸಾಮಾಜಿಕ ಕಳಕಳಿಯನ್ನು ಎತ್ತಿ ತೋರಿಸುತ್ತದೆ ಇಂತಹ ಕಾರ್ಯಗಳು ನಿರಂತರವಾಗಿ ನಮ್ಮ ಸಂಘಟನೆಯ ವತಿಯಿಂದ ನಡೆದು ಬರುತ್ತಿವೆ ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು. ಚಿತ್ರದ ವಿದ್ಯಾರ್ಥಿನಿ ಲಾವಣ್ಯ ಅಂಗಡಿ ತರಬೇತಿ ಶಿಬಿರದಲ್ಲಿ ಪಡೆದ ಜ್ಞಾನವನ್ನು ಉತ್ತಮ ರೀತಿಯಲ್ಲಿ ಬಳಸಿ ನಮ್ಮ ಜೀವನ ರೂಪಿಸಿಕೊಳ್ಳಲು ಬಳಕೆ ಮಾಡುತ್ತೇವೆ. ನಮ್ಮಂತಹ ಬಡ ಮಕ್ಕಳಿಗೆ ಉಚಿತವಾಗಿ ವಿದ್ಯಾರ್ಥಿನಿ ಮಾಡಿದ ಸರ್ವ ತಂಡಕ್ಕೂ ಧನ್ಯವಾದಗ ಸಲ್ಲಿಸುತ್ತ ಮುಂಬರುವ ದಿನಗಳಲ್ಲಿ ಶಿಬಿರದ ಲಾಭವನ್ನು ಇತರ ವಿದ್ಯಾರ್ಥಿಗಳು ಪಡೆಯಲಿ ಈ ಕಾರ್ಯ ಇದೇ ಮುಂದುವರೆಯಲಿ ಎಂದು ತರಬೇತಿ ಶಿಬಿರದ ಕುರಿತಾದ ತನ್ನ ಅನಿಸಿಕೆಗಳನ್ನು ವ್ಯಕ್ತಪಡಿಸಿದರು ಕಾರ್ಯಕ್ರಮದಲ್ಲಿ ಸುರೇಶ ನರಗುಂದ,ಶಶಿಕಾಂತ ಪಟ್ಟಣ ವಿಜಯಲಕ್ಷ್ಮಿ ಯರಜರವಿಮಠ, ಆನಂದ ಕರ್ಕಿ ಬಸವರಾಜ ಬಿಜ್ಜರಗಿ ಅಕ್ಕಮಹಾದೇವಿ ತೆಗ್ಗಿ ಲಕ್ಷ್ಮಣ ಕುಂಬಾರ, ಮಹಾದೇವ ಕೆಂಪಿ ಗೌಡರ, ಬಸವರಾಜ ಮತ್ತಿಕೊಪ್ಪ , ಗುರುಸಿದ್ದಪ್ಪ ರೇವಣ್ಣವರ, ಬಸವರಾಜ ಜಾಬಗೌಡರ ,ಲಕ್ಷ್ಮಣ ಕುಂಬಾರ, ಶಿವಾನಂದ ತಲ್ಲೂರ, ಎಂ ವೈ ಮೆಣಸಿನಕಾಯಿ ಸೇರಿದಂತೆ ಮಕ್ಕಳ ಪಾಲಕರು ಪೋಷಕರು ಮತ್ತು ಶಿಕ್ಷಕ ವರ್ಗ ಮತ್ತು ಶರಣು ಶರಣೀಯರು ಉಪಸ್ಥಿತರಿದ್ದರು ಕಾರ್ಯಕ್ರಮದ ಆರಂಭದಲ್ಲಿ ಸಂಗಮೇಶ ಅರಳಿ ಸ್ವಾಗತಿಸಿದರು ಮಹಾದೇವಿ ಅರಳಿ ವಚನ ಪ್ರಾಥನೆ ನಡೆಸಿಕೊಟ್ಟರು ಅನ್ನಪೂರ್ಣ ಹಿರೇಮಠ ನಿರೂಪಿಸಿದರು ಶಶಿಭೂಷಣ ಪಾಟೀಲ ವಂದಿಸಿದರು .
