ಬೆಳಗಾವಿ-05 :ಜೂನ 5 ರಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ಕಪಿಲೇಶ್ವರ ದೇವಸ್ಥಾನದ ಪರಿಸರದಲ್ಲಿ ರುದ್ರಾಕ್ಷಿ ಸಸಿಗಳನ್ನು ದೇವಸ್ಥಾನದ ಟ್ರಸ್ಟ್ ಸಿಬ್ಬಂದಿಗಳಿಗಳ ಮೂಲಕ ಸರ್ವ ಲೋಕಸೇವಾ ಫೌಂಡೇಶನ ವತಿಯಿಂದ ಅರಳಿ, ಬಿಲ್ವ ಪತ್ರೆಯ, ರುದ್ರಾಕ್ಷಿ ಸಸಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ವೀರೇಶ ಬಸಯ್ಯಾ ಹಿರೇಮಠ ಇವರ ನೇತೃತ್ವದಲ್ಲಿ ಹಂಚಿಕೆ ಮಾಡಿ ಅವುಗಳನ್ನು ನೆಡಲಾಯಿತು
ಈ ಸಂಧರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ವಿರೇಶ ಬಸ್ಸಯ್ಯಾ ಹಿರೇಮಠ ಅವರು ಮಾತನಾಡಿ ಪರಿಸರ ದಿನ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗದಿರಲಿ ಹೆಚ್ಚುತ್ತಿರುವ ಜಾಗತಿಕ ತಾಪಮಾನ, ಹವಾಮಾನ ಬದಲಾವಣೆ ಮುಂತಾದ ಪರಿಸರದಲ್ಲಿ ವ್ಯತ್ಯಾಸಗಳು ಉಂಟಾಗುತ್ತಿರುವುದಕ್ಕೆ ಕಾರಣ ಪರಿಸರ ಕಾಪಾಡಿಕೊಳ್ಳಲು ನಾವು ವಿಫಲವಾಗುತ್ತಿದ್ದೇವೆ, ಯುವ ಜನತೆ ಪರಿಸರದಲ್ಲಿ ಅನೇಕ ಪ್ರಭೇದ ಸಸಿಗಳು ಆಯುರ್ವೇದ ಹಾಗೂ ಧಾರ್ಮಿಕತೆ ಇತಿಹಾಸವುಳ್ಳ ಸಸಿಗಳಿವೆ ಅವುಗಳ ಬಗ್ಗೆ ತಿಳಿದು ಪರಿಸರದಲ್ಲಿ ಅವುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪೋಷಣೆ ಮಾಡುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಆಗಿದೆ ಇಂತಹ ಸಸಿಗಳು ಸುಸ್ಥಿರ ಅಭಿವೃದ್ಧಿ ಕಾಪಾಡುವುದರಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿವೆ ಎಂದು ಅವರು ತಿಳಿಸಿದರು.
ಈ ಸಂಧರ್ಭದಲ್ಲಿ ಸಂಸ್ಥೆಯ ಸದಸ್ಯರಾದ ಗಜಾನನ ಪಾಟೀಲ, ಅಭಿಜಿತ ಚೌವ್ಹಾಣ, ರಾಹುಲ ಕುರಣೆ, ಅಜೀತ ಜಾದವ ಹಾಗೂ ರಮೇಶ ಕಾಳೆ ಮುಂತಾದವರು ಈ ಸಂಧರ್ಭದಲ್ಲಿ ಹಾಜರಿದ್ದರು.
