06/06/2026
IMG-20260605-WA0010

ಪರಿಸರ ಜಾಗೃತಿಗಾಗಿ ಉಚಿತ ಸಸಿ ವಿತರಣಾ ಕಾರ್ಯಕ್ರಮ

ಬೆಳಗಾವಿ-05 : ಇಂದಿನ ಆಧುನಿಕ ಮನುಕುಲದ ಜಗತ್ತಿಗೆ ಉತ್ತಮ ಹಾಗೂ ಸಮೃದ್ಧ ಪರಿಸರ ತುಂಬಾ ಅವಶ್ಯಕವಾಗಿದ್ದು ಅದನ್ನು ಬೆಳಸಿ ಪೋಷಿಸುವದು ಎಲ್ಲರ ಜವಾಬ್ದಾರಿಯಾಗಿದೆ ಎಂದು ನವಜೀವನ ಆಸ್ಪತ್ರೆಯ ಖ್ಯಾತ ವೈದ್ಯರಾದ ಡಾ, ಸತೀಶ ಚೌಲಿಗೇರ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಶುಕ್ರವಾರ ದಿನಾಂಕ 05/06/2026 ರಂದು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಏರ್ಪಡಿಸಿದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ಭೂಮಿ ಮೇಲಿರುವ ಪ್ರತಿಯೊಂದು ಜೀವಿಯೂ ಆರೋಗ್ಯವಾಗಿ, ಸದೃಢವಾಗಿ ಇರಬೇಕೆರಂದರೆ ಒಳ್ಳೆಯ ಪರಿಸರದ ಅವಶ್ಯಕತೆ ಇದೆ, ಅದಕ್ಕಾಗಿ ಗಿಡಗಳನ್ನು ಬೆಳಸಿ, ಪರಿಸರವನ್ನು ರಕ್ಷಿಸುವದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಬೆಳಗಾವಿ ಜಿಲ್ಲೆ ಮಾಜಿ ಸೈನಿಕರ ಸಂಘಟನೆಗಳ ಮಹಾಒಕ್ಕೂಟ ಹಾಗೂ ಬೆಳಗಾವಿ ಜಿಲ್ಲೆ ಮಾಜಿ ಸೈನಿಕರ ಸಂಘಟನೆಗಳ ಮಹಾಒಕ್ಕೂಟ ಮಹಿಳಾ ಘಟಕದ ಸಂಯುಕ್ತ ಆಶ್ರಯದಲ್ಲಿ ಈ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಗಿದ್ದು, ಈ ಕಾರ್ಯಕ್ರಮಕ್ಕೆ ಸಂಘಟನೆ ಜಿಲ್ಲಾ ಅಧ್ಯಕ್ಷರಾದ ಜಗದೀಶ ಪೂಜೇರಿ ಅಧ್ಯಕ್ಷೆತೆ ಹಾಗೂ ರಮೇಶ ಚೌಗಲಾ ಅವರ ಗೌರವ ಉಪಸ್ಥಿತಿ ಇದ್ದು, ತಮ್ಮ ಜಿಲ್ಲಾ ಮಾಜಿ ಸೈನಿಕರ ಸಂಘಟನೆಗಳ ಮಹಾಒಕ್ಕೂಟದ ಸದಸ್ಯರ ಸಹಭಾಗೀತ್ವ ಕಾರ್ಯಕ್ರಮಕ್ಕೆ ಶೋಭೆ ತಂದಿತ್ತು.

ಇನ್ನು ಈ ಕಾರ್ಯಕ್ರಮಕ್ಕೆ ವಿಶೇಷ ಮುಖ್ಯ ಅಥಿತಿಗಳಾಗಿ ಆಗಮಿಸಿದ ನಾಗೇಶ ಯಡಾಲ, ಡೆಪ್ಯೂಟಿ ಕಮಾಂಡರ್ ಎಸಡಿಆರಎಫ್, ಬೆಳಗಾವಿ, ಚುನಪ್ಪ ಪೂಜಾರಿ, ರೈತ ಮುಖಂಡರು, ಹೋರಾಟಗಾರರು, ಪ್ರೇಮ ಚೌಗುಲಾ, ಸಾಮಾಜಿಕ ಹೋರಾಟಗಾರರು ಪರಿಸರದ ಮಹತ್ವದ ಹಾಗೂ ಅದನ್ನು ನಾವು ಹೇಗೆ ಕಾಡಿಕೊಂಡು ಹೋಗಬೇಕು ಎಂಬುದರ ಕುರಿತಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದರು. ಕೇವಲ ಪರಿಸರ ದಿನವಷ್ಟೇ ಗಿಡ ನೆಟ್ಟರೆ ಆಗದು, ವರ್ಷ ಪೂರ್ತಿ ನಾವು ಪರಿಸರವನ್ನು ಕಾಯುವಂತ ಬೆಳೆಸುವಂತಹ ಕಾರ್ಯದಲ್ಲಿ ಇರಬೇಕು ಎಂದರು..

ಇದೇ ಸಂದರ್ಭದಲ್ಲಿ ಈ ವಿಶೇಷ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ಸತ್ಕರಿಸಲಾಗಿದ್ದು, ಕಾರ್ಯಕ್ರಮದಲ್ಲಿ ಭಾಗಿಯಾದ ಹಾಗೂ ಜಿಲ್ಲಾ ಕಚೇರಿಯ ಆವರದಲ್ಲಿ ಇರುವ ಸಾರ್ವಜನಿಕರಿಗೆ ನಾನಾ ವಿಧದ ಗಿಡಗಳನ್ನು ವಿತರಣೆ ಮಾಡಿ ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು..

 

Leave a Reply

Your email address will not be published. Required fields are marked *

error: Content is protected !!