23/05/2026
IMG-20260521-WA0004

ಬೆಳಗಾವಿ-22: ಇದೇ ಮೇ ೨೮ ರಂದು ಮುಸ್ಲೀಂ ಬಕ್ರಿದ್ ಹಬ್ಬದಂದು, ಸಂಫೂರ್ಣವಾಗಿ ಜಿಲ್ಲಾಧ್ಯಂತ ಕಸಾಯಿಖಾನೆಗಳನ್ನು ಬಂದ ಮಾಡುವಂತೆ ಆಗ್ರಹಿಸಿ, ಶ್ರೀ ರಾಮ ಸೇನೆಯ ಕಾರ್ಯಕರ್ತರು ಗುರುವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಶ್ರೀ ರಾಮ ಸೇನೆಯ ಉಕ ಭಾಗದ ರಾಜ್ಯಾಧ್ಯಕ್ಷ ರವಿಕುಮಾರ ಕೋಕಿತಕರ ಅವರ ನೇತ್ರತ್ವದಲ್ಲಿ ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ ಅಕ್ರಮವಾಗಿ ಕಸಾಯಿಖಾನೆಗಳಿಗೆ ಗೋವುಗಳನ್ನು ಸಾಗಾಟ ಮಾಡಿ ಅವುಗಳು ಹತ್ಯೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಅಲ್ಲದೆ ಇದೇ ಮೇ ೨೮ ರಂದು ಮುಸ್ಲೀಂಮರ ಹಬ್ಬ ಬಕ್ರಿದ್ ಹಬ್ಬದಂದು ಸಾಕಷ್ಟು ಪ್ರಾಣಿಗಳ ಬಲಿ ಮಾಡಲಾಗುತ್ತದೆ. ಬಕ್ರಿದ್ ಕ್ಕೆ ಪ್ರಾಣಿಗಳನ್ನು ಸಾಗಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧ ಮಾಡಬೇಕೆಂದು ಜಿಲ್ಲಾಧಿಕಾರಿಗಳ ಕಛೇರಿ ಎದರು ಪ್ರತಿಭಟನೆ ನಡೆಸಿದರು.
ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪ್ರಾಣಿಗಳನ್ನು ಅಕ್ರಮವಾಗಿ ಕಸಾಯಿಖಾನೆಗಳಿಗೆ ಸಾಗಾಟ ಮಾಡಿ ಅವುಗಳನ್ನು ಹತ್ಯೆ ಮಾಡಲಾಗುತ್ತಿದೆ. ಇದೇ 28 ಮೇ ರಂದು ನಡೆಯಲಿರುವ ಬಕ್ರೀದ್ ಹಬ್ಬದಂದು ಅಷ್ಟೇ ಅಲ್ಲ ಜಿಲ್ಲಾಧ್ಯಂತ ಸಂಪೂರ್ಣವಾಗಿ ಪ್ರಾಣಿಗಳ ಹತ್ಯೆ ನಿಷೇಧಿಸಬೇಕು, ಹಿಂದೂ ಧರ್ಮದಲ್ಲಿ ಗೋ ಮಾತೆಯನ್ನು ಪೂಜೆ ಮಾಡುವ ನಾವುಗಳು ನಮ್ಮ ಕಣ್ಣುಮುಂದೆಯೇ ಗೋ ಮಾತೆಯ ಹತ್ಯೆ ಮಾಡುವುದನ್ನು ನೋಡಿ ಸುಮ್ಮನೆ ಕುಳಿತು ಕೊಳ್ಳುವುದಕ್ಕೆ ಯಾಗುವುದಿಲ್ಲ, ಇನ್ನು ಮುಂದೆ ಅಕ್ರಮವಾಗಿ ಪ್ರಾಣಿಗಳನ್ನು ಅಕ್ರಮವಾಗಿ ಕಸಾಯಿಖಾನೆಗಳಿಗೆ ಸಾಗಾಟ ಮಾಡಿ ಹತ್ಯೆ ಮಾಡುವವರ ವಿರುದ್ದ ಅಲ್ಲೇ ತಕ್ಕ ಪಾಠ ಕಲಿಸುತ್ತೇವೆ ಎಂದರು.
ಭಾರತ ಸಂವಿಧಾನದ ಕಲಂ 48 ರ ಪ್ರಕಾರ ರಾಜ್ಯವು ಕೃಷಿ ಮತ್ತು ಪಶುಸಂಗೋಪನೆಯನ್ನು ವೈಜ್ಞಾನಿಕ ರೀತಿಯಲ್ಲಿ ಸಂಘಟಿಸಿ, ಗೋವುಗಳು ಹಾಗೂ ಕೃಷಿಗೆ ಮತ್ತು ಹಾಲು ಉತ್ಪಾದನೆಗೆ ಉಪಯುಕ್ತ ಜಾನುವಾರುಗಳ ಸಂರಕ್ಷಣೆ ಹಾಗೂ ಹತ್ಯೆ ನಿಷೇಧಿಸಲು ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಲಾಗಿದೆ. ಅದರಂತೆ ಕೂಡಲೇ ಸಂಪೂರ್ಣವಾಗಿ ಗೋ ಹತ್ಯೆ ನಿಷೇಧಿಸಬೇಕು ಎಂದು ಶ್ರೀ ರಾಮ ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಳ್ಳುವುದರ ಮೂಲಕ ಕೆಲವೊಂದು ನಿಯಮಗಳನ್ನು ಜಾರಿ ಮಾಡಬೇಕೆಂದು ಒತ್ತಾಯಿಸಿದರು.
ಬಾಕ್ಸ್ :
ನಿಮಯಗಳು : ಜಿಲ್ಲೆಯ ಎಲ್ಲಾ ಚೆಕ್ಪೋಸ್ಟ್ ಗಳು, ಹಾಗೂ ಗಡಿಭಾಗದಲ್ಲಿ ಮತ್ತು ಪ್ರಮುಖ ರಸ್ತೆಗಳಲ್ಲಿ ತಪಾಸಣೆ ವ್ಯವಸ್ಥೆ ಕಲ್ಪಿಸಬೇಕು.
ಹೈನು ಕಾರಿಕೆಗೆ ಗೋವುಗಳನ್ನು ಸಾಗಿಸುವ ವಾಹನಗಳ ದಾಖಲೆಗಳು, ಪರವಾನಗಿ, ಪಶುವೈದ್ಯಕೀಯ ಕಾನೂನುಬದ್ಧತೆ ಪ್ರಮಾಣಪತ್ರ ಹಾಗೂ ಸಾಗಾಣಿಕೆಯ ಪತ್ರ ಹೊಂದಿರಬೇಕು.
ಅನಧಿಕೃತ ಕಸಾಯಿಖಾನೆಗಳು, ಅನುಮಾನಾಸ್ಪದ ಗೋದಾಮುಗಳು ಹಾಗೂ ಖಾಸಗಿ ಸ್ಥಳಗಳ ಮೇಲೆ ವಿಶೇಷ ದಾಳಿ ಮಾಡಿ ಗೋ ಹಂತಕರನ್ನು ಬಂಧಿಸಬೇಕು.
ಜಿಲ್ಲಾಧ್ಯಂತ ಸಂಪೂರರ್ಣಾವಾಗಿ ಗೋ ಹತ್ಯೆಯನ್ನು ನಿಷೇಧ ಮಾಡಬೇಕು
ಒಂದು ವೇಳೆ ಜಿಲ್ಲೆಯಲ್ಲಿ ಎಲ್ಲಾದರು ಗೋವುಗಳು ಹತ್ಯೆ ಮಾಡಿದಲ್ಲಿ ಕಸಾಯಿಖಾನೆಯ ವಿರುದ್ದ ಹಾಗೂ ಜಿಲ್ಲಾಡಳಿತದ ವಿರುದ್ದ ಉಗ್ರವಾಗಿ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಈ ವೇಳೆ ಶ್ರೀ ರಾಮ ಸೇನೆ ಉಕ ಭಾಗದ ರಾಜ್ಯಾಧ್ಯಕ್ಷರ ರವಿಕುಮಾರ ಕೋಕಿತರ, ವಿನಯ ಅಂಗೊಳ್ಳಿ, ಕಾರ್ಯದರ್ಶಿಗಳು, ಪದಾಧಿಕಾರಿಗಳು, ಸೇರಿದಂತೆ ಹಲವರು ಕಾರ್ಯಕರ್ತರು ಉಪಸ್ಥಿತಿರಿದ್ದರು.

Leave a Reply

Your email address will not be published. Required fields are marked *

error: Content is protected !!