10/06/2026
IMG-20260522-WA0025

ಬೆಳಗಾವಿ-22:- ಅಯೋಧ್ಯಾ ನಗರದಲ್ಲಿ 21 ರಂದು ಜರುಗಿದ ಗುರುಪುಷ್ಯಾಮೃತ ಯೋಗ ದಿನದ ನಿಮಿತ್ಯ ಸರ್ವ ಲೋಕಸೇವಾ ಫೌಂಡೇಶನ ವತಿಯಿಂದ ಅರಳಿ, ಆಲ, ಬಿಲ್ವ ಪತ್ರೆಯ ಸಸಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ವೀರೇಶ ಬಸಯ್ಯಾ ಹಿರೇಮಠ ಇವರ ನೇತೃತ್ವದಲ್ಲಿ ನೆಡಲಾಯಿತು.

ಈ ಸಂದರ್ಭದಲ್ಲಿ ಅವರು ಮಾತನಾಡಿ ಈ ಸಸಿಗಳನ್ನು ಪರಿಸರದಲ್ಲಿ ನೆಡುವುದರಿಂದ ಧಾರ್ಮಿಕ ಭಾವನೆ, ಆರ್ಥಿಕ ವೃದ್ದಿ, ಪ್ರಾಣವಾಯು ಎಂದೇ ಸಸಿಗಳು ಖ್ಯಾತಿ ಪಡೆದಿವೆ ಇಂತಹ ಸಸಿಗಳು ಸುಸ್ಥಿರ ಅಭಿವೃದ್ಧಿ ಕಾಪಾಡುವುದರಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿವೆ ಎಂದು ಅವರು ತಿಳಿಸಿದರು.

ಈ ಸಂಧರ್ಭದಲ್ಲಿ ಸಂಸ್ಥೆಯ ಸದಸ್ಯರಾದ ಸುಭಾಷ ಪಾಟೀಲ, ಗೌರವ ಭೋಸಲೆ, ಗೌರೀಶ ಹಿರೇಮಠ, ಗುರುರಾಜ ಹಿರೇಮಠ  ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!