ಬೆಳಗಾವಿ-20: ಬೆಳಗಾವಿ ಗ್ರಾಮೀಣ ಕ್ಷೇತ್ರದ ಪಂತ ಬಾಳೇಕುಂದ್ರಿ ಗ್ರಾಮದ ಪಂತನಗರದಲ್ಲಿ ಸುಮಾರು ₹3.50 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಡಾಂಬರ್, ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ಕಾಮಗಾರಿಗಳಿಗೆ ಬುಧವಾರ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು.
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ವಿಶೇಷ ಪ್ರಯತ್ನದಿಂದ ಈ ಮಹತ್ವದ ಕಾಮಗಾರಿಗಳಿಗೆ ಅನುದಾನ ಮಂಜೂರಾಗಿದ್ದು, ಸ್ಥಳೀಯರಲ್ಲಿ ಸಂತಸ ಮೂಡಿಸಿದೆ.
ಈ ಸಂದರ್ಭದಲ್ಲಿ ನಾಗೇಶ್ ದೇಸಾಯಿ, ಅಪ್ಸರ್ ಜಮಾದಾರ್, ಬಸವರಾಜ ಮ್ಯಾಗೋಟಿ, ಸಣ್ಣಯಲ್ಲಪ್ಪ ತಳವಾರ, ಸದಾಶಿವ ಹಿಟ್ಟಣಗಿ, ಮಹಾದೇವ್ ಕರಗಣ್ಣವರ, ಎಮ್.ಆಯ್. ಪಾಟೀಲ, ಈರಣ್ಣ ಕೋಟಿ, ಮಲಗೌಡ ಕೊಡ್ಲಿ, ಕಲ್ಲಪ್ಪ ದೇಯಣ್ಣವರ್, ಬಿ.ಆಯ್. ತೆಣಗಿ, ಸುರೇಶ್ ಬರಗಾಳಿ, ಸಾಯಿರಾಮ್ ಜಂಬಗಿ, ಪ್ರೇಮ್ ಕೋಲಕಾರ ಸೇರಿದಂತೆ ಪ್ರಮುಖ ಪಕ್ಷದ ಮುಖಂಡರು, ಕಾರ್ಯಕರ್ತರು, ಊರಿನ ಪ್ರಮುಖರು ಹಾಗೂ ಮಹಿಳೆಯರು ಹಾಜರಿದ್ದರು.
