
brp_mask:0;
brp_del_th:null;
brp_del_sen:null;
delta:null;
module: photo;hw-remosaic: false;touch: (-1.0, -1.0);sceneMode: 2;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 46;
ಬೆಳಗಾವಿ-18 : ರಾಜ್ಯದಲ್ಲಿ ಮುಂಗಾರು ಹಂಗಾಮು ಪ್ರಾರಂಭ ವಾಗಿರುವುದರಿಂದ. ರೈತರಿಗೆ ಎಫ್ ಆರ್ ಡಿ ಮುಖಾಂತರ ರಸಗೊಬ್ಬರ ವಿತರಿಸುವ ಆದೇಶವನ್ನು ಕೈ ಬಿಡುವಂತೆ ಆಗ್ರಹಿಸಿ, ಭಾರತೀಯ ಕೃಷಿಕ ಸಮಾಜ ಸಂಘಟನೆಯ ರಾಜ್ಯಾಧ್ಯಕ್ಷ ಸಿದ್ದಗೌಡ ಮೋದಗಿ ಅವರ ನೇತ್ರತ್ವದಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆಯನ್ನು ನಡೆಸಿದರು.
ಸೋಮವಾರ ರೈತ ಸಂಘಟನೆ ಮುಖಂಡರು ಕಾರ್ಯಕರ್ತರು ಗಮಾವಣೆಗೊಂಡು, ರೈತರಿಗೆ ಯಾಗುತ್ತಿರುವ ಸಮಸ್ಯೆಗಳು ಹಾಗೂ ಏಫ್ ಆರ್ ಡಿ ಅಂಡಿಯಲ್ಲಿ ರಸಗೊಬ್ಬರ ವಿತರಣೆಯಲ್ಲಿ ಸಾಕಷ್ಟು ತೊಂದರೆ ಯಾಗುತ್ತಿದ್ದು, ಕೇಂದ್ರ ಸರ್ಕಾರ 2026-27 ನೇ ಸಾಲಿನ (MSP) ಕನಿಷ್ಠ ಬೆಂಬಲ ಬೆಲೆ ಮರುಪರೀಶಿಲಿಸಬೇಕೆಂದು ಜಿಲ್ಲಾಧಿಕಾರಿಗಳ ಕಛೇರಿಯ ಎದರು ಪ್ರತಿಭಟನೆಯ ಮೂಲಕ ರಾಜ್ಯ ಕೇಂದ್ರ ಸರ್ರ್ಕಾರಕ್ಕೆ ಮನವಿ ಮಾಡಿಕೊಂಡರು.
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಬಳಿಕ ರೈತ ಸಂಘಟನೆಯ ರಾಜ್ಯಾಧ್ಯಕ್ಷ ಸಿದ್ದಗೌಡ ಮೋದಗಿ ಅವರು ಮಾತನಾಡಿ, ಪ್ರಸಕ್ತ ಸಾಲಿನ 2026-27 ನೇ, ಈ ವರ್ಷದ ಮುಂಗಾರು ವಾಡಿಕೆಗಿಂತ. 15 ದಿನಗಳ ಮುಂಚಿತವಾಗಿ ಮುಂಗಾರು ಪ್ರವೇಶದ ಬಗ್ಗೆ ಸರ್ಕಾರದ ಹವಾಮಾನ ಇಲಾಖೆ ಮುನೂಚನೆ ನೀಡಿದೆ. ಹಾಗಾಗಿ ಸದರಿ ಹಂಗಾಮಿನಲ್ಲಿ ರೈತರಿಗೆ ಗುಣಮಟ್ಟದ ಬೀಜ, ರಸಗೊಬ್ಬರ, ಕ್ರಿಮಿನಾಶಕಗಳು ಮತ್ತು ಕೃಷಿಯೇತರ ಚಟುವಟಿಗಳಿಗೆ ಅವಶ್ಯವಾದ ಸಲಕರದ ಮತ್ತು ಸಾಮಾಗ್ರಿಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು ಮತ್ತು ಮಳೆಗಾಲದಲ್ಲಿ ಉಂಟಾದ ಮಹಾಪೂರ, ಅತಿವೃಷ್ಟಿ, ಅನಾವೃಷ್ಟಿಯಿಂದ ನೈಸರ್ಗಿಕ ವಿಕೋಪಕ್ಕೆ ರೈತರ ಆಸ್ತಿ-ಪಾಸ್ತಿ ಹಾನಿಯಾಗದಂತೆ ಮುನ್ನೆಚ್ಚರಿಕಾ ಕ್ರಮ ವಹಿಸುವ ಕುರಿತು ಈ ಕೆಳಗಿನ ಬೇಡಿಕೆಗಳನ್ನು ಈಡೇರಿಬೇಕೆಂದು ಆಗ್ರಹಿಸಿದರು.
ರೈತರ ಬೇಡಿಕೆಗಳು : ಪ್ರಸಕ್ತ ಹಂಗಾಮಿನಲ್ಲಿ ಎಫ್ ಆಯ್ ಡಿ ಮೂಲಕ ರಸಗೊಬ್ಬರ ಪೂರೈಸುವ ಮತ್ತು ಪರಿಮಿತಿ ಆದೇಶವನ್ನು ತಕ್ಷಣ ಕೈಬಿಟ್ಟು.
ರೈತರಿಗೆ ಬೇಕಾಗುವಷ್ಟು ಬೇಕಾಗುವಷ್ಟು ಪೂರೈಸಬೇಕು. ರೈತರು ಖರೀದಿಸಿದ ಸಾಮಾಗ್ರಿಗಳಿಗೆ ಹೆಚ್ಚುವರಿ ಹಣ ಪಡೆಯವದನ್ನು ತಡೆಯಬೇಕು ಮತ್ತು ರಶೀದಿಕೊಡುವ ವ್ಯವಸ್ತೆಯನ್ನು ಕಡ್ಡಾಯಗೊಳಿಸಬೇಕು.
ಕೇಂದ್ರ ಸರ್ಕಾರದ ಪ್ರಸಕ್ತ ಸಾಲಿನ 2026-27 ಸಾಲಿನ (MSP) ಕೃಷಿ ಉತ್ಪನ್ನಗಳ “ಕನಿಷ್ಟ ಬೆಂಬಲ ಬೆಲೆ” ಮರುಪರಿಷ್ಠರಿಸಿ, ದಿನಮಾನಸ ಹಣದುಬ್ಬರ ತಕ್ಕಂತೆ ಹೆಚ್ಚಿಸಬೇಕು.
ರೈತರಿಗೆ ಕೃಷಿ ಚಟುವಟಿಗಳಿಗೆ ಅವಶ್ಯಕತೆಗೆ ತಕ್ಕಂತೆ ಡಿಸೇಲ್ ಕಡಿಮೆ ದರದಲ್ಲಿ ಲಭ್ಯವಿರಬೇಕು ಮತ್ತು ಬೇಡಿಕೆಗನುಗುಣವಾಗಿ ರಿಯಾಯತಿ ದರದಲ್ಲಿ ಪೂರೈಸಬೇಕು.
ಈ ವೇಳೆ ದುಂಡನಗೌಡ ಪಾಟೀಲ್, ಮಲ್ಲಿಕಾರ್ಜುನ ದೊಂಗರಗಾವಿ, ಮಲ್ಲಿಕಾರ್ಜುನ್ ಪಾಟಿಲ್, ರಾಮನಗೌಡ ಪಾಟೀಲ, ಶಿವಶಂಕರಪ್ಪ ಪೂಜಾರ, ಈರಪ್ಪ ಪಟ್ಟಿಹಾಳ, ಬಸಪ್ಪ ಅಂಗಡಿ ಸೇರಿದಂತೆ ಇತರರು ಉಪಸ್ಥಿತಿರಿದ್ದರು.
