ಬೆಳಗಾವಿ-02: ನಗರದಾದ್ಯಂತ ಮಾ.3ರಂದು ನಡೆಯುವ ಹೋಳಿ ಹುಣ್ಣಿಮೆಯ ಸಂಭ್ರಮದ ಬಣ್ಣದಾಟಕ್ಕೆ ಕುಂದಾನಗರಿ ಸಜ್ಜಾಗಿದೆ.
ಗಡಿನಾಡು ಬೆಳಗಾವಿಯಲ್ಲಿ ಪ್ರತಿ ಹಬ್ಬವನ್ನೂ ವಿಶಿಷ್ಟವಾಗಿ ಅದ್ಧೂರಿಯಿಂದ ಆಚರಿಸಲಾಗುತ್ತಿದೆ. ಇದರಲ್ಲಿ ಹೋಳಿ ಹುಣ್ಣಿಮೆಯೂ ಒಂದು. ಹುಣ್ಣಿಮೆ ಮುನ್ನಾ ದಿನವಾದ ಸೋಮವಾರ ರಾತ್ರಿ ಕಾಮಣ್ಣನ ಮೂರ್ತಿ ದಹಿಸಿದ ಜನರು, ಮಂಗಳವಾರ ಸಂತಸದಿಂದ ಓಕುಳಿ ಹಬ್ಬದ ಬಣ್ಣವಾಡಲಿದ್ದಾರೆ. ಮಕ್ಕಳು, ಯುವಕ ಯುವತಿಯರು, ಮಹಿಳೆಯರು ಸೇರಿದಂತ ಎಲ್ಲ ವಯೋಮಾನದವರೂ ಬಣ್ಣದೋಕುಳಿಯಲ್ಲಿ ಮಿಂದೇಳಲಿದ್ದಾರೆ.
ಈ ಸಂಭ್ರಮವನ್ನು ನೋಡಲು ಎರಡು ಕಣ್ಣುಗಳು ಸಾಲದು, ಪ್ರತಿ ವರ್ಷದಂತೆ ನಗರದ ತಿಳಕವಾಡಿಯ ಲೀಲೆ ಮೈದಾನದಲ್ಲಿ ಹೋಳಿ ಹಬ್ಬದ ಸಂಭ್ರಮಾಚರಣೆಗೆ ಪುರುಷ ಹಾಗೂ ಮಹಿಳಾ ಎರಡು ಪ್ರತ್ಯೇಕವಾಗಿ ವಿಭಾಗಗಳನ್ನಾಗಿ ಮಾಡಿ, ಡಿಜೆ ಸೌಂಡ್ ಗೆ ಸ್ಟೆಫ್ ಹಾಕುವುದರ ಮೂಲಕ ವಿವಿಧ ಬಗೆಯ ಬಣ್ಣಗಳನ್ನು ಎರಚ್ಚಿಕೊಂಡು ಸಂಭ್ರಮಾಚರಣೆ ಆಚರಿಸಲಿದ್ದಾರೆ.
ಮಾರುಕಟ್ಟೆ ಪ್ರದೇಶಕ್ಕೆ ಬಗೆಬಗೆಯ ವಿನ್ಯಾಸಗಳ ಪಿಚಕಾರಿಗಳು, ಮಕ್ಕಳು ಮತ್ತು ಯುವಕರು ಬಳಸುವ ಮುಖವಾಡಗಳು ಲಗ್ಗೆ ಇಟ್ಟಿವೆ. ಪಿಚಕಾರಿಗಳ ದರ 20 ರಿಂದ 1,350 ರ ವರೆಗೆ ಇದ್ದರೆ, ಮುಖವಾಡಗಳು 100 ರಿಂದ 250 ರ ವರೆಗೆ ಮಾರಾಟವಾಗುತ್ತವೆ. ಪ್ರತಿ ಪ್ಯಾಕೆಟ್ ಬಣ್ಣದ ಸರಾಸರಿ ದರ 10 ರಿಂದ 50, 80ರವರೆಗೆ ಇದೆ.
ಹೋಳಿ ಹಬ್ಬದಲ್ಲಿ ಬಾರಿಸುವ ಡಮರುಗಳಿಗೆ ಭಾರಿ ಬೇಡಿಕೆ ಇದೆ. ಸಣ್ಣ ಡಮರುಗಳಿಗೆ 350 ರಿಂದ
* ಹೋಳಿ ಹಬ್ಬದ ಅಂಗವಾಗಿ ಮಾರುಕಟ್ಟೆ ಬಗೆಬಗೆಯ ಡಮರು, ಹಲಗೆಗಳು ಲಗ್ಗೆ ಇಟ್ಟಿವೆ.
ಮಧ್ಯಮ ಪ್ರಮಾಣದ ವರೆಗೆ 1200 ರೂ. ಗಳ ವರೆಗೆ ಇವೇ ಬೆಲೆಯನ್ನು ಲೆಕ್ಕಿಸದೆ ಕರಿದಿಯಲ್ಲಿ ತೊಡಗಿದ ಜನತೆಯೂ ಬಣ್ಣದೋಕುಳಿಯ ಹಬ್ಬಕ್ಕೆ ಬೇಕಾಗಿರುವ ವಸ್ತುಗಳ ಕರಿದಿಯಲ್ಲಿ ಬಿಜಿಯಾಗಿದ್ದಾರೆ.
ಹೋಳಿ ಹಬ್ಬದ ಸಂಭ್ರಮಾಚರಣೆಯ ವೇಳೆ ಯಾವುದು ಅಹಿತಕರ ಘಟನೆಗಳು ನಡೆಯದಂತೆ ನಗರಾಧ್ಯಂತ ಪ್ರಮುಖ ಸ್ಥಳಗಳಲ್ಲಿ ಪೊಲೀಸರು ಭಾರಿ ಕಟ್ಟೆಚ್ಚರ ವಹಿಸಿ ಬಂದೂಬಸ್ತ್ ಮಾಡಿಕೊಂಡಿದ್ದಾರೆ.
ಒಟ್ಟರೆಯಾಗಿ ಈ ಬಾರಿ ಬೆಳಗಾವಿ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲೂ ವಿಜೃಂಭಣೆಯಿಂದ ಹೋಳಿ ಹಬ್ಬವನ್ನು ಆಚರಣೆ ಜನತೆಯು ಸಿದ್ಧತೆಗಳನ್ನು ಮಾಡಿಕೊಂಡಿದೆ.
ಈ ಬಾರಿಯು ಜತೆಯು ಹಬ್ಬಕ್ಕೆ ಬೇಕಾಗಿರುವ ವಸ್ತುಗಳ ಖರೀದಿ ಮಾಡುವುದಕ್ಕೆ ಮುಗಿಬೀಳುತ್ತಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ವ್ಯಾಪಾರ ಹೆಚ್ಚಾಗುವ ಸಾಧ್ಯತೆ ಇದೆ.
