24/04/2026

ಬೆಳಗಾವಿ-22: ನಗರ ಮಹಾಂತೇಶ್ ನಗರದಲ್ಲಿ ನೂತನ ಶ್ರೀ ಲಕ್ಷ್ಮೀ ವೆಂಕಟೇಶ್ವರ (ಎಸ್.ಎಲ್.ವಿ) ಫೌಂಡೇಶನ್ ಡಿಸಿಪಿ ನಾರಾಯಣ ಭರಮನಿ ಹಾಗೂ ಗಣ್ಯರು ಉದ್ಘಾಟಿಸಿದರು.

ಈ ವೇಳೆ ಬೆಳಗಾವಿ ಡಿಸಿಪಿ ನಾರಾಯಣ ವಿ. ಭರಮನಿ ಅವರು ಮಾತನಾಡಿ, ಸಮಾಜದ ಪ್ರಗತಿಗಾಗಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ಫೌಂಡೇಶನ್ ಆರಂಭಗೊಂಡಿರುವುದು ಸಂತಸವಾಗಿದೆ. ಮುಂದಿನ ದಿನಗಳಲ್ಲಿ ಒಳ್ಳೆಯ ರೀತಿಯಲ್ಲಿ ನಿಮ್ಮ ಪೌಂಡೇಶನ್ ದಿಂದ ಮಹತ್ತರ ಕಾರ್ಯಗಳು ನಡೆಯಲಿ, ಆ ಕೆಲಸಗಳ ಮುಖಾಂತರ ದೊಡ್ಡ ಪ್ರಮಾಣದಲ್ಲಿ ನಿಮ್ಮ ಫೌಂಡೇಶನ್ ಬೆಳೆಯಲಿ ಎಂದು ಶುಭಾಶಯ ತಿಳಿಸಿದರು.

ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಧನಾತ್ಮಕ ಬದಲಾವಣೆ ಕಂಡುಕೊಳ್ಳಬೇಕು. ಮಹಿಳಾ ಸಬಲೀಕರಣ ಜೊತೆಗೆ ಮಕ್ಕಳಿಗೆ ಉತ್ತಮ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.

ಶ್ರೀ ಲಕ್ಷ್ಮೀ ವೆಂಕಟೇಶ್ವರ ( ಎಸ್.ಎಲ್.ವಿ) ಫೌಂಡೇಶನ್ ಅಧ್ಯಕ್ಷರಾದ ಪ್ರಕಾಶ ಸೋನವಾಲ್ಕರ್‌ ಅವರು ಮಾತನಾಡಿ, ಶಿಕ್ಷಣ, ಸಾಮಾಜಿಕ ಹಾಗೂ ಅಭಿವೃದ್ಧಿ ಕಾರ್ಯಗಳ ಮೂಲಕ ಸಮಾಜ ಸೇವೆ ಮಾಡುವ ಉದ್ದೇಶದಿಂದ ಈ ಫೌಂಡೇಶನ್ ಸ್ಥಾಪಿಸಲಾಗಿದೆ. ಶಿಕ್ಷಣಕ್ಕೆ ಹೆಚ್ಚಿನ ಉತ್ತೇಜನ ನೀಡುವುದು ಮತ್ತು ಸಮಾಜದ ಅಭಿವೃದ್ಧಿಗೆ ಸಹಾಯಕವಾಗುವ ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಲಕ್ಷ್ಮೀ ಸೋನವಾಲ್ಕರ್, ಡಿಸಿಪಿ ಎನ್.ವಿ. ಭರಮನಿ, ಟಿಪ್ಪೇಸ್ವಾಮಿ, ಡಾ. ಗಿರೀಶ್ ಕೆ. ಸೋನವಾಲ್ಕರ್, ಕಾಂತು ಜಾಲಿಬೇರಿ, ಸಂಜಯ್ ಲಾಧಾಡ್, ಎಸ್.ಎ. ಅರಕೇರಿ, ಬಸವರಾಜ್ ಗಣಿ, ರಾಜೇಂದ್ರ ಪಾಟೀಲ್, ಸಿದ್ದಪ್ಪ ಶಬನ್ನವರ, ರವಿ ಜುಗನ್ನವರ, ಸತೀಶ್ ಮುಳ್ಳೂರು, ಕಡಣ್ಣ ಜೈನ್, ರಾಜು ಬರಕೋಲ್ ಹಾಗೂ ಎಂ.ಪಿ. ಜುಗನ್ನವರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಫೌಂಡೇಶನ್ ಸದಸ್ಯರು ಕಾರ್ಯಕ್ರಮಕ್ಕೆ ಆಗಮಿಸಿ ಆಶೀರ್ವಾದ ಮತ್ತು ಪ್ರೋತ್ಸಾಹ ನೀಡಿದ ಎಲ್ಲಾ ಗಣ್ಯರಿಗೆ ಹಾಗೂ ಹಿತೈಷಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಲಕ್ಷ್ಮೀ ವೆಂಕಟೇಶ್ವರ (ಎಸ್.ಎಲ್.ವಿ) ಫೌಂಡೇಶನ್
ಮಹಾಂತೇಶ್ ನಗರ, ಬೆಳಗಾವಿ

Leave a Reply

Your email address will not be published. Required fields are marked *

error: Content is protected !!