ಬೆಳಗಾವಿ -25:ಭಾರತದಾದ್ಯಂತ ಸಿ ಆರ್ ಪಿ ಎಫ್ ಸಿಬ್ಬಂದಿಯ ಮಕ್ಕಳ ಮತ್ತು ಕುಟುಂಬಗಳಿಗೆ ಸಮಗ್ರ ಶೈಕ್ಷಣಿಕ ಬೆಂಬಲ ವಿದ್ಯಾರ್ಥಿ ವೇತನಗಳು ಮತ್ತು ವೃತ್ತಿ ಮಾರ್ಗದರ್ಶನವನ್ನು ಒದಗಿಸಲು ಆಕಾಶ ಎಜುಕೇಷನ್ ಸರ್ವೀಸ್ ಲಿಮಿಟೆಡ್ (ಎಇಎಸ್ಎಲ್ ) ಇತ್ತೀಚೆಗೆ ಕೇಂದ್ರ ಮೀಸಲು ಪೊಲೀಸ ಪಡೆ ಕುಟುಂಬ ಕಲ್ಯಾಣ ಸಂಘ (ಸಿಡಬ್ಲ್ಯ) ನೊಂದಿಗೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ.
ಭಾರತದಾದ್ಯಂತ ಎಇಎಸ್ಎಲ್ ಕೇಂದ್ರಗಳಲ್ಲಿ ದಾಖಲಾಗುವ ಸೇನಾ ವಿದ್ಯಾರ್ಥಿಗಳಿಗೆ ರಾಷ್ಟ್ರವ್ಯಪಿ ವಿದ್ಯಾರ್ಥಿ ವೇತನಗಳು ಮತ್ತು ವಿಶೇಷ ನಬಂಧನೆಗಳನ್ನು ಈ ಒಪ್ಪಂದ ಒಳಗೊಂಡಿದೆ.
ಆಕಾಶ ಎಜುಕೇಷನ್ ಸರ್ವೀಸ್ ಲಿಮಿಟೆಡ್ ನ ಎಚ್ ಒ ಡಿ ಮತ್ತು ಸಿಇಒ ರಾದ ಚಂದ್ರಶೇಖರ ರೆಡ್ಡಿ ಯವರು ಮಂಗಳವಾರ ಸುದ್ದಿಗೊಷ್ಠೀಯಲ್ಲಿ ಮಾತನಾಡಿ ಎಇಎಸ್ಎಲ್ ನಲ್ಲಿ ಶಿಕ್ಷಣವು ಉಜ್ವಲ ಭವಿಷ್ಯಕ್ಕೆ ಬಲವಾದ ಅಡಿಪಾಯವಾಗಿದೆ ಹಾಗೂ ಭಾರತೀಯ ಸೇನೆಯೊಂದಿಗೆ ಪಾಲುದಾರಿಕೆ ಪಾಲುದಾರಿಕೆಯು ಧೈರ್ಯಶಾಲಿ ಸೈನಿಕರ ತ್ಯಾಗಗಳನ್ನು ಗೌರವಿಸಲು ಅವರ ಕುಟುಂಬಗಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಮಾರ್ಗದರ್ಶನದೊಂದಿಗೆ ಸಬಲೀಕರಣಗೊಳಿಸಲು ನಮಗೆ ಅವಕಾಶ ನೀಡುತ್ತಿದೆ. ವಿದ್ಯಾರ್ಥಿ ವೇತನಗಳು ಮಾರ್ಗದರ್ಶನ ಸಮಾಲೋಚನೆ ಮೂಲಕ ವೀರರ ಮಕ್ಕಳು ತಮ್ಮ ಪೂರ್ಣ ಸಾಮರ್ಥ್ಯವನ್ನು ಸಾಧಿಸಲು ಮತ್ತು ಸಜ್ಜಾಗುವಂತೆ ಮಾಡುವ ಗುರಿ ಹೊಂದಿದೆವೆ ಎಂದು ತಿಳಿಸಿದರು.
