26/02/2026
IMG-20260225-WA0002

ಬೆಳಗಾವಿ-25 : ಇಲ್ಲಿನ ಮಹಾನರ ಪಾಲಿಕೆ‌ ವ್ಯಾಪ್ತಿಯಲ್ಲಿನ ಜನತೆಗೆ ಅನಕೂಲ ವಾಗುವ ನಿಟ್ಟಿನಲ್ಲಿ, ಪಾಲಿಕೆಯು ನೂತನ ಎರಡು ಅತ್ಯಾಧುನಿಕ ಮುಕ್ತಿ ವಾಹನಗಳನ್ನು, ಮಹಾಪೌರ ಮಂಗೇಶ್ ಪವಾರ್, ಉಪ ಮಹಾಪೌರ ವಾಣಿ ಜೋಷಿ, ಉತ್ತರ ಶಾಸಕ ಆಸೀಫ್ ಸೇಠ್, ಹಾಗೂ ದಕ್ಷಿಣ ಶಾಸಕರು ಅಭಯ ಪಾಟೀಲ ನೇತ್ರತ್ವದಲ್ಲಿ ಹಸಿರು ನಿಶಾನೆ ತೋರಿಸುವುದರ ಮೂಲಕ ಲೋಕಾರ್ಪಣೆ ಗೊಳಿಸಿದರು.

ನೂತನ ಎರಡು ಶವಗಾರ ವಾಹನಗಳನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ, ಬೆಳಗಾವಿ ಉತ್ತರ ಶಾಸಕ ಆಸೀಫ್ ಸೇಠ್ ಅವರು ಬೆಳಗಾವಿ ಮಹಾನಗರ ಪಾಲಿಕೆಯ ವತಿಯಿಂದ 2 ಅತ್ಯಾಧುನಿಕ ಮುಕ್ತಿವಾಹನ ಶವವಾಹಕಗಳನ್ನು ಖರೀದಿಸಲಾಗಿದೆ. ಮುಂಬರುವ ದಿನಗಳಲ್ಲಿ ಇನ್ನೆರಡು ವಾಹನಗಳನ್ನು ಖರೀದಿಸುವ ಚಿಂತನೆಯಿದೆ. ಅಧಿಕಾರಿಗಳು ಈಗಾಗಲೇ ಕೆಲಸ ನಿರ್ವಹಿಸುತ್ತಿದ್ದು, ಡೈರಿ ಮೆಂಟೆನ್ ಮಾಡಿ ವಾಹನಗಳನ್ನು ನಿರ್ವಹಿಸಬೇಕು. ಎಲ್ಲರೂ ಒಗ್ಗೂಡಿ ಬೆಳಗಾವಿಯ ಅಭಿವೃದ್ಧಿಗೆ ಶ್ರಮಿಸೋಣ ಎಂದು‌ ಹೇಳಿದರು.

ಮಹಾನಗರದಲ್ಲಿರುವ ಸಾರ್ವಜನಿಕರಿಗೆ ಶವ ಸಂಸ್ಥಾನದ ವೇಳೆ ಅನಕೂಲ ವಾಗುವಂತೆ‌, ದಕ್ಷಿಣ ಶಾಸಕ ಅಭಯ್ ಪಾಟೀಲ್ ಅವರ ಬೇಡಿಕೆಯಂತೆಯೇ ಇದೀಗ ಎರಡು‌ ನೂತನ ಶವ ಸಂಸ್ಕಾರ ವಾಹನಗಳನ್ನು ಲೋಕಾರ್ಪಣೆ ಮಾಡಲಾಗಿದೆ. ಹಾಗೂ ಮುಂದಿನ ದಿನಗಳಲ್ಲಿ ಎನ್ನು ಎರಡು ವಾಹನಗಳ ತರೆಸುವ ವಿಚಾರ ಮಾಡಲಾಗಿದೆ ಎಂದು ಶಾಸಕ ಆಸೀಫ್ ಸೇಠ್ ಹೇಳಿದರು.

ಕಳೆದ ಬಾರಿ ಶವ ಸಂಸ್ಥಾನದ ವಾಹನಗಳ ಎಂಜಿನ್ ಸೀಜ್ ಆಗಿದೆ. ಅದೇ ರೀತಿ ಮತ್ತೆ ಮರುಕಳಿಸಿದರೇ, ಅದಕ್ಕೆ ಪಾಲಿಕೆಯ ಅಧಿಕಾರಿಗಳೆ ನೇರ ನೀವೇ ಹೊಣೆಯಾಗಲಿದ್ದಾರೆ. ಹಾಗೂ ನಿಮ್ಮ ವೇತನದಲ್ಲೇ ಅವುಗಳನ್ನು ಕಡಿತಗೊಳಿಸಲಾಗುವುದು‌ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಈ ವೇಳೆ ಮಹಾಪೌರ ಮಂಗೇಶ್ ಪವಾರ್, ಉಪ ಮಹಾಪೌರ ವಾಣಿ ಜೋಷಿ, ಉತ್ತರ ಶಾಸಕ ಆಸೀಫ್ ಸೇರ್, ದಕ್ಷಿಣ ಶಾಸಕ ಅಭಯ್ ಪಾಟೀಲ್‌, ಆಯುಕ್ತರಾದ ಕಾರ್ತಿಕ್ ಎಂ., ಸೇರಿದಂತೆ ನಗರಸೇವಕರು ಅಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!