25/02/2026
IMG-20260224-WA0000

ಬೆಳಗಾವಿ-24: ಜಿಲ್ಲಾಡಳಿತ, ಮಹಾನಗರ ಪಾಲಿಕೆ ಬೆಳಗಾವಿ, ಪ್ರವಾಸೋದ್ಯಮ ಇಲಾಖೆ ವತಯಿಂದ ಫೆ.24 ರಂದು ನಡೆಯಲಿರುವ ಕನ್ನಡ ಹಬ್ಬ ಕಾರ್ಯಕ್ರಮವನ್ನು ಬೆಳಗಾವಿ ವಿವಿಧ ಕನ್ನಡಪರ ಸಂಘಟನೆಗಳು ಬಹಿಷ್ಕಾರ ಹಾಕಿ ಆಕ್ರೋಶ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗಳ ವಿರುದ್ದ ಪ್ರತಿಭಟನೆ ನಡೆಸಲಾಯಿತು.
ಸೋಮವಾರ ನಗರದಲ್ಲಿ ನಡೆದ ಸಭೆಯಲ್ಲಿ ಕರವೇ ಮುಖಂಡರು ಒಮ್ಮತದ ನಿರ್ಣಯ ಕೈಗೊಂಡರು. ಕನ್ನಡ ಹಬ್ಬ ಆಚರಣೆಗೆ ಸರಕಾರದಿಂದ ಅನುದಾನ ತರಲು ಕನ್ನಡಪರ ಸಂಘಟನೆಗಳು ಹೋರಾಟ ನಡೆಸಿ, ಅನುದಾನ ತಂದಿವೆ. ಆದರೆ ಜಿಲ್ಲಾಡಳಿತವು ಕನ್ನಡ ಹಬ್ಬದ ಕುರಿತು ಯಾರಿಗೂ ಮಾಹಿತಿ ನೀಡದೇ ಏಕಪಕ್ಷೀಯವಾಗಿ ನಿರ್ಧಾರಿಸಲಾಗಿದೆ ಕನ್ನಡಿಗರಿಗೆ ಅಪಮಾನ ಮಾಡುವಂತಾ ಕೆಲಸ ಕೈ ಹಾಕಿದೆ ಎಂದು ಜಿಲ್ಲಾಢಳಿತದ ವಿರುದ್ದ ಅಸಮಾಧಾನ ಹೋರ ಹಾಕಿದರು.
ಸರಕಾರದಿಂದ ಕನ್ನಡ ರಾಜ್ಯೋತ್ಸವ ಆಚರಣೆಗಾಗಿ ಸರಕಾರ 50 ಲಕ್ಷ ರೂ. ಅನುದಾನ ನೀಡಿತು. ಅದರಲ್ಲಿ 11 ಲಕ್ಷ ರೂ. ವೆಚ್ಚದಲ್ಲಿ ರಾಜ್ಯೋತ್ಸವ ಆಚರಿಸಲಾಗಿತ್ತು. ಉಳಿದ 39 ಲಕ್ಷ ರೂ. ಗಳಲ್ಲಿ ಕನ್ನಡ ಹಬ್ಬ ಆಚರಣೆಗೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿಕೊಂಡಿದೆ. ಆದರೆ ಪೂರ್ವಭಾವಿ ಸಭೆ ನಡೆಸದೇ ಕನ್ನಡಪರ ಸಂಘಟನೆಗಳ, ಕನಿಷ್ಠ ಪಕ್ಷ ಮಾಧ್ಯಮದವರ ಗಮನಕ್ಕೂ ತರದೇ ಏಕಪಕ್ಷೀಯವಾಗಿ ಕಾರ್ಯಕ್ರಮ ಆಯೋಜಿಸಿರುವುದು ಕನ್ನಡಪರ ಸಂಘಟನೆಗಳ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *

error: Content is protected !!