23/12/2024
IMG-20240209-WA0032

ಚಾಮರಾಜನಗರ-09: ಕರ್ನಾಟಕ ಸ್ಟೇಟ್ ರೈಫಲ್ ಅಸೋಸಿಯೇಷನ್ ಆಯೋಜಿಸಿದ್ದ ರಾಜ್ಯ ಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಚಾಮರಾಜನಗರದ ಇಮ್ರಾನ್ ಅಹ್ಮದ್ ರವರಿಗೆ ೩ ಬೆಳ್ಳಿ ೧ ಕಂಚಿನ ಪದಕ ಲಬಿಸಿದೆ.

ನ್ಯಾಷನಲ್ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾ, ಕರ್ನಾಟಕ ಒಲಂಪಿಕ್ ಅಸೋಸಿಯೇಷನ್, ಸ್ಟೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ, ಶೂಟಿಂಗ್ ರೇಂಜ್, ಬೆಂಗಳೂರಿನಲ್ಲಿ ೨೪ರ ಫೆಬ್ರವರಿ ೫ ಮತ್ತು ೬ ರಂದು ನಡೆದ
ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಕ್ಲಬ್‌ನಲ್ಲಿ ನಡೆದ ಶೂಟಿಂಗ್ ಸ್ಪರ್ಧೆಯಲ್ಲಿ ಚಾಮರಾಜನಗರದ ಯುವ ಶೂಟಿಂಗ್ ಕ್ರೀಡಾಪಟು ಇಮ್ರಾನ್ ಅಹ್ಮದ್ ಬೆಳ್ಳಿ ಮತ್ತು ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.

ಕರ್ನಾಟಕ ರೈಫಲ್ ಅಸೋಸಿಯೇಷನ್ ತರಬೇತಿದಾರ ಸುರೇಶ್ .ಎಂ ರವರು ಇಮ್ರಾನ್ ಅಹ್ಮದ್ ರವರಿಗೆ ಬೆಳ್ಳಿ ಮತ್ತು ಕಂಚಿನ ಪದಕವನ್ನು ನೀಡಿ ಗೌರವಿಸಿದರು.
ಅಗಷ್ಟ್ ತಿಂಗಳಿನಲ್ಲಿ ಚನೈನಲ್ಲಿ ನಡೆಯಲಿರುವ ದಕ್ಷಿಣವಲಯ ಚಾಪೀನ್ ಶಿಪ್ ಗೆ ಆಯ್ಕೆಯಾಗಿದ್ದಾರೆ.

ಇಮ್ರಾನ್ ಅಹ್ಮದ್ ಮಾತನಾಡಿ ಚಾಮರಾಜನಗರ ಗಡಿಜಿಲೆ ್ಲನಾನು ಶೂಟಿಂಗ್ ತರಬೇತಿಯನ್ನು ಪಡೆಯಲು ಪ್ರತಿವಾರ ಬೆಂಗಳೂರಿಗೆ ಹೋಗುತ್ತಿದೇನೆ. ನನಗೆ ಉತ್ತಮ ತರಬೇತಿಯನ್ನು ಕರ್ನಾಟಕ ರೈಫಲ್ ಅಸೋಸಿಯೇಷನ್ ತರಬೇತಿದಾರ ಸುರೇಶ್ ನೀಡುತ್ತಿದ್ದಾರೆ. ಮುಂದಿನ ನನ್ನ ಗುರಿ ಒಲಂಪಿಕ್ ನಲ್ಲಿ ಭಾಗವಹಿಸಿ ನಮ್ಮ ದೇಶಕ್ಕೆ ಕೀರ್ತಿತರುವ ತರಬೇತಿಯನ್ನು ಪಡೆಯಲು ಶ್ರಮಿಸುತ್ತೇನೆ ಎಂದು ಹೇಳಿದರು.

error: Content is protected !!