ನೇಸರಗಿ-09:ವಿದ್ಯಾರ್ಥಿಗಳು ತಮ್ಮ ವ್ಯಾಸಂಗ ಸಮಯದಲ್ಲಿ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ಕೊಟ್ಡು ಪರಿಶ್ರಮದಿಂದ ಕಲಿತರೆ ತಮ್ಮ ಜೀವನ ಮುಂದಿನ ಬೆಳವಣಿಗೆ ಸುಗಮವಾಗುತ್ತದೆ ಎಂದು ವಾಣಿಜ್ಯ ಶಾಸ್ತ್ರದ ಉಪನ್ಯಾಸಕರಾದ ವಿ ಎಲ್.ಕಾಮಕರ ಹೇಳಿದರು.
ಅವರು ಗುರುವಾರದಂದು ಗ್ರಾಮದ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿದರು.
ಪಿ ಯು ಕಾಲೇಜ್ ಪ್ರನ್ಸುಪಾಲರಾದ ಎನ್ ಎಮ್ ಕುದರಿಮೋತಿ ಮಾತನಾಡಿ ಶಿಕ್ಷಣ ಎಂಬುದು ಒಂದು ಅದ್ಯಯನ, ಮುಂದಿನ ಜೀವನ ಬೆಳವಣಿಗೆಗೆ ಶ್ರಮದ ಶಿಕ್ಷಣ ಕಲಿಕೆ ಅವಶ್ಯ ಎಂದರು.
ಪ್ರಥಮ ದರ್ಜೆ ಕಾಲೇಜಿನ ಪ್ರನ್ಸುಪಾಲರಾದ ಡಾ.ಪಕ್ಕರಗೌಡ ಗದ್ದಿಗೌಡರ ಮಾತನಾಡಿ ಪರಿಶ್ರಮದಿಂದ ವಿದ್ಯಾರ್ಥಿಗಳು ಎಲ್ಲಾ ಸಾಧಿಸಬಹುದು ಅದಕ್ಕಾಗಿ ಆಸಕ್ತಿಯ ಅಬ್ಯಾಸ ಮುಖ್ಯ ಎಂದರು.ಇದೇ ಸಂದರ್ಭದಲ್ಲಿ ಇತಿಹಾಸ ಉಪನ್ಯಾಸಕ ಎಸ್ ವಿ.ಕಗ್ಗೂಡ ಅವರನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕಾಲೇಜ ಸುಧಾರಣಾ ಸಮಿತಿ ಉಪಾದ್ಯಕ್ಷ ಬಸವರಾಜ ಚಿಕ್ಕನಗೌಡ್ರ, ಐಟಿಐ ತರಬೇತಿ ಕಾಲೇಜ ಅಧಿಕಾರಿ ಕೆ ಬಿ.ಇಟಗಿ ,ಶ್ರೀಮತಿ ಗೀತಾ ಖಂಡ್ರೆ,ವಿನಾಯಕ ಮಾಸ್ತಮರ್ಡಿ,ಬಾಳಪ್ಪ ಕುಂಟಗಿ,ಭೋಧಕ,ಭೋಧಕೇತರ ಸಿಬ್ಬಂದಿ, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಉಪನ್ಯಾಸಕಿ ಚಂದ್ರಕಲಾ ರೊಟ್ಟಿ ಈ ಕಾರ್ಯಕ್ರಮವನ್ನು ನಿರೂಪಿಸಿದ್ದಾರೆ.