ಬೆಳಗಾವಿ-09: ಜೀವನದಲ್ಲಿ ನಾವು ವಿದ್ಯೆ ಪಡೆದು, ವ್ಯಕ್ತಿತ್ವ ರೂಪಿಸಿಕೊಂಡು, ಸಾಮಾಜಿಕ ಸ್ಥಾನಮಾನ, ಅಧಿಕಾರ, ಅಂತಸ್ತು, ಎಲ್ಲವನ್ನೂ ಪಡೆದುಕೊಂಡಾಗಲೂ, ನಾವು ಹಿಂದೆ ನಡೆದುಬಂದ ದಾರಿಯನ್ನು ದೂರಬಾರದು, ಬೇರುಗಳನ್ನು ಬಿಡಬಾರದು, ಮೂಲವನ್ನು ಮರೆಯಬಾರದು ಎಂಬ ಬಂದುತ್ವದ ಕೃತಜ್ಞತಾ ಭಾವನೆಯುಳ್ಳ ಬೆಳಗಾವಿಯ ಅಧಿಕಾರಿಯ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ..
ಒಂದು ಸಮುದಾಯದಲ್ಲಿ ಬೆಳೆದು, ಇಡೀ ಸಾಮಾಜಿಕ ಜೀವನದಲ್ಲಿ ಒಂದು ಉತ್ತಮ ಸ್ಥಾನಮಾನ ಪಡೆದ ಬೆಳಗಾವಿಯ ಅಧಿಕಾರಿಯಾದ ಉದಯಕುಮಾರ ತಳವಾರ ಅವರು , ತಮ್ಮ ಏಳಿಗೆಗೆ ಅಡಿಪಾಯವಾದ ಸಮುದಾಯದ ಸಮಾರಂಭಕ್ಕೆ ಅತ್ಯಂತ ಆದರತೆ ಹಾಗೂ ವಿನಮ್ರತೆಯಿಂದ ಭಾಗಿಯಾಗಿ ಕುಲ ಗುರುಹಿರಿಯರ ಕೃಪಾಶೀರ್ವಾದಕ್ಕೆ ಪಾತ್ರರಾಗಿದ್ದಾರೆ.
ದಾವಣಗೆರೆ ಜಿಲ್ಲೆಯ, ಹರಿಹರ ತಾಲೂಕಿನ, ರಾಜನಹಳ್ಳಿಯ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಆವರಣದಲ್ಲಿ ಇದೇ ಫೆಬ್ರುವರಿ 8 ಹಾಗೂ 9ನೇ ದಿನಾಂಕದಂದು ಜರುಗಿದ, “ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರೆ 2024” ರಲ್ಲಿ ಭಾಗಿಯಾಗಿ ಜಾತ್ರೆಗೆ ಶೋಭೆ ತರುವುದರೊಂದಿಗೆ ಸಮುದಾಯ ಯುವಸಮೂಹಕ್ಕೆ ಸ್ವಾಭಿಮಾನದ ಸಂದೇಶ ನೀಡಿದ್ದಾರೆ..
ಸಮಾಜದ ಎಲ್ಲಾ ಸಮುದಾಯ ಹಾಗೂ ಸಂಸ್ಕೃತಿಯನ್ನ ಗೌರವಿಸೋಣ, ನಮ್ಮತನವನ್ನು ಪ್ರೀತಿಸೋಣ ಎನ್ನುವ ಮನೋಭಾವ ಇರುವ ಇಂತಹ ಅಧಿಕಾರಿಗಳು, ಜನಪ್ರತಿನಿಧಿಗಳು, ಸಂಘಟಕರು, ಉದ್ಯಮಿಗಳು, ಸೆಲೆಬ್ರಿಟಿಗಳು, ಹಾಗೂ ಸಮಾಜಸೇವಕರು ಹೆಚ್ಚಾಗಿ ಇದ್ದಾಗ ಸಮಾಜ ಅಭಿವೃದ್ಧಿಪಥದತ್ತ ಸಾಗಿ, ಸರ್ವ ಜನಾಂಗದ ಶಾಂತಿಯ ತೋಟವಾಗಿ ಕಂಗೊಳಿಸುತ್ತದೆ.