23/12/2024
IMG-20240209-WA0044

ಬೆಳಗಾವಿ-09: ಮನೆಯಲ್ಲಿನ ವ್ಯಕ್ತಿ ಅನಾರೋಗ್ಯ ಅಥವಾ ಮಾನಸಿಕತೆಯಿಂದ ಬಳುತ್ತಿದ್ದರೇ ನಡು ರಸ್ತೆಯಲ್ಲಿ ಬಿಡುವ ಕುಟುಂಬಗಳ ಅದೇಷ್ಟೋ ನಾವು ನೋಡಿದ್ದೇವೆ. ಆದರೆ ಬಿಹಾರ ವ್ಯಕ್ತಿಯೋರ್ವ ಕಳೆದ ಎರಡೂ ತಿಂಗಳಿನಿಂದ ಸಮೀಪದ ಕೆ.ಕೆ.ಕೊಪ್ಪ ಬಸ್ ನಿಲ್ದಾಣದಲ್ಲಿಯೇ ವಾಸವಿದ್ದ ವ್ಯಕ್ತಿಗೆ ಸೇವಾದಳದ ಸಂಸ್ಥಾಪಕ, ಅಧ್ಯಕ್ಷ ವೀರೇಶ ಬಸಯ್ಯ ಹಿರೇಮಠ ಆತನಿಗೆ ಶುಕ್ರವಾರ ಶಾಶ್ವತ ಪರಿಹಾರ ಕಲ್ಪಿಸಿದರು.
ಎಲ್ಲಿಯ ಬಿಹಾರ, ಎಲ್ಲಿಯ ಬೆಳಗಾವಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಬಿಹಾರದ ವ್ಯಕ್ತಿ ಕಳೆದ ಎರಡೂ ತಿಂಗಳಿನಿಂದ ಕೆ.ಕೆ.ಕೊಪ್ಪ ಬಸ್ ನಿಲ್ದಾಣದಲ್ಲಿ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದ. ಇದನ್ನು ಗಮನಿಸಿದ ಸ್ಥಳೀಯರು ವೀರೇಶ ಬಸಯ್ಯ ಹಿರೇಮಠ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದರು. ಜನರ ಕರೆಗೆ ಸ್ಪಂದಿಸಿದ ವೀರೇಶ ಅವರು, ಸ್ಥಳಕ್ಕೆ ತೆರಳಿದಾಗ ಆ ವ್ಯಕ್ತಿ ಮಾತನಾಡುವ ಪರಿಸ್ಥಿತಿಯಲ್ಲಿಯೂ ಇರಲಿಲ್ಲ. ಕೂಡಲೇ ಬಿಹಾರದ ವ್ಯಕ್ತಿಗೆ ಬಟ್ಟೆ ಹಾಕಿ ಮಚ್ಚೆಯಲ್ಲಿರುವ ನಿರಾಶ್ರಿತ ಕೇಂದ್ರದ ಅಧಿಕಾರಿ ಎಂ.ಎಫ್.ಮ್ಯಾಗಡಿ ಅವರಿಗೆ ಸಂಪರ್ಕಿಸಿದಾಗ ತತಕ್ಷಣ ವಾಹನದ ವ್ಯವಸ್ಥೆ ಮಾಡಿಸಿದರು.
ಸೇವಾ ದಳದ ವೀರೇಶ ಬಸಯ್ಯ ಹಿರೇಮಠ ಸಮಾಜ ಮುಖಿ ಕಾರ್ಯಗಳನ್ನು ಮಾಡುತ್ತ ಬಂದಿದ್ದಾರೆ. ಅಪರಿಚಿತ ಬಿಹಾರದ ಮಾನಸಿಕ ವ್ಯಕ್ತಿಗೆ ಬಟ್ಟೆ, ಊಟ ಕೊಡುವುದರ ಮೂಲಕ ಬೆಳಗಾವಿಯ ಮಚ್ವೆ ನಿರಾಶ್ರಿತ ಕೇಂದ್ರಕ್ಕೆ ರವಾನಿಸಿದ್ದು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ.
ಸೇವಾದಳದ ಮೂಲಕ ಜನಪರ ಕೆಲಸ ಮಾಡುತ್ತಿರುವ ವೀರೇಶ ಬಸಯ್ಯ ಹಿರೇಮಠ ಅವರ ತಂಡಕ್ಕೆ ಇನ್ನಷ್ಟು ಜನರ ಸೇವೆ ಮಾಡುವಂತಾಗಲಿ ಎಂದು ಜಿಲ್ಲೆಯ ಜನರು ಶ್ಲಾಘಿಸುತ್ತಿದ್ದಾರೆ.

error: Content is protected !!