ಬೆಳಗಾವಿ-05 : ಇಲ್ಲಿನ ಶ್ರೀನಗರದಲ್ಲಿರುವ ಸಾಯಿ ಮಂದಿರ ಎದುರುಗಡೆಯ ಮೈದಾನದಲ್ಲಿ, ಹಿಂದೂ ಸಮ್ಮೇಳನ ಸಮಿತಿ ನೇತ್ರತ್ವದಲ್ಲಿ ಬೃಹತ್ ಹಿಂದೂ ಸಮ್ಮೇಳನ ಆಯೋಜಿಸಲಾಗಿದೆ ಎಂದು ಎ.ಎಸ್. ಪಾಶ್ಚಾಪೂರೆ ಹೇಳಿದರು.
ಗುರುವಾರ ನಗರದಲ್ಲಿ ಸುದ್ದಿ ಗೋಷ್ಠಿ ಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನೂರು ವರ್ಷ ಪೂರೈಕೆಯ ಬೆನ್ನಲೆಯಲ್ಲಿ. ಹಿಂದೂ ರಾಷ್ಟ್ರದ ಜಾಗೃತಿಗಾಗಿ ಹಿಂದೂ ನಾವೇಲ್ಲ ಒಂದು ಎಂದು ರಾಷ್ಟ್ರದಲ್ಲಿನ ಎಲ್ಲ ಹಿಂದೂಗಳನ್ನು ಒಂದು ಕೂಡಿಸುವುದಕ್ಕೆ ಹಿಂತಹ ಹಿಂದೂ ಸಮಾವೇಶಗಳನ್ನು ಆಯೋಜಿಸಲಾಗುತ್ತದೆ ಎಂದರು.
ಶುಕ್ರವಾರ ಸಂಜೆ 6 ಗಂಟೆಗೆ ಶ್ರೀನಗರದಲ್ಲಿ ಬೃಹತ್ ಮಟ್ಟದಲ್ಲಿ ಹಿಂದೂ ಸಮ್ಮೇಳನ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಈ ಕಾರ್ಯಕ್ರವನ್ನು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ, ಪರಿಣಿತಾ ಪಾಟೀಲ, ಜಿಲ್ಲಾ ಪ್ರಮುಖರು ಸಮುತ್ಕರ್ಷ ಇವರ ನೇತ್ರತ್ವದಲ್ಲಿ ಚಾಲನೆಯೋಂದಿಗೆ ಪೂಜ್ಯ ಶ್ರೀ ಮ. ನಿ. ಪ್ರ. ಗುರುಸಿದ್ದಮಹಾಸ್ವಾಮಿಗಳು ಕಾರಂಜಿಮಠ ಅವರು ದಿವ್ಯ ಸಾನಿದ್ಯ ವಹಿಸಲಿದ್ದಾರೆ ಎಂದರು ಹೇಳಿದರು.
ಫೆಬ್ರುವರಿ ದಿ.6 ಸಂಜೆ 4 ಗಂಟೆಗೆ ಬೃಹತ್ ಬೈಕ್ ರ್ಯಾಲಿ ಹಾಗೂ ಶೋಭಾಯಾತ್ರೆಯೂ ನಗರದ ಪ್ರಮುಖ ಬಿದಿಗಳಲ್ಲಿ ಸಂಚರಿಸಲಿದೆ. ಬಳಿಕ ಸಂಜೆ 6 ಗಂಟೆಯ ನಂತರ ಬೃಹತ್ ಹಿಂದೂ ಸಮ್ಮೇಳನದ ಕಾರ್ಯಕ್ರಮವನ್ನು ಉದ್ದೇಶಿಸಿ ಚಕ್ರವರ್ತಿ ಸೂಲಿಬೆಲೆ ಅವರು ಮಾತನಾಡಲಿದ್ದಾರೆ ಎಂದರು.
ಈ ಹಿಂದೂ ಸಮ್ಮೇಳನ ಸಮಾವೇಶಕ್ಕೆ ಮಾಹಾಂತೇಶ ನಗರ, ಶ್ರೀನಗರ, ಶಿವಬಸವ ನಗರದ ಸೇರಿದಂತೆ ಸುತ್ತಮುತ್ತಲಿನ ಸಾವಿರಾರೂ ಹಿಂದೂ ಕಾರ್ಯಕರ್ತರು ಭಾಗಿಯಾಗಿ ಕಾರ್ಯಕ್ರಮ ಯಶಸ್ವಿ ಗೊಳಿಸಲಿದ್ದಾರೆ ಎಂದು ತಿಳಿಸಿದರು.
ಈ ವೇಳೆ ಎ.ಎಸ್. ಪಾಶ್ಚಾಪೂರೆ, ಎ.ಆರ್, ಪಾಟೀಲ, ಬಸವರಾಜ ಭಾಗೋಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
