01/05/2026
IMG-20260205-WA0002

ಬೆಳಗಾವಿ-05 : ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೆನಕನಹಳ್ಳಿಯಲ್ಲಿ ವಾರ್ಕರಿ ಮಂಡಳಗಳ ಸಮಾವೇಶ ನಡೆಯಲಿರುವ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಗುರುವಾರ ಸ್ಥಳಕ್ಕೆ ತೆರಳಿ ಪೂರ್ವಭಾವಿ ಸಭೆ ನಡೆಸಿದರು.

ಫೆಬ್ರವರಿ 13 ರಂದು ಸಂಜೆ 4 ಗಂಟೆಗೆ ಹೋಟೆಲ್ ಗಾರ್ಡನ್ ಕೋರ್ಟ್ ಮುಂಭಾಗದಲ್ಲಿ ‘ವಾರ್ಕರಿ ಸಂಪ್ರದಾಯ’ ಮಂಡಳಿಗಳ ಮೇಳಾವ್ ನಡೆಯಲಿದೆ. ಕ್ಷೇತ್ರದ ವಿವಿಧ ಗ್ರಾಮಗಳ ವಾರ್ಕರಿ ಮಂಡಳಿಗಳ ಸಂತರು ಹಾಗೂ ಪ್ರಮುಖ ಮುಖಂಡರೊಂದಿಗೆ ಕಾರ್ಯಕ್ರಮದ ಯಶಸ್ಸಿಗೆ ಆಗಬೇಕಿರುವ ಸಿದ್ಧತೆಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು.
ಅತ್ಯಂತ ವ್ಯವಸ್ಥಿತವಾಗಿ ಸಮಾವೇಶ ನಡೆಸಬೇಕು. ಅದಕ್ಕಾಗಿ ವಿವಿದ ಸಮಿತಿಗಳನ್ನು ರಚಿಸಬೇಕು. ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಲಾಯಿತು.

error: Content is protected !!