ಬೆಳಗಾವಿ-05 : ಬೃಹತ್ ಆಲ್ ಇಂಡಿಯಾ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಫೆ.12 ರಿಂದ 22ರವರೆಗೆ ಆಯೋಜಿಸಲಾಗಿದೆ ಎಂದು ಬಿಜೆಪಿ ಮುಖಂಡ ಮುರುಗೇಂದ್ರಗೌಡ ಪಾಟೀಲ್ ಹೇಳಿದರು.
ಬುಧವಾರ ನಗರದಲ್ಲಿ ಪತ್ರಿಕಾ ಗೋಷ್ಠಿ ಮಾತನಾಡಿದ ಅವರು ದೇಶದ ವಿವಿಧ ಮೂಲೆಗಳ ಪ್ರತಿಭಾವಂತ ಆಟಗಾರರನ್ನು ಒಂದುಗೂಡಿಸುವ ‘ಆಲ್ ಇಂಡಿಯಾ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಾಮೆಂಟ್’ ಇದೇ ಫೆಬ್ರವರಿ 12ರಿಂದ 22ರವರೆಗೆ ಒಟ್ಟು 11 ದಿನಗಳ ಕಾಲ ಅದ್ದೂರಿಯಾಗಿ ನಡೆಯಲಿದೆ. ಈ ಕ್ರೀಡಾಕೂಟದಲ್ಲಿ ಐಪಿಎಲ್ ಖ್ಯಾತಿಯ ಯುವ ತಾರೆಗಳು ಭಾಗವಹಿಸುತ್ತಿರುವುದು ವಿಶೇಷ ಆಕರ್ಷಣೆಯಾಗಿದೆ ಎಂದರು.
ಈ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ವಿಜೇತರಾಗುವ ತಂಡಗಳಿಗೆ ಭಾರಿ ಮೊತ್ತದ ಬಹುಮಾನವನ್ನು ಘೋಷಿಸಲಾಗಿದೆ: ಪ್ರಥಮ ಬಹುಮಾನ 5,27,127 ನಗದು ಹಾಗೂ ಟ್ರೋಫಿ, ದ್ವಿತೀಯ ಬಹುಮಾನ: 2,51,127 ನಗದು ಹಾಗೂ ಟ್ರೋಫಿ. ಸರಣಿ ಶ್ರೇಷ್ಠ (Man of the Series): ಅತ್ಯುತ್ತಮ ಪ್ರದರ್ಶನ ನೀಡುವ ಆಟಗಾರನಿಗೆ ಆಕರ್ಷಕ ‘ಸ್ಕೂಟಿ’ ಬಹುಮಾನವಾಗಿ ನೀಡಲಾಗುವುದು ಎಂದರು.
ದೇಶದ ವಿವಿಧ ತಂಡಗಳ ಭಾಗವಹಿಸುವಿಸಲಿವೆ. ಈಗಾಗಲೇ ಕ್ರೀಡಾ ಗ್ಲಲಯದಲ್ಲಿ ಭಾರಿ ಕುತೂಹಲ ಮೂಡಿಸಿರುವ ಈ ಟೂರ್ನಿಯಲ್ಲಿ ಭಾಗವಹಿಸಲು ಒಟ್ಟು 48 ತಂಡಗಳಿಗೆ ಅವಕಾಶ ಕಲ್ಪಿಸಲಾಗಿದೆ. ಈ ಪೈಕಿ ಉತ್ತರ ಪ್ರದೇಶ, ದೆಹಲಿ, ಗೋವಾ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಸುಮಾರು 40 ತಂಡಗಳು ಈಗಾಗಲೇ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿವೆ. ಇನ್ನುಳಿದ ಕೇವಲ 8 ಸ್ಥಾನಗಳಿಗಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ.
ಐಪಿಎಲ್ ತಾರೆಗಳ ಮಿಂಚಿನ ಆಟ ಕೇವಲ ಸ್ಥಳೀಯ ಆಟಗಾರರಲ್ಲದೆ, ಐಪಿಎಲ್ (IPL) ಅಂಗಳದಲ್ಲಿ ಮಿಂಚಿದ ಹಲವು ಯುವ ಪ್ರತಿಭಾವಂತ ಕ್ರೀಡಾಪಟುಗಳು ಈ ಟೆನಿಸ್ ಬಾಲ್ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿರುವುದು ಕ್ರೀಡಾಭಿಮಾನಿಗಳಿಗೆ ಹಬ್ಬದೂಟವಾಗಲಿದೆ ಎಂದರು.
ಈ ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳಿಗೆ ಪ್ರತಿ ತಂಡಕ್ಕೆ 15,000 ಪ್ರವೇಶಾತಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ಆಸಕ್ತ ತಂಡಗಳು ಕೂಡಲೇ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದರು
