05/02/2026
IMG-20260204-WA0002

ಮೂಡಲಗಿ-04: ಕರ್ನಾಟಕ ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿ (ಎಸ್‌ಎಲ್‌ಬಿಸಿ) ಪ್ರಕಾರ, 2024-25ರಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್‌ಎಂಇ) ವಲಯಕ್ಕೆ 4609.04 ಕೋಟಿ ರೂ. ಸಾಲವನ್ನು ವಿತರಿಸಲಾಗಿದೆ ಎಂದು ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಲಿಖಿತ ಉತತ್ರದಲ್ಲಿ ಮಾಹಿತಿ ನೀಡಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.

ನವದೆಹಲಿಯಲ್ಲಿ ನಡೆಯುತ್ತಿರುವ ಬಜೆಟ್‌ ಅಧಿವೇಶನದಲ್ಲಿ ಕಳೆದ ಹಣಕಾಸು ವರ್ಷದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ವಲಯಕ್ಕೆ ನೀಡಿದ ಒಟ್ಟು ಸಾಲದ ವಿವರ, ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಯೋಜನೆ ಅಡಿಯಲ್ಲಿ ಒಳಗೊಂಡಿರುವ ಘಟಕಗಳ ವಿವರ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಯೋಜನೆ ಕುರಿತು 23.01.2023 ರ ಸಂಶೋಧನಾ ವರದಿಯ ಪ್ರಕಾರ, ಸುಮಾರು 14.6 ಲಕ್ಷ ಎಂ.ಎಸ್.ಎಂ. ಇ ಖಾತೆಗಳು, ಅದರಲ್ಲಿ ಸುಮಾರು 98.3% ಖಾತೆಗಳು ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳ ವರ್ಗಗಳಲ್ಲಿವೆ ಎಂದರು.

ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದಂತೆ, ಜುಲೈ 24, 2017 ರ ಆರ್‌.ಬಿ.ಆಯ್ ಮಾಸ್ಟರ್ ಡೈರೆಕ್ಷನ್‌ನ ಪ್ಯಾರಾ 4.1 ರ ಪ್ರಕಾರ (ಜುಲೈ 23, 2025 ರಂದು ನವೀಕರಿಸಲಾಗಿದೆ) ಎಂ.ಎಸ್.ಎಂ. ಇ‌ ವಲಯಕ್ಕೆ ಸಾಲ ನೀಡುವಿಕೆ’ ಕುರಿತು, ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳ (ಎಂ.ಎಸ್. ಇ) ವಲಯದ ಘಟಕಗಳಿಗೆ ರೂ. 10 ಲಕ್ಷದವರೆಗಿನ ಸಾಲಗಳ ಸಂದರ್ಭದಲ್ಲಿ ಬ್ಯಾಂಕುಗಳು ಮೇಲಾಧಾರ ಭದ್ರತೆಯನ್ನು ಸ್ವೀಕರಿಸಬಾರದು ಎಂದು ಆದೇಶಿಸಿದೆ. ಕ್ರೆಡಿಟ್ ಗ್ಯಾರಂಟಿ ಯೋಜನೆಯಡಿಯಲ್ಲಿ ‘ಅನೌಪಚಾರಿಕ ಸೂಕ್ಷ್ಮ ಉದ್ಯಮಗಳಿಗೆ ವಿಶೇಷ ನಿಬಂಧನೆ (ಆಯ್ಎಂ.ಇ)’ ಅನ್ನು ಪರಿಚಯಿಸಿದೆ. ಈ ಗ್ಯಾರಂಟಿಯು ರೂ. 20 ಲಕ್ಷದವರೆಗಿನ ಸಾಲವನ್ನು 85% ವ್ಯಾಪ್ತಿಯೊಂದಿಗೆ, ಯಾವುದೇ ಪ್ರಾಥಮಿಕ ಭದ್ರತೆ ಅಗತ್ಯವಿಲ್ಲದೆ ಮತ್ತು ರೂ. 10 ಲಕ್ಷದವರೆಗಿನ ಸಾಲಕ್ಕೆ 0.37% ಮತ್ತು ರೂ. 10 ಲಕ್ಷದಿಂದ ರೂ. 20 ಲಕ್ಷದವರೆಗಿನ ಸಾಲಕ್ಕೆ 0.45% ಗ್ಯಾರಂಟಿ ಶುಲ್ಕವನ್ನು ಒಳಗೊಂಡಿದೆ ಎಂದು ಸಚಿವರು ಉತ್ತರಿಸಿದ್ದಾರೆ ಎಂದು ಸಂಸದ ಈರಣ್ಣ ಕಡಾಡಿ ತಿಲಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!