04/02/2026
IMG-20260202-WA0018

ಶರಣರ ವಚನಗಳು ನಮ್ಮ ಬಾಳನ್ನು ತಿದ್ದುವ ದಾರಿದೀಪಗಳಾಗಿವೆ. ಪ್ರತಿಶರಣರ ಪ್ರತಿಯೊಂದು ವಚನದ ವಿಚಾರಗಳು ನೈಜತೆ ಬಿಂಬಿಸುವುದರ ಜೊತೆಗೆ ಸದಾಕಾಲ ಮಾರ್ಗದರ್ಶಿಯಾಗಿವೆ ಎಂದು ನಿವೃತ್ತ ಪ್ರಾಧ್ಯಾಪಕಿ ಮತ್ತು ಸಾಹಿತಿ ಡಾ.ಗುರುದೇವಿ ಹುಲೆಪ್ಪನವರಮಠ ರವಿವಾರ ದಿ 1 ರಂದು ಬೆಳಗಾವಿಯ ಹಳಕಟ್ಟಿ ಭವನದಲ್ಲಿ ಪ್ರಾರoಭದಲ್ಲಿ ಮಹಾದೇವಿ ಅರಳಿ ಪ್ರಾಥ೯ನೆ ನಡಿಸಿಕೂಟ್ಟರು ಲಿಂಗಾಯತ ಸಂಘಟನೆಯ ವತಿಯಿಂದ ಅಕ್ಕಮಹಾದೇವಿ ತೆಗ್ಗಿ ರಚಿಸಿದ ‘ವಚನ ಬುತ್ತಿ ‘ ಗ್ರಂಥ ಲೋಕಾರ್ಪಣೆ ಮಾಡಿ ಮಾತನಾಡಿದರು. ಕೃತಿ ರಚಿಸಿದ ಅಕ್ಕಮಹಾದೇವಿ ತೆಗ್ಗಿ ಮಾತನಾಡಿ 12 ನೇ ಶತಮಾನದ ಸುಮಾರು 15 ಕ್ಕೂ ಹೆಚ್ಚು ವಚನಕಾರರ ವಚನಗಳನ್ನು ಬಳಸಿ ಅದನ್ನು ನೈಜ ಜೀವನದ ಜೊತೆಗೆ ವಿಶ್ಲೇಷಣೆ ಮಾಡಲಾಗಿದೆ ಪ್ರಸ್ತುತ ಜೀವನದಲ್ಲಿ ವಚನಗಳು ತೀರಾ ಅವಶ್ಯಕವಾಗಿವೆ ಎಂದರು. ಅಧ್ಯಕ್ಷತೆ ವಹಿಸಿದ್ದ ಸಂಘಟನೆ ಅಧ್ಯಕ್ಷ ಈರಣ್ಣಾ ದೇಯನ್ನವರ ಮಾತನಾಡಿ ಸಂಘಟನೆಯ ಒಡನಾಟ ಮತ್ತು ಇಲ್ಲಿಯ ಪ್ರಾರ್ಥನೆ ಮತ್ತು ಅನುಭಾವದ ಪ್ರಭಾವದಿಂದ ಇಂದು ಅಕ್ಕಮಹಾದೇವಿ ತೆಗ್ಗಿಯವರು ಕೃತಿ ರಚಿಸುವ ಮಟ್ಟಕ್ಕೆ ಅನುಭವ ಪಡೆದಿದ್ದಾರೆ ಇದು ಸತ್ಸಂಗದ ಫಲವಾಗಿದೆ ಎಂದರು. ಕಾರ್ಯಕ್ರಮದಲ್ಲಿ ವಿರುಪಾಕ್ಷ ದೊಡ್ಡಮನಿ,ಸಿದ್ದಪ್ಪ ಸಾರಾ ಪೂರಿ, ಸದಾಶಿವ ದೇವರಮನಿ,ಶoಕರ ಶೆಟ್ಟಿ, ಆನಂದ ಕರ್ಕಿ,ಮಹಾದೇವ ಕೆoಪಿಗೌಡ್ರ, ಬಸವರಾಜ ಕರಡಿಮಠ,ಸುದೀರ ರಘಶೆಟ್ಟಿ,ಪ.ಬಿ.ಕರಿಕಟ್ಟಿ, ಬಿ.ಪಿ. ಜೇವಣಿ, ಶಿ.ಪೂಜಾರ, ಶಿವಕುಮಾರ ಪಾಟೀಲ,ಶಿವಾನoದ ನಾಯಕ, ಶoಕರ ರಾವಳ, ಸ ರಾ ಸುಳಕೂಡೆ,ಅಶೋಕ ಉಳೆಗಡ್ಡಿ, ಸುನಿಲ ಸಾಣಿಕೊಪ್ಪ, ಬಸವರಾಜ ಬಿಜ್ಜರಗಿ, ಡಾ ಅ. ಬ. ಇಟಗಿ, ಜಯಶ್ರೀ ಚವಲಗಿ,ಲಕ್ಷ್ಮಿ ಜೇವಣಿ ಶಶಿಕಲಾ ಪೂಜಾರಿ ಸೇರಿದಂತೆ ಶರಣರು ಉಪಸ್ಥಿತರಿದ್ದರು ಕಾರ್ಯಕ್ರಮದ ಆರಂಭದಲ್ಲಿ ಸಂಗಮೇಶ ಅರಳಿ ಸ್ವಾಗತಿಸಿದರು, ಎಂ ವೈ ಮೆಣಸಿನಕಾಯಿ ನಿರೂಪಿಸಿದರು ಕೊನೆಯಲ್ಲಿ ಶಿವಾನಂದ ತಲ್ಲೂರ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!