04/02/2026
IMG-20260202-WA0019

ಕರ್ನಾಟಕ ಮಹಾರಾಷ್ಟ್ರ ಗೋವಾ ರಾಜ್ಯಗಳ ಜನರಿಗೆ ಅನುಕೂಲ ಆಗುವ ಭವ್ಯ ಶಾಪಿಂಗ್ ಮಾಲ್:ಅಭಯ್ ಪಾಟೀಲ್

ಬೆಳಗಾವಿ-02 : ಬೆಳಗಾವಿಯಂತಹ ಅಭಿವೃದ್ಧಿ ಹೊಂದುತ್ತಿರುವ ನಗರದಲ್ಲಿ ಮಾಂಗಲ್ಯ ಎನ್ನುವಂತಹ ಇಂತಹ ಭವ್ಯವಾದ ಬಟ್ಟೆ ಶಾಪಿಂಗ್ ಮಾಲ್ ಉದ್ಘಾಟನೆ ಆಗಿದ್ದು ಸಂತಸದ ವಿಷಯ, ಇದರಿಂದ ಗೋವಾ ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕದ ಜನತೆಗೆ ಅನುಕೂಲ ಆಗುವಂತಹ ಅರಮನೆಯಂತಹ ಬ್ರಹತ್ ಬಟ್ಟೆ ಅಂಗಡಿಯ ಪ್ರಯೋಜನೆಯನ್ನು ಬೆಳಗಾವಿಯ ಜನತೆ ಪಡೆಯಲಿ ಎಂದು ಬೆಳಗಾವಿ ದಕ್ಷಿಣದ ಶಾಸಕ ಅಭಯ ಪಾಟೀಲ್ ಅವರು ಹೇಳಿದ್ದಾರೆ..

ಸೋಮವಾರ ನಡೆದ ನಗರದ ಅನಗೋಳ ವೃತ್ತದಲ್ಲಿ ಪ್ರಾರಂಭವಾದ ಬ್ರಹತ್ ಬಟ್ಟೆ ಅಂಗಡಿಯನ್ನು ಉದ್ಘಾಟನೆ ಮಾಡಿ ಮಾತನಾಡಿದ ಶಾಸಕರು, ಜನರ ಕೈಗೆ ಎಟಕುವ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಬಟ್ಟೆಗಳನ್ನು ಗ್ರಾಹಕರಿಗೆ ಒದಗಿಸುವ ಒಳ್ಳೆ ಉದ್ದೇಶ ಇಟ್ಟುಕೊಂಡು ಈ ಮಾಂಗಲ್ಯ ಎಂಬ ಬಟ್ಟೆ ಶಾಪಿಂಗ್ ಮಾಲ್ ಬೆಳಗಾವಿಯಲ್ಲಿ ಪ್ರಾರಂಭವಾಗಿದೆ ಅವರಿಗೆ ಶುಭವಾಗಲಿ, ಜೊತೆಗೆ ಬೆಳಗಾವಿ ಹಾಗೂ ಸುತ್ತಮುತ್ತಲಿನ ಎಲ್ಲಾ ನಗರಗಳ ಜನತೆಗೂ ಇದರಿಂದ ಉತ್ತಮ ಉಡುಗೆಗಳು ಸಿಗುವಂತಾಗಲಿ ಎಂದರು.

ಮಾಂಗಲ್ಯ ಬಟ್ಟೆ ಅಂಗಡಿಯವರು ಆಂಧ್ರ, ತೆಲಂಗಾನ ಹಾಗೂ ಕರ್ನಾಟಕ ಸೇರಿ ಒಟ್ಟು 28 ಶಾಖೆಗಳನ್ನು ತೆರೆದಿದ್ದು, ಕರ್ನಾಟಕದಲ್ಲಿ ಇದು ಅವರ ಐದನೇಯ ಶಾಪಿಂಗ್ ಮಾಲ್, ಒಟ್ಟು 8500 ಜನರಿಗೆ ಅವರು ಉದ್ಯೋಗಾವಕಾಶ ನೀಡಿದ್ದು, ಈ ಬೇಕಾಗವಿಯಲ್ಲಿ ಇಲ್ಲೇ ಇರುವ ಸುಮಾರು 250 ಜನಕ್ಕೆ ಉದ್ಯೋಗಾವಕಾಶ ನೀಡಿದ್ದು ಮಾಂಗಲ್ಯ ಕಂಪನಿ ಅವರ ಕೊಡುಗೆ ಎಂದಿದ್ದಾರೆ.

ನೂರು ರೂಪಾಯಿಯಿಂದ ಒಂದು ಲಕ್ಷದವರೆಗಿನ ಸೀರೆಗಳು, ಮಕ್ಕಳಿಂದ ಹಿಡಿದು ಮುದುಕರವರೆಗಿನ ಎಲ್ಲಾ ರೀತಿಯ ಬಟ್ಟೆಗಳು ಇಲ್ಲಿ ಲಭ್ಯವಿದ್ದು, ಬಗೆಬಗೆಯ ವಿನ್ಯಾಸದ ಹಾಗೂ ಗುಣಮಟ್ಟದ, ಬಡ ಮಾಧ್ಯಮ ವರ್ಗದ ಜನರ ಬೆಲೆಗೆ ತೂಗುವ ಬಟ್ಟೆಗಳು ಇಲ್ಲಿ ದೊರಕುತ್ತಿದ್ದು ಬೆಳಗಾವಿಗರು ಒಮ್ಮೆ ಇಲ್ಲಿ ಬೇಟಿ ನೀಡಿ, ವಸ್ತುಗಳ ಗುಣಮಟ್ಟವನ್ನು ತಾವೇ ಪರೀಕ್ಷಿಸಿ ನೋಡಬಹುದು ಎಂದಿದ್ದಾರೆ.

ಕೇಂದ್ರ ಸಚಿವರ ಸಹಯೋಗದಿಂದ ಇಂದು ನಾನು ಇಲ್ಲಿಗೆ ಬಂದು ಇವರ ಮಾಲ್ ಉದ್ಘಾಟನೆ ಮಾಡಿ ಮತ್ತೆ ನಾನು ತೆಲಂಗಾನ ಸ್ಥಳೀಯ ಚುನಾವಣೆ ಪ್ರಚಾರ ಮಾಡಲು ತೆರಳುವೆ ಎಂದ ಶಾಸಕರು, ಪುನಾ ಬೆಂಗಳೂರು ಮುಂಬೈ ತರಹದ ಅಭಿರುಚಿ ಬೆಳಗಾವಿ ಜನತೆಗೆ ಇದೆ, ಅದಕ್ಕೆ ಇದನ್ನು ಚೋಟಾ ಮುಂಬೈ ಎನ್ನುವರು, ಇಲ್ಲಿ ಬಟ್ಟೆಗಳನ್ನು ಕೊಳ್ಳುವ ಫ್ಯಾಷನ್ ಇರುವದರಿಂದ ಇವರಿಗೆ ಒಳ್ಳೆಯದು ಆಗಬಹುದು ಎಂಬ ವಿಸ್ವಾಸವಿದೆ ಎಂದರು..

ಈ ವೇಳೆ ಶಾಸಕರ ಜೊತೆ ಸ್ಥಳೀಯ ನಗರ ಸೇವಕರು, ಸ್ನೇಹಿತರು, ಮಾಂಗಲ್ಯ ಶಾಪಿಂಗ್ ಮಾಲನ ಮಾಲೀಕರು, ಸಹೋದರರು, ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು..

Leave a Reply

Your email address will not be published. Required fields are marked *

error: Content is protected !!