ಬೆಳಗಾವಿ-22: ಮಹಾನಗರ ಪಾಲಿಕೆಯು ಭಗವಾನ್ ಬುದ್ದರ ಪ್ರತಿಮೆ ಸ್ಥಾಪಿಸುವುದಾಗಿ 2016 ರಲ್ಲಿ ಪಾಲಿಕೆಯಲ್ಲಿ ಸಭೆಯಲ್ಲಿ ಠರಾವ್ ಪಾಸ್ ಮಾಡಿತ್ತು, ಆದರೆ ಹತ್ತು ವರ್ಷಗಳು ಕಳೆದರು ಪಾಲಿಕೆಯು ಭಗವಾನ್ ಬುದ್ದರ ಪ್ರತಿಮೆಯನ್ನು ಸ್ಥಾಪಿಸದೆ ಇರುವುದನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಕೋಟೆ ಕರೆಯಲ್ಲಿ ಇದು ವರೆಗೆ ಭಗವಾನ್ ಬುದ್ಧರ ಪ್ರತಿಮೆ ಸ್ಥಾಪಿಸದೆ, ಇರುವುದರಿಂದ ಪಾಲಿಕೆ ಅಧಿಕಾರಿಗಳ ವಿರುದ್ದ ಪ್ರತಿಭಟನೆಯನ್ನು ಮಾಡಲಾಗಿತು ಆ ಸಂದರ್ಭದಲ್ಲಿ ಪಾಲಿಕೆಯ ಅಧಿಕಾರಿಗಳು ಕೊಟೆ ಕರೆ ನಮ್ಮ ವ್ಯಾಪ್ತಿಯಲ್ಲಿ ಬರುವುದಿಲ್ಲ, ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿ ಬರುತ್ತೆ ಎಂದು ಕೈ ತೊಳೆದುಕೊಂಡಿದ್ದರು.
ಇದೀಗ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಬುಧವಾರ ಲೋಕೋಪಯೋಗಿ ಇಲಾಖೆಯ ಕಛೇರಿಗೆ ಮುತ್ತಿಗೆ ಹಾಕಿ ಭಗವಾನ್ ಬುದ್ದರ ಪ್ರತಿಮೆಯನ್ನು ಆಸ್ಥಾಪಿಸುವಂತೆ ಪ್ರತಿಭಟನೆಯಲ್ಲಿ ಆಗ್ರಹಿಸಿದ್ದಾರೆ.
ಕೋಟೆ ಕರೆಯಲ್ಲಿ ಬುದ್ದರ ಪ್ರತಿಮೆಯನ್ನು ಸ್ಥಾಪಿಸುವುಕ್ಕೆ ಪಾಲಿಕೆ ಹಾಗೂ ಲೋಕೋಪಯೋಗಿ ಇಲಾಖೆ ಮೀನಾಮೇಷ ತೊರಿದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.
ಈ ವೇಳೆ ಕಲ್ಲಪ್ಪಾ ರಾಮಚನ್ನನವರ, ರವಿ ಬಸ್ತವಾಡ್ಕರ್, ಸಿದ್ರಾಯಿ ಮೇತ್ರಿ, ಸಂತೋಷ ಕಾಂಬಳೆ, ಸೇರಿದಂತೆ ಹಲವು ದಲಿತ ಕಾರ್ಯಕರ್ತರು ಉಪಸ್ಥಿತರಿದ್ದರು.
