29/01/2026

ಬೆಳಗಾವಿ-22: ಅಂತರಾಷ್ಟ್ರೀಯ ಕೃಷ್ಣಭಾವನಾಮೃತ ಸಂಘ (ಇಸ್ಕಾನ್), ಬೆಳಗಾವಿವತಿಯಿಂದ ಸತತ 28ನೇ ವರ್ಷದ ಭವ್ಯ ಹರೇ ಕೃಷ್ಣ ರಥಯಾತ್ರಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಶನಿವಾರ ಜ. 24 ಮತ್ತು 25 ರಂದು ಈ ಮಹೋತ್ಸವವು ಜರುl, ಇಸ್ಕಾನ್ ಬೆಳಗಾವಿ ಅಧ್ಯಕ್ಷ ಶ್ರೀ ಭಕ್ತಿರಸಾಮೃತ ಸ್ವಾಮಿ ಮಹಾರಾಜ್ ಅವರು ತಿಳಿಸಿದರು.
ಬುಧವಾರ ಸುದ್ಧಿ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 24 ರ ಶನಿವಾರದಂದು ಮುಖ್ಯ ರಥಯಾತ್ರೆ ಸಂಪನ್ನಗೊಳ್ಳಲಿದೆ. 24 ಮತ್ತು 25ರ ಉಭಯ ದಿನಗಳಂದು ಸಂಜೆ ಟಿಳಕವಾಡಿಯ ಶುಕ್ರವಾರ ಪೇಟೆಯಲ್ಲಿರುವ ಇಸ್ಕಾನ್ ಮಂದಿರದ ಹಿಂಭಾಗದ ಮೈದಾನದಲ್ಲಿ ಭವ್ಯ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರತಿವರ್ಷದ ಸಂಪ್ರದಾಯದಂತೆ ಈ ಬಾರಿಯೂ ರಥಯಾತ್ರೆಯು ಅತ್ಯಂತ ಭಕ್ತಿಪೂರ್ವಕ ವಾತಾವರಣ ಮತ್ತು ಉತ್ಸಾಹದಿಂದ ಜರುಗಲಿದ್ದು, ದೇಶ-ವಿದೇಶಗಳ ಸಾವಿರಾರು ಭಕ್ತರು ಭಾಗಿಯಾಗಲಿದ್ದಾರೆ.
ಭಕ್ತಿ ಮತ್ತು ಆನಂದದ ಸಮ್ಮಿಲನವಾಗಲಿದೆ. ಈ ಮೆರವಣಿಗೆಯ ಪ್ರಮುಖ ಆಕರ್ಷಣೆಯೆಂದರೆ ಭಗವಾನ್ ಶ್ರೀ ರಾಧಾ-ಕೃಷ್ಣ ಮತ್ತು ಹಾಗೂ ನಯನಮನೋಹರ ರಥ. ಸುಂದರ ವಸ್ತ್ರಾಭರಣ ಹಾಗೂ ಪುಷ್ಪಹಾರಗಳಿಂದ ಅಲಂಕೃತಗೊಂಡ ರಥದಲ್ಲಿ ವಿರಾಜಮಾನರಾಗಿ ಭಗವಂತನು ಬೆಳಗಾವಿಯ ನಿವಾಸಿಗಳಿಗೆ ದರ್ಶನ ನೀಡಲಿದ್ದಾರೆ. ವಿವಿಧ ಕೀರ್ತನ ತಂಡಗಳು ‘ಹರೇ ಕೃಷ್ಣ’ ಮಹಾಮಂತ್ರದ ಜಯಘೋಷದೊಂದಿಗೆ ನೃತ್ಯ ಮಾಡಲಿವೆ. ಮಹಾರಾಷ್ಟ್ರ, ಕರ್ನಾಟಕ, ಗೋವಾ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಅಮೇರಿಕಾ ಸೇರಿದಂತೆ ವಿವಿಧ ಪಾಶ್ಚಾತ್ಯ ದೇಶಗಳಿಂದಲೂ ಭಕ್ತರು ಆಗಮಿಸಲಿದ್ದಾರೆ.
ಮೆರವಣಿಗೆಯಲ್ಲಿ ಭಗವಾನ್ ಶ್ರೀಕೃಷ್ಣನ ವಿವಿಧ ಲೀಲೆಗಳನ್ನುv ಬಿಂಬಿಸುವ ದೃಶ್ಯ ರೂಪಕಗಳು ಮತ್ತು ಸಾಂಪ್ರದಾಯಿಕ ಉಡುಪು ಧರಿಸಿದ ಮಕ್ಕಳಿಂದ ಕೃಷ್ಣಲೀಲೆಗಳ ಪ್ರದರ್ಶನ ಬೆಳಗಾವಿ ನಗರದ ವಿವಿಧ ಮಾರ್ಗಗಳಲ್ಲಿ ರಥಯಾತ್ರೆ ಸಂಚರಿಸಲಿದೆ, ಹಾಗೂ ಎತ್ತಿನ ಬಂಡಿಗಳ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ವಿಶೇಷವಾಗಿ, ‘ಗೋ-ಸೇವಾ’ ಮಳಿಗೆಯಲ್ಲಿ ಗೋಮೂತ್ರ ಮತ್ತು0 ಸಗಣಿಯಿಂದ ತಯಾರಿಸಿದ ವಿವಿಧ ಉತ್ಪನ್ನಗಳು ಲಭ್ಯವಿರುತ್ತವೆ. ಪ್ರತಿ ರಾತ್ರಿ 50,000ಕ್ಕೂ ಹೆಚ್ಚು ಜನರಿಗೆ ಉಚಿತ ‘ಮಹಾಪ್ರಸಾದ’ ವಿತರಿಸಲಾಗುವುದು. ಒಟ್ಟಾರೆಯಾಗ9o ಸುಮಾರು ಒಂದೂವರೆ ಲಕ್ಷ ಭಕ್ತಾದಿಗಳು ಈ ಮಹೋತ್ಸವದ ಲಾಭ ಪಡೆಯುವ ನಿರೀಕ್ಷೆಯಿದೆ.
ಈ ವೇಳೆ ಶ್ರೀರಾಮ ದಾಸ್, ಬಲರಾಮ ಭಕ್ತ ದಾಸ್, ನಾಗೇಂದ್ರ ದಾಸ್, ನಿತಾಯ್ ನಿಮಾಯ್ ದಾಸ್, ಅಮೃತ ಕೃಷ್ಣ ದಾಸ್, ವದಾನ್ಯ ಚೈತನ್ಯ ದಾಸ್, ಶ್ವೇತ ನಿತಾಯ್ ದಾಸ್, ರಾಮಾಯಣ ದಾಸ್, ಶ್ರೀಕೃಷ್ಣಾಶ್ರಯ ದಾಸ್ ಸೇರಿದಂತೆ ಶ್ರೀಕೃಷ್ಣ ಮಠದ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!