ಬೆಳಗಾವಿ-22:ಬೆಳಗಾವಿಯಲ್ಲಿ ಇಂದು ಶ್ರೀ ವಿನಾಯಕ ಜಯಂತಿಯನ್ನು ಅತ್ಯಂತ ಭಕ್ತಿಭಾವದಿಂದ ಆಚರಿಸಲಾಯಿತು. ನಗರ ಮತ್ತು ಪ್ರದೇಶದ ಗಣೇಶ ಮಂದಿರಗಳಲ್ಲಿ ವಿಘ್ನ ವಿನಾಶಕನಿಗೆ ವಿಶೇಷ ಪೂಜೆ ಅರ್ಚನೆಯನ್ನು ಮಾಡಲಾಗಿತ್ತು.
ಬೆಳಗಾವಿಯ ಸದಾಶಿವನಗರದ ಶ್ರೀ ಹರಿದ್ರಾ ಗಣೇಶ ಮಂದಿರದ 22ನೇ ವರ್ಷದ ವಾರ್ಷಿಕೋತ್ಸವ ಮತ್ತು 4 ವಿನಾಯಕ ಜಯಂತಿಯನ್ನು ಅತ್ಯಂತ ಭಕ್ತಿಭಾವದಿಂದ ಆಚರಿಸಲಾಯಿತು. ಬೆಳಗಾವಿಯ ಸದಾಶಿವನಗರದ ಶ್ರೀ ಹರಿದ್ರಾ ಗಣೇಶ ಮಂದಿರದ 22ನೇ ವರ್ಷದ ವಾರ್ಷಿಕೋತ್ಸವ ಮತ್ತು ವಿನಾಯಕ ಜಯಂತಿಯ ಹಿನ್ನೆಲೆ ಮಹಾಭೀಷೇಕ, ನವಗ್ರಹ ಪೂಜೆ, ಗಣಹೋಮವನ್ನು ಹಮ್ಮಿಕೊಳ್ಳಲಾಗಿದೆ. ಮಂದಿರದ ಅರ್ಚಕರಾದ ಪವನ್ ಬೆಟಗೇರಿ ಅವರು ಇನ್ ನ್ಯೂಸ್’ಗೆ ಹೆಚ್ಚಿನ ಮಾಹಿತಿಯನ್ನು ನೀಡಿದರು.
ಈ ವೇಳೆ ಸಾವಿರಾರು ಭಕ್ತರು ಭಾಗಿಯಾಗಿ ದೇವರ ದರ್ಶನ ಪಡೆದುಕೊಂಡರು. ಮಧ್ಯಾನ್ನ ನಡೆದ ಮಹಾಪುಸಾದವನ್ನು ಸಾವಿರಾರು ಭಕ್ತರು ಸ್ವೀಕರಿಸಿ ಕೃತಾರ್ಥರಾದರು.
ಇನ್ನು ನಗರದ ತಾಶೀಲ್ದಾರ ಗಲ್ಲಿಯಲ್ಲಿಯೂ ಅತ್ಯಂತ ಸಡಗರದಿಂದ ಗಣೇಶ ಜಯಂತಿಯನ್ನು ಆಚರಿಸಲಾಯಿತು. ಗಣೇಶ ಜಯಂತಿಯ ಹಿನ್ನೆಲೆ ಗಣಹೋಮ-ನವಗ್ರಹ ಪೂಜೆ ಇನ್ನುಳಿದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಈ ವೇಳೆ ಸಾವಿರಾರು ಭಕ್ತರು ಶ್ರೀ ಗಜಾನನ ದರ್ಶನ ಪಡೆದುಕೊಂಡರು. ಬೆಳಿಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಭಕ್ತರು ಗಣಪತಿಯ ದರ್ಶನ ಪಡೆದು ಪುನೀತರಾದರು
