ಬೆಳಗಾವಿ-13 : ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಯುಜಿಡಿ ಕಾಮಗಾರಿಗಳಲ್ಲಿ ತಾರತಮ್ಮ ಮಾಡುತ್ತಿರುವುದನ್ನು ಖಂಡಿಸಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಪಾಲಿಕೆ ಅಧಿಕಾರಿಗಳ ವಿರುದ್ಧ ಮಹಾನಗರ ಪಾಲಿಕೆಯ ಸಾಮನ್ಯ ಸಭೆಯಲ್ಲಿ ಆಕ್ರೋಶವನ್ನು ಹೋರ ಹಾಕಿದರು.
ಸೋಮವಾರ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ಕರೆಯಲಾಗಿತ್ತು. ಪಾಲಿಕೆ ಸದಸ್ಯರು ಮಾಹಿತಿ ಕೋರಿ ಪತ್ರ ಬರೆದರೇ, ಹಿಂಬರಹ ನೀಡಬೇಕು. ಆದರೇ, ಅಧಿಕಾರಿಗಳಿಂದ ಸ್ಪಂದನೆ ದೊರೆಯುತ್ತಿಲ್ಲ. ಶಿವಚರಿತ್ರದ ಬಳಿಯಲ್ಲಿ ಬಂದ್ ಮಾಡಲಾದ ರಸ್ತೆಯಲ್ಲಿ ಒಂದು ಬದಿಯಿಂದ ಆರಂಭಿಸಿ ಜನರಿಗೆ ಅನುಕೂಲ ಮಾಡಲು ಮಹಾನಗರ ಪಾಲಿಕೆ ವಿಶೇಷ ಸಮಿತಿಯನ್ನು ರಚಿಸಿ ವರದಿ ನೀಡಬೇಕೆಂದು ಆಗ್ರಹಿಸಿದರು.
ಕಾರ್ಪೊರೇಟರ್ ಗಳಿಗೆ ಪಾಲಿಕೆಯಲ್ಲಿ ಅಧಿಕಾರಿಗಳು ಸರಿಯಾಗಿ ಯಾವುದೇ ಮಾಹಿತಿಯನ್ನು ನೀಡುವುದಿಲ್ಲ ಎಂದು ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಅಧಿಕಾರಿಗಳ ವಿರುದ್ದ ಆಕ್ರೋಶವನ್ನು ಹೋರ ಹಾಕಿದರು. ದಕ್ಷಿಣ ಕ್ಷೇತ್ರದ ಸಾಕಷ್ಟು ಸ್ಮಾರ್ಟ್ ಸಿಟಿ ಅನುಧಾನದಡಿ ಸಾಕಷ್ಟು ಅಭಿವೃಧಿ ಕೆಲಸಗಳನ್ನು ಮಾಡಬೇಕಾಗಿದೆ. ಆದರೆ ಇಲ್ಲಿನ ಅಧಿಕಾರಿಗಳು ಯಾವುದಕ್ಕೂ ಸರಿಯಾಗಿ ಸ್ಪಂದನೆ ಮಾಡುತ್ತಿಲ್ಲ ಇದೇ ರೀತಿ ಮುಂದು ವರೆದರೆ ಪಾಲಿಕೆಯ ವಿರುದ್ದ ಹೋರಾಟ ಮಾಡಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆಯನ್ನು ನೀಡಿದರು.
ಅದರಂತೆಯೇ ಎನ್.ಜಿ.ಟಿ ಯೋಜನೆಯ ಅನುದಾನವನ್ನು ಉತ್ತರ ದಕ್ಷಿಣಕ್ಕೆ 50-60 ಅನುಪಾನದಲ್ಲಿ ಅಥವಾ 50-50 ಅನುಪಾತದಲ್ಲಿಯೂ ನೀಡದೇ, ಸರಕಾರಕ್ಕೆ ತಪ್ಪು ಮಾಹಿತಿ ನೀಡಿ, ಯುಜಿಡಿ ಕಾಮಗಾರಿಗಳಿಗೆ ಅನುದಾನವನ್ನು ಸರಿಯಾಗಿ ನೀಡದೆ ಇರುವ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
ಬೆಳಗಾವಿಯ ಮಹಾನಗರ ಪಾಲಿಕೆಯ ವ್ಯಕ್ತಿಯಲ್ಲಿ ನಗರಾಧ್ಯಂತ ಇನ್ನು ಸಾಕಷ್ಟು ಅಭಿವೃಧಿ ಕಾಮಗಾರಿಗಳು ಮಾಡಬೇಕಾಗಿದೆ, ಆದರೆ ಈಗಿನ ಸರಕಾರ ಪರಿಸ್ಥಿಯಲ್ಲಿ ಅರಿಯಾಗಿ ಅನುಧಾನ ಬಾರದೇ ಇರುವುದರಿಂದ ಸರಿಯಾಗಿ ಯಾವುದೇ ಕೆಲಸಗಳು ಯಾಗುತ್ತಿಲ್ಲ, ಸ್ಥಳೀಯರಿಗೆ ನಾವುಗಳು ಉತ್ತರಿಸುವುದಕ್ಕೆ ಕಷ್ಟವಾಗುತ್ತಿದೆ ಎಂದರು.
ಒಟ್ಟಾರೆಯಾಗಿ ಸೋಮವಾರ ಮಹಾನಗರ ಪಾಲಿಕೆಯಲ್ಲಿನ ಸಾಮಾನ್ಯ ಸಭೆಯಲ್ಲಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ ಪಾಲಿಕೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಬೆನ್ನೆಲೆಯಲ್ಲಿ ಎಚ್ಚತುಕೊಂಡ ಪಾಲಿಕೆ.
