ಬೆಳಗಾವಿ-12 : ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮರಕುಂಬಿ ಗ್ರಾಮದ ಬಾಯ್ಕರ್ ದುರಂತದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಾರಣ ಎನು ಯಾರಿಂದ ಬೇಜವಾಬ್ದಾರಿ ಕಾರಣವಾಗಿದೆ ಎಂಬುದನ್ನು ನಿರ್ಧರಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಸ್ಸಿ ಕೆ.ರಾಮರಾಜನ್ ಹೇಳಿದರು.
ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮರಕುಂಬಿ ಗ್ರಾಮದಲ್ಲಿರು ಇನಾಮದಾರ್ ಸಕ್ಕರೆ ಕಾರ್ಖಾನೆಯಲ್ಲಿ ಟೆಕ್ನಿಕಲ್ ನುರಿತ ಸಿಬ್ಬಂದಿಯನ್ನು ನೇಮಕ ಮಾಡದೇ ಇದ್ದಲ್ಲಿ ಸಂಬಂಧಪಟ್ಟವರನ್ನು ಬಂಧಿಸಬೇಕಾದ ಪರಿಸ್ಥಿತಿ ಎದುರಾಗಲಿದೆ ಎಂದರು. ಇನಾಮದಾನ ಸಿಕ್ಕಗೆ ಕಾರ್ಖಾನೆಯಲ್ಲಿ ಸೇಫ್ಟಿ ಮ್ಯಾನೇಜರ್ ನೇಮಕ ಮಾಡಿಲ್ಲ ಎಂಬ ಆರೋಪಗಳೂ ಇದ್ದು ಸೇಫ್ಟಿ ಮಾನೇಜರ್ ಇದ್ದಾರಾ.? ಇದ್ದರೆ ಯಾವಾಗ ನೇಮಕ ಮಾಡಲಾಗಿದೆ? ಎಂಬುದರ ಬಗ್ಗೆ ಸಮಗ್ರ ಪರಿಶೀಲನೆ ನಡೆಯಲಿದೆ ಎಂದು ಹೇಳಿದರು.
ಬಾಯ್ಲರ್ ಗಳ ಉಸ್ತುವಾರಿ ಮತ್ತು ಸುರಕ್ಷತಾ ಕ್ರಮಗಳ ಮೇಲ್ವಿಚಾರಣೆ ಬಾಯ್ಸರ್ ಇನ್ಸೆಕ್ಟರ್ ಅವರ ಜವಾಬ್ದಾರಿಯಾಗಿದೆ. ಅವಧಿ ಅವಧಿಗೆ ಪರಿಶೀಲನೆ ನಡೆಸದೇ ಇದ್ದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಸ್ಪಿ ರಾಮರಾಜನ್ ಎಚ್ಚರಿಕೆ ನೀಡಿದ್ದಾರೆ.
ಡಿಟೈಲ್ ವರದಿ ಬಂದ ನಂತರ ಮಾತ್ರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಈವರೆಗೆ ಯಾರನ್ನು ಬಂಧಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾರ್ಮಿಕರಿಗೆ ಅಗತ್ಯವಾದ ಎಲ್ಲಾ ಸುರಕ್ಷತಾ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ಒದಗಿಸಿದ್ದರೆ ಯಾವುದೇ ದುರಂತ ಸಂಭವಿಸುವುದಿಲ್ಲ. ಸೌಲಭ್ಯಗಳನ್ನು ನೀಡದೇ ಇದ್ದರೆ ಕಾರ್ಖಾನೆ ಮಾಲೀಕರ ವಿರುದ್ರ ಕಮ ಕೈಗೊಳ್ಳಲಾಗುತ್ತದೆ. ಎಲ್ಲ ಸೌಲಭ್ಯಗಳನ್ನು ಒದಗಿಸಿದ್ದರೂ ನಿರ್ಲಕ್ಷ್ಯ ತೋರಿದ್ದರೆ ಸೇಫ್ಟಿ ಮ್ಯಾನೇಜರ್ ಸೇರಿದಂತೆ ಘಟನೆಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಜರುಗಲಿದೆ ಎಂದು ಪೊಲೀಸ್ ವರಿಷ್ಟಾಕಾರಿಗಳು ತಿಳಿಸಿದ್ದಾರೆ.
