ಬೆಳಗಾವಿ-11 : ವೈದ್ಯನೊಬ್ಬನ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ ಗಾಂಜಾ ಪತ್ತೆಯಾಗಿದ್ದು, ಖಚಿತ ಮಾಹಿತಿ ಮೇರೆಗೆ ಮಾಳಮಾರುತಿ ಪೊಲೀಸರು ವೈದ್ಯನ ಮೆನೆಯ ಮೇಲೆ ದಾಳಿ ಗಾಂಜಾ ಹಾಗೂ ಆರೋಪಿ ವೈದ್ಯನನ್ನು ಬಂಧನ ಮಾಡಲಾಗಿದೆ.
ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದ, ರಾಹುಲ್ ಬಂಟಿ ಗಾಂಜಾ ಸೇವನೆ ಮಾಡಿ ರೋಗಿಗಳ ತಪಾಸಣೆ ನಡೆಸುತ್ತಿದ್ದರು ಎಂಬ ಆರೋಪವು ಈತನ ಮೇಲಿತ್ತು. ಈ ಕುರಿತು ಪೊಲೀಸರು ಕೆಲವೊಂದಿಷ್ಟು ಮಾಹಿತಿಯನ್ನು ಕಲೆ ಹಾಕಿದ ಬಳಿಕ ವೈದ್ಯನ ಮೆನೆಯ ಮೇಲೆ ದಾಳಿ ನಡೆಸಿದ ಮಾಳಮಾರುತಿ ಪೊಲೀಸರು ಶನಿವಾರ ರಾಹುಲ್ ಬಂಟಿ ಮನೆಗೆ ನುಗ್ಗಿ ಆತನ ಬೆಡ್ ರೂಮ್ ನಲ್ಲಿ ಬಚ್ಚಿಟ್ಟಿದ್ದ, 134 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.
ರಾಹುಲ್ ವಿಠಲ್ ಬಂಟಿ ವಿರುದ್ಧ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
