ಬೆಳಗಾವಿ-10: ನೆಹರೂ ನಗರ 2ನೇ ಹಾಗೂ 3ನೇ ಕ್ರಾಸ್ ಗೆ ಸಂಪರ್ಕಿಸುವ ಡ್ರೈನೇಜ್ ಪೈಪ್ ಒಡೆದಿರುವುದರಿಂದ, ಮಲಮೂತ್ರ ಹಾಗೂ ಚರಂಡಿ ನೀರು ಶ್ರೀಬಸವಣ್ಣಾ ಮಹಾದೇವ ದೇವಸ್ಥಾನದ ಪ್ರವೇಶ ದ್ವಾರ ಮತ್ತು ಆವರಣದೊಳಗೆ ಹರಿದು ಬರುತ್ಗತಿರುವುದರಿಂದ ಪ್ರತಿ ನಿತ್ಯ ದೇವಸ್ಥಾನಕ್ಕೆ ಬರುವ ಭಕ್ತಾಧಿಗಳಿಗೆ ಸಾಕಷ್ಟು ತೊಂದರೆ ಯಾಗುತ್ತಿದೆ ಎಂದು ಸ್ಥಳೀಯರು ಪಾಲಿಕೆಯ ವಿರುದ್ದ ಆಕ್ರೋಶ ಹೋರ ಹಾಕುತ್ತಿದ್ದಾರೆ.
ಈ ದೇವಸ್ಥಾನಕ್ಕೆ ಭಕ್ತಾಧಿಗಳು ಸದಾಶಿವ ನಗರ, ಶಾಹೂನಗರ, ಶಿವಬಸವನಗರ ಸೇರಿದಂತೆ ಸುತ್ತಮುತ್ತಲ ನಗರಗಳಿಂದ ಅನೇಕ ಭಕ್ತಾದಿಗಳು ಪ್ರತಿದಿನ ಪೂಜೆ ಮತ್ತು ದರ್ಶನಕ್ಕಾಗಿ ಆಗಮಿಸುತ್ತಾರೆ. ಆದರೆ ಇಲ್ಲಿನ ಡ್ರೈನೇಜ್ ಸಮಸ್ಯೆಯಿಂದ ಭಕ್ತರ ದೇವಸ್ಥಾನಕ್ಕೆ ಬರುವುದಕ್ಕೆ ಹಿಂಡೆಟು ಹಾಕುತ್ತಿದ್ದಾರೆ ಎಂದು ದೇವಸ್ಥಾನದ ಕಮಿಟಿಯು ಆರೋಪಿಸುತ್ತಿದೆ.
ದೇವಸ್ಥಾನದ ಬಳಗಡೆ ಅಷ್ಟೇ ಅಲ್ಲದೆ, ದೇವಸ್ಥಾನದ ಅಡುಗೆ ಮನೆ ಹಾಗೂ ನಿರ್ವಹಣೆಗೆ ಮಾಡುತ್ತಿರುವ ಕುಟುಂಬದ ಮನೆಗಳೊಳಗೂ ಚರಂಡಿ ನೀರು ನುಗ್ಗುತ್ತಿದ್ದು, ಅಲ್ಲಿ ವಾಸಿಸುವ ಚಿಕ್ಕ ಮಕ್ಕಳಿಗೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಎನ್ನಲಾಗುತ್ತದೆ.
ಇದಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಹಾಗೂ ಸ್ಥಳಿಯ ಕಾರ್ಪೂರೆಟರ್ ಗಳು, ಸ್ಥಳಕ್ಕೆ ಆಗಮಿಸಿ ಪರಿಸ್ಥತಿಯ ಬಗ್ಗೆ ಪರಿಶೀಲನೆ ನಡೆಸಿ, ಒಡೆದಿರುವ ಡ್ರೈನೇಜ್ ಪೈಪ್ ದುರಸ್ತಿ ಮಾಡಿ ಸಮಸ್ಯೆಯನ್ನು ಬೇಗ ನಿವಾರಿಸುವಂತೆ ದೇವಸ್ಥಾನದ ಕಮಿಟಿ ಹಾಗೂ ಸ್ಥಳಿಯ ಜನತೆಯು ಪಾಲಿಕೆಗೆ ಮನವಿ ಮಾಡಿದೆ.
