ಬೆಳಗಾವಿ-10:ಭಾರತ ಗೌರವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಬಿಟ್ಟರೆ ಪ್ರಸ್ತುತ ಪ್ರಧಾನಿ ನರೇಂದ್ರ ಮೋಧೀಜಿ ಅವರು ದೇಶದ ಅಭಿವೃದ್ಧಿಗೆ ಅನೇಕ ಸುಧಾರಣೆ ಕೆಲಸ ಮಾಡಿ ದೇಶದಲ್ಲಿ ಅಷ್ಟೇ ಅಲ್ಲ ಜಾಗತಿಕ ಮಟ್ಟದಲ್ಲಿ ಭಾರತ ದೇಶವನ್ನು ಉನ್ನತ ಸ್ಥಾನಕ್ಕೆ ತಂದು, ಈಗ ಆರ್ಥಿಕವಾಗಿ ನಮ್ಮ ಕೇಂದ್ರ 3 ನೇ ಸ್ಥಾನ ಹೊಂದಿದ್ದು , 2047 ನೇ ವರ್ಷಕ್ಕೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 100 ವರ್ಷ ಸಂದರ್ಭದಲ್ಲಿ ಅದಕ್ಕಾಗಿ ಇತ್ತೀಚಿಗೆ ನಡೆದ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಮೋಧೀಜಿ ಸರ್ಕಾರ ರೈತ ಅಭಿವೃದ್ಧಿಗೆ, ಗ್ರಾಮೀಣ ಮಟ್ಟದ ಅಭಿವೃದ್ಧಿಗೆ ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಷಿನ್ ವಿ ಬಿ ಜಿ ರಾಮ ಜಿ ಅಂತಾ ಹೆಸರು ಕೊಟ್ಟು ಈ ಬಿಲ್ಲು ಸಂಸತನಲ್ಲಿ ಪಾಸ ಮಾಡಲಾಗಿದೆ.ಮೊದಲು ಜಾರಿಗೆ ಇದ್ದ ನರೇಗಾ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲವು ಮಾರ್ಗದರ್ಶಿ ನೀಡಿ ಲೋಪದೋಷಗನ್ನು ಸರಿಪಡಿಸಿ 2026 ರಲ್ಲಿ ಗ್ರಾಮೀಣ ಜನರಿಗೆ ಉದ್ಯೋಗ ಖಾತ್ರಿ ನೀಡುವ ಕುರಿತು ಬಿಲ್ಲು ಪಾಸ ಮಾಡಲಾಗಿದೆ. ಮೊದಲು 100 ದಿನ ಇದ್ದ ಉದ್ಯೋಗವನ್ನು 125 ದಿನಕ್ಕೆ ಹೆಚ್ಚಿಸಲಾಗಿದೆ.ದಿನದ ಗೌರವ ಮೊತ್ತವನ್ನು ರೂ. 375/- ಹೆಚ್ಚಿಸಲಾಗಿದೆ. ಮೊದಲು 2,3 ತಿಂಗಳು ಬಿಲ್ಲು ಆಗ್ತಾ ಇರಲಿಲ್ಲ , ಈಗ ವಾರದಿಂದ 14 ದಿನಗಳಲ್ಲಿ ನೀಡಲಾಗತ್ತೆ , ಎ ಐ ಟೆಕ್ನಾಲಜಿ, ಭ್ರಷ್ಟಾಚಾರ ರಹಿತ ಕೆಲಸ, ನೇರ ಹಣ ಪಲಾನುಭವಿಗಳ ಖಾತೆಗೆ ಜಮೆ, ಈ ಯೋಜನೆಯಿಂದ ರಾಜ್ಯಕ್ಕೆ 17000 ಕೋಟಿ ಲಾಭ ಸಿಗಲಿದೆ ಎಂದು ಮಾಜಿ ಸಚಿವೆ ಹಾಗೂ ನಿಪ್ಪಾಣಿ ಶಾಸಕರಾದ ಶಶಿಕಲಾ ಜೊಲ್ಲೆ ಹೇಳಿದರು.
ಅವರು ನಗರದ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಪಾರದರ್ಶಕ ಅನುಧಾನ. ಮಹಿಳೆಯರಿಗೆ ಪ್ರಾಮುಖ್ಯತೆ, ಒಬ್ಬಂಟಿ ಮಹಿಳಿಗೆ ಪ್ರಾಶಸ್ಟ್ಯ, ಅಂಗವಿಕಲರಿಗೆ ಅಳವಡಿಕೆ, ವೃದ್ಧರಿಗೆ, ತೃತೀಯ ಲಿಂಗದವರಿಗೂ ಕೆಲಸದಲ್ಲಿ ಬಳಕೆ , 2014 ರಲ್ಲಿ 25.5 ಇದ್ದ ಬಡತನ ಇಂದು 4.86 ಕ್ಕೆ ಇಳಿದಿದೆ, 33 ಸಾವಿರ ಕೋಟಿ ಇದ್ದ ಬಜೆಟ್ ಈಗ 2.86 ಲಕ್ಷ ಕೋಟಿ,2024 ರಲ್ಲಿ 1660 ಕೋಟಿ ಕಾರ್ಮಿಕರು ಈಗ 3219 ಕೋಟಿ, ಮಹಿಳಾ ಕಾರ್ಮಿಕರು ಆಗ 48% ಈಗ 57 % ಹೆಚ್ಚಳ, ಯು ಪಿ ಎ ಸರ್ಕಾರ ಅಧಿಕಾರ ಇದ್ದಾಗ 4.33 ಲಕ್ಷ ನಕಲಿ ಜಾಬಕಾರ್ಡ್,2014 ರಲ್ಲಿ 1.53 ಲಕ್ಷ ಪೂರ್ಣಗೊಂಡ ಕಾಮಗಾರಿಗಳು ಈಗ 8.62 ಲಕ್ಷ ಕಾಮಗಾರಿಗಳು ಮುಗಿದಿವೆ. ಕಾಂಟ್ರಾಕ್ಟಾರ ಭ್ರಷ್ಟಾಚಾರ ವ್ಯವಸ್ಥೆ ನಿಲ್ಲಿಸಿ ಕೆಲ ಬದಲಾವಣೆ ಮಾಡಿ ಜಾರಿಗೆ ತಂದಿದ್ದು ಎಂದು ಹೇಳಿದರು.
ಬಿಜೆಪಿ ಹಿರಿಯ ಮುಖಂಡ ಎಮ್ ಬಿ ಜಿರಲಿ ಮಾತನಾಡಿ ಕರ್ನಾಟಕ ಸರ್ಕಾರ ಈ ನೂತನ ಯೋಜನೆಯ ವಿರುದ್ಧ ಜನರಿಗೆ ತಪ್ಪು ಮಾಹಿತಿ ನೀಡುತ್ತಿದೆ. ಈ ಯೋಜನೆಯ ಮುಖ್ಯ ಉದ್ದೇಶ ರೈತರ ನೀರಾವರಿಗೆ ಒತ್ತು,ಗ್ರಾಮೀಣ ಜನ ವಲಸೆ ಹೋಗದಿರಲು ಕ್ರಮ , ಕೆಲಸಗಾರರ ಸಿಗದೇ ತೊಂದರೆ ಅನುಭವಿಸಿ ಕೃಷಿ ಚಟುವಟಿಕೆಗೆ ಹಿನ್ನಡೆ ಆಗುತ್ತಿರುವ ಸಲುವಾಗಿ ರೈತರಿಗೆ ಉತ್ತೇಜನ ನೀಡಲು, ಮೂಲ ಸೌಕರ್ಯಗಳಿಗೆ ಒತ್ತು, ಸುಲಭ ರಸ್ತೆ, ಈ ಎಲ್ಲ ಉದ್ದೇಶಗಳಿಂದ 2047 ಕ್ಕೆ ಜಾಗತಿಕ ಮಟ್ಟದಲ್ಲಿ ನಂ 1 ರಾಷ್ಟ್ರ ಮಾಡಲು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು, ಸ್ಥಳೀಯ ಗ್ರಾಮ ಪಂಚಾಯತನಿಂದ ಕ್ರಿಯಾಯೋಜನೆ ತಯಾರು ಆಗತ್ತೆ ಅದನ್ನು ಬಿಟ್ಟು ಈ ಯೋಜನೆಯ ವಿರುದ್ಧ ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಸುಭಾಷ ಪಾಟೀಲ, ಮಾಜಿ ಶಾಸಕರಾದ ಸಂಜಯ ಪಾಟೀಲ, ಅರವಿಂದ ಪಾಟೀಲ, ನಗರ ಅಧ್ಯಕ್ಷೆ ಗೀತಾ ಸುತಾರ, ಮುಖಂಡ ಮುರುಘೇಂದ್ರಗೌಡ ಪಾಟೀಲ, ಮಹಾನಗರ ಪಾಲಿಕೆ ಸದಸ್ಯ ಹಣಮಂತ ಕೊಂಗಾಡಿ, ಮಾಧ್ಯಮ ವಕ್ತಾರ ಸಚಿನ ಕಡಿ, ಜಿಲ್ಲಾ ಬಿಜೆಪಿ ಮುಖಂಡರು ಪದಾಧಿಕಾರಿಗಳು ಹಾಜರಿದ್ದರು.
