ಬೆಳಗಾವಿ-02: ತಾಲೂಕಿನ ಸಾಂಬ್ರಾ ಗ್ರಾಮದಲ್ಲಿ, ನೀರಿನ ಮೋಟಾರ್ ಚಾಲನೆ ಮಾಡುವಾಗ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ಶಾಲಾ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿರುವ ಘಟನೆಯೊಂದು ಶುಕ್ರವಾರ ನಡೆದಿದೆ.

ಮೃತ ಬಾಲಕಿಯನ್ನು ಪರಿಣಿತಿ ಚಂದ್ರು ಪಾಲಕರ್ (13) ಎಂದು ಗುರುತಿಸಲಾಗಿದೆ. ಈ ವಿಧ್ಯಾರ್ಥಿನಿ ಸಾಂಬ್ರಾ ಗ್ರಾಮದ ಮಹಾತ್ಮಾ ಫುಲೆ ಗಲ್ಲಿಯಲ್ಲಿ ತಂದೆ ತಾಯಿ ಕುಟುಂಬದೊಂದಿಗೆವಾಸವಾಗಿದ್ದು, ಸ್ಥಳೀಯ ಸರಕಾರಿ ಮರಾಠಿ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮೃತ ವಿಧ್ಯಾರ್ಥಿನಿ.
ಶುಕ್ರವಾರ ಬೆಳಗ್ಗಿನ ಜಾವ ಮನೆಯಲ್ಲಿದ್ದ ನೀರಿನ ಮೋಟಾರ್ ಸ್ವಿಚ್ ಹಾಕುವ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿ ಪರಣಾಮವಾಗಿ ಬಾಲಕಿಗೆ ಜೋರಾದ ಆಘಾತ ಉಂಟಾಗಿದೆ. ಶಾಕ್ನ ತೀವ್ರತೆಯಿಂದ ಸ್ಥಳದಲ್ಲಿಯೇ ಸಾವನಪ್ಪಿದ್ದಾಳೆ ಎನ್ನಲಾಗಿದೆ.
ತಕ್ಷಣವೇ ಗಲ್ಲಿಯ ಯುವಕರು ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಬಾಲಕಿಯನ್ನು ತಪಾಸಣೆ ನಡೆಸಿದ ವೈದ್ಯರು ಬಾಲಕಿ ಆಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮಗಳ ಅಕಾಲಿಕ ಮರಣದಿಂದಾಗಿ ಕುಟುಂಬಸ್ಥರ ಆಕ್ರನಂದ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಮಾರಿ ಹಾಳ ಪೊಲೀಸರುನ ಬೇಟಿ ನೀಡಿ ಪರಿಶೀಲನೆ ನಡೆಸಿ .ಪ್ರಕರಣವನ್ನು ದಾಖಲಿಸಿಕೊಂಡರು.
