ಬೆಳಗಾವಿ-03 : ಕಾಂಗ್ರೆಸ್ ಸರಕಾರ ಶಕ್ತಿ ಯೋಜನೆಯನ್ನು ಮಾಡಿ ರಾಜ್ಯದ ಜನತೆಗೆ ದೊಡ್ಡ ಮಟ್ಟದಲ್ಲಿ, ತೊಂದರೆ ಮಾಡಿದ್ದಾರೆಂದು ಶಾಲಾ ಕಾಲೇಜು ವಿಧ್ಯಾರ್ಥಿಗಳು ಸರಕಾರ ವಿರುದ್ದ ಆಕ್ರೋಶವನ್ನು ಹೋರ ಹಾಕುತ್ತಿದ್ದಾರೆ.

ದಿನ ಬೆಳಗಾದರೆ ಶಾಲಾ ಕಾಲೇಜುಗಳಿಗೆ ತೆರಳಬೇಕಾದರೆ ವಿಧ್ಯಾರ್ಥಿಗಳು ಸಾಕಷ್ಟು ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಈ ಕಾಂಗ್ರೆಸ್ ಸರಕಾರವು ತಮ್ಮ ಅಧಿಕಾರಕ್ಕಾಗಿ ಶಕ್ತಿ ಯೋಜನೆಯನ್ನು ಜಾರಿ ಮಾಡಿಲಾಗಿದೆ. ಆದರೆ ಈ ಶಕ್ತಿ ಯೋಜನೆ ನಮ್ಮಗೆನೂ ಪ್ರಯೋಜನೆ ಇಲ್ಲವೆಂದು ವಿಧ್ಯಾರ್ಥಿಗಳು ಸಿದ್ದರಾಮಯ್ಯ ಸರಕಾರಕ್ಕೆ ಚಿಮ್ಮಾರಿ ಹಾಕುತ್ತಿದ್ದೇವೆ ಎಂದು ಆರೋಪಿಸಿದರು.
ನಾವುಗಳು ಪ್ರತಿನಿತ್ಯ ಶಾಲಾ ಕಾಲೇಜುಗಳಿಗೆ ತೆರಳಬೇಕಾದರೆ ಸರಿಯಾದ ಸಮಯಕ್ಕೆ ಬಸ್ಸ್ ಗಳು ಸಿಗುವುದಿಲ್ಲ, ಬಸ್ಸ ಬಂದರು ಅದರಲ್ಲಿ ಕುಳಿತುಕೊಳ್ಳುವುದಕ್ಕೆ ಜಾಗ ಇಲ್ಲ, ಬಸ್ಸ ವಿಲ್ಲವೆಂದು ಬಿಟ್ಟರೆ. ಸರಿಯಾದ ಸಮಯಕ್ಕೆ ಶಾಲೇಜುಗಳ ಕ್ಲಾಸ್ ಗೆ ಹೋಗುವುದಕ್ಕೆ ಯಾಗುತ್ತಿಲ್ಲ. ಪ್ರತಿನಿತ್ಯವು ನಾವುಗಳು ಬಸ್ಸನ ಬಾಗಿಲಿನಲ್ಲಿ ಜೋತು ಬಿದ್ದುಕೊಂಡು ತೆರಳಬೇಕಾಗುತ್ತಿದೆ. ಆಯಾ ತಪ್ಪಿ ಬಿದ್ದರೆ ತಮ್ಮ ಪ್ರಾಣ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ ಎಂದು ಸಾರಿಗೆ ಇಲಾಖೆ ಹಾಗೂ ಸರಕಾರದ ವಿರುದ್ದ ವಿಧ್ಯಾರ್ಥಿಗಳು ಆಕ್ರೋಶ ಹೋರ ಹಾಕಿದರು.
ನಮಗೆ ಶಕ್ತಿ ಯೋಜನೆ ಬೇದ ಶಾಲಾ ಕಾಲೇಜುಗಳ ಸಮಯಕ್ಕೆ ಪ್ರತ್ಯೇಕವಾಗಿ ಬಸ್ಸಗಳ ವ್ಯವಸ್ಥೆ ಮಾಡಬೇಕು, ಈ ಪ್ರತ್ಯೇಕ ಬಸ್ಸಗಳಲ್ಲಿ ವಿಧ್ಯಾರ್ಥಿಗಳನ್ನು ಬಿಟ್ಟು ಬೇರೆ ಯಾರಿಗು ಅವಕಾಶ ನೀಡಬಾರದು, ಇಲ್ಲವಾದಲ್ಲಿ ಸರಕಾರ ವಿರುದ್ದ ವಿಧ್ಯಾರ್ಥಿಗಳು ರಾಜ್ಯಾಧ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದ ವಿಧ್ಯಾರ್ಥಿಗಳು.
