ಬೆಳಗಾವಿ-03: ಯಾವುದೇ ಕಾರಣಕ್ಕೂ ರಾಜೀ ಸಂಧಾನಕ್ಕೆ ಅವಕಾಶ ಕೊಡೊದಿಲ್ಲ. ಎಫ್ಐಆರ್ ಮಾಡದೇ ರಾಜೀ ಪಂಚಾಯತ್ ಮಾಡಲು ನನ್ನ ಅವಧಿಯಲ್ಲಿ ಅವಕಾಶವಿಲ್ಲ. ಕಾನೂನು ಎಲ್ಲರಿಗೂ ಒಂದೇ ಎಂದು ಬೆಳಗಾವಿಯ ನೂತನ ಎಸ್ ಪಿ ಕೆ.ರಾಮರಾಜನ್ ಅವರು ತಿಳಿಸಿದರು.
ಸಿಐಡಿ ಡಿಐಜಿಪಿಯಾಗಿ ವರ್ಗಾವಣೆಗೊಂಡ ಹಿಂದಿನ ಎಸ್ಪಿ ಡಾ.ಭೀಮಾಶಂಕರ ಗುಳೇದ್ ಸ್ಥಾನಕ್ಕೆ ಕೆ.ರಾಮರಾಜನ್ ಅಧಿಕಾರ ಸ್ವೀಕಾರರಿಸಿಕೊಂಡಿದ್ದಾರೆ. ಕೊಡುಗು ಜಿಲ್ಲಾ ಎಸ್ಪಿಯಾಗಿ ಕೆ.ರಾಮರಾಜನ್ ಅವರು ಸೇವೆ ಸಲ್ಲಿಸಿದ್ದು ಇದೀಗ ಬೆಳಗಾವಿ ಜಿಲ್ಲೆಯ ಎಸ್ ಪಿ ಯಾಗಿ ಕೆಲಸ ನಿರ್ವಹಿಸಲಿದ್ದಾರೆ.
ಅಧಿಕಾರವನ್ನು ಸ್ವೀಕರಿಸಿಕೊಂಡ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರಕಾರ ನನಗೆ ದೊಡ್ಡ ಜವಾಬ್ದಾರಿ ಕೊಟ್ಟಿದೆ. ಐಪಿಎಸ್ ತರಬೇತಿ ಅವಧಿಯಲ್ಲಿ ಐದು ದಿನಗಳ ಕಾಲ ಬೆಳಗಾವಿಯಲ್ಲಿ ಕಳೆದಿದ್ದೇನೆ. ನನ್ನ ಟೀಮ್ ಜೊತೆಗೆ ನಾನು ಜನಸ್ನೇಹಿಯಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ನಮ್ಮ ಕಛೇರಿಗೆ ನ್ಯಾಯಕ್ಕಾಗಿ ಬರೋರು ನೇರವಾಗಿ ನನ್ನನ್ನು ಸಂಪರ್ಕಿಸಿ. ನ್ಯಾಯ ಕೊಡುವ ಉದ್ದೇಶದಿಂದ ಕೆಲಸ ಮಾಡುತ್ತೇನೆ. ನ್ಯಾಯಕ್ಕಾಗಿ ಬರೋರಿಗೆ ಎಫ್ಐಆರ್ ದಾಖಲಿಸಲು ಅವಕಾಶ ಇದೆ. ಯಾವುದೇ ಕಾರಣಕ್ಕೂ ರಾಜೀ ಸಂಧಾನಕ್ಕೆ ಅವಕಾಶ ಕೊಡೊದಿಲ್ಲ. ಎಫ್ಐಆರ್ ಮಾಡದೇ ರಾಜೀ ಪಂಚಾಯತ್ ಗೆ ನನ್ನ ಅವಧಿಯಲ್ಲಿ ಅವಕಾಶವಿಲ್ಲ. ಕಾನೂನು ಎಲ್ಲರಿಗೂ ಒಂದೇ. ಪೊಲೀಸರನ್ನ ನೋಡಿ ಯಾರೂ ಭಯ ಪಡಬಾರದು. ಕಾನೂನಿನ ಭಯ ಇರಬೇಕು ಎಂದು ಜನತೆಯಲ್ಲಿ ಮನವಿ ಮಾಡಿಕೊಂಡರು.
