ಬೆಳಗಾವಿ-02 : ಹುಬ್ಬಳ್ಳಿ ತಾಲೂಕಿನ ಇನಾಮ ವೀರಾಪೂರ ಗ್ರಾಮದಲ್ಲಿ ಅಂತರಜ್ಯಾತಿ ವಿವಾಹಕ್ಕೆ ಮಾನ್ಯ ಮಹಿಳೆಯನ್ನು ತಂದೆ ಹಾಗೂ ಕುಟುಂಬಸ್ಥರು ಸೇರಿ ಮರ್ಯಾದೆ ಹತ್ಯೆಯನ್ನು ಖಂಡಿಸಿ, ಯುವ ಕರ್ನಾಟಕ ಭೀಮ್ ಸೇನಾ ಯುವ ಸಕ್ತಿ ಸಂಘಟನೆ ಪ್ರಕರಣವನ್ನು ಖಂಡಿಸಿ ನಗರದ ಡಾ. ಬಿಆರ್. ಅಂಬೇಡ್ಕರ್ ಉದ್ಯಾನ ವನದಿಂದ ಪ್ರತಿಭಟನಾ ರ‌್ಯಾಲಿ ನಡೆದೆ ಚನ್ನಮ್ಮ ವೃತ್ತದ ಮೂಲಕ ಜಿಲ್ಲಾಧಿಕಾರಿಗಳ ಕಛೇರಿಗೆ ನೂರಾರು ಕಾರ್ಯಕರ್ತರು ತೆರಳಿ ಪ್ರತಿಭಟಸಿ, ಡಿ.ಸಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯ ವೇಳೆ ಅಂತರಜ್ಯಾತಿ ವಿವಾಹದಿಂದ ಮಾನ್ಯಳ ತಂದೆ ಹಾಗೂ ಕುಂಟುಬಸ್ಥರು ಸೇರಿ ಹತ್ಯೆ ಮಾಡಿದವರು ವಿರುದ್ದ ಕಾನೂನಿನ ಕ್ರಮ ವಾಗಬೇಕು, ಮಾನ್ಯಳಿಗೆ ನ್ಯಾಯ ಸಿಗಬೇಕೆಂದು ಪ್ರತಿಭಟನೆಯಲ್ಲಿ ಒತ್ತಾಯಿಸಿದರು.
