ಬೆಳಗಾವಿ-01 : 2025 ಕ್ಕೆ ಗೂಡ್ ಬೈಯ್ ಹೇಳಿ 2026 ಕ್ಕೆ ಸ್ವಾಗತ ಮಾಡಿಕೊಂಡ ಬೆಳಗಾವಿ ಜನತೆಯು, ಗುರುವಾರ ಬೆಳಿಗ್ಗೆಯಿಂದಲ್ಲೇ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದುಕೊಂಡರು.
ಬೆಳಗಾವಿ ತಾಲೂಕಿನ ಪಂತ ಬಾಳೇಕುಂದ್ರಿಯ ದತ್ತ ಮಹಾರಾಜ್ ದೇವಸ್ಥಾನದಲ್ಲಿ ಸಾವಿರಾರು ಭಕ್ತರು ಬೆಳಿಗ್ಗೆಯಿಂದ ಬೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಅದೇ ರೀತಿ ಬೆಳಗಾವಿ ನಗರದದಲ್ಲಿರುವ ಸುಪ್ರಸಿದ್ದವಾದ ಕಪಿಲೇಶ್ವರ ದೇವಸ್ಥಾನಕ್ಕೆ ನಗರದ ನಿವಾಸಿಗಳು ತೆರಳಿ ವಿಶೇಷ ಪೂಜೆ ಮಂಗಳಾರತಿ ನೇರವೇರಿಸಿ, ಭಕ್ತಿಯಿಂದ ದೇವರಲ್ಲಿ ಬೇಡಿಕೊಂಡು ಹಳೆಯ ವರ್ಷದ ಎಲ್ಲ ದೋಷ ಕಷ್ಟಗಳನ್ನು ನಿವಾನೆ ಮಾಡಿ ಹೊಸ ವರ್ಷದಲ್ಲಿ ಎಲ್ಲರು ಸುಗಮವಾಗಿ ನೇರವೇರಲಿ ಎಂದು ದೇವರಲ್ಲಿ ಪ್ರರ್ಥನೆ ಮಾಡಿಕೊಂಡ ಭಕ್ತಾ ಧಿಗಳು.
