ಬೆಳಗಾವಿ-01 : ಹೊಸ ವರ್ಷದ ಸಂಭ್ರಮಾಚರಣೆ ವೇಳೆಯೇ ಹಿಂದಲಗಾ ಜೈಲಿನ ಆವರಣದಲ್ಲಿ ಡ್ರಗ್ಸ್, ಮೊಬೈಲ್ ಎಸೆದು ಪರಾರಿ ಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಬೆಳಗಾವಿ ನಗರದಲ್ಲಿರುವ ಹಿಂಡಲಗಾ ಜೈಲಿನ ಆವರಣದಲ್ಲಿ ದುಷ್ಕರ್ಮಿಗಳು ಬೆಳಿಗ್ಗಿನ ಜಾವ ಡ್ರಗ್ಸ್ ಹಾಗೂ ಮೊಬೈಲ್ ಗಳನ್ನು ಎಸೆದು ಪರಾರಿಯಾಗಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೇರೆಯಾಗಿದೆ.
ಮುಖಕ್ಕೆ ಮಾಸ್ಕ್ ಕಟ್ಟಿಕೊಂಡು ಬಂದಿದ್ದ ದುಷ್ಕರ್ಮಿಗಳು ಹಿಂಡಲಗಾ ಜೈಲಿನ ಆವರಣದಲ್ಲಿ ಬೆಳಿಗ್ಗಿನಸುಕ್ಕಿನ ಜಾವ 3ಗಂಟೆ ಸುಮಾರಿಗೆ ಡ್ರಗ್ಸ್ ಹಾಗೂ ಮೊಬೈಲ್ ಫೋನ್ ಗಳನ್ನು ಎಸೆದು ಹೋಗಿದ್ದಾರೆ. ಹಿಂಡಲಗಾ ಜೈಲಿನಲ್ಲಿಯೂ ಕೈದಿಗಳಿಗೆ ಮಾದಕ ವಸ್ತುಗಳು, ಮೊಬೈಲ್ ಫೋನ್ ಗಳು ಪೂರೈಕೆಯಾಗುತ್ತಿರುವ ಬಗ್ಗೆ ಈ ಘಟನೆ ಸಾಕ್ಷಿಯಾಗಿದೆ.
ಬೆಳಗಾವಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿಗಳ ಪತ್ತೆಗಾಗಿ ಬಲೆ ಬಿಸಿದರು.
