09/12/2025
20251208_152840

ಬೆಳಗಾವಿ-08:ಕರ್ನಾಟಕ ಸರಕಾರದ ವಿರುದ್ಧ ಮಹಾಮೇಳಾವ ನಡೆಸಲೆತ್ನಿಸಿದ ಎಂಇಎಸ್ ವಿರುದ್ಧ ಕರವೇ ನಗರದಲ್ಲಿ ತೀವ್ರ ಪ್ರತಿಭಟನೆ ನಡೆಸಿತು.

ಮರಾಠಾ ಏಕೀಕರಣ ಸಮಿತಿಯ ಎಲ್ಲ ಚಟುವಟಿಕೆಗಳನ್ನು ಜಿಲ್ಲಾಡಳಿತ ಹತ್ತಿಕ್ಕಬೇಕು. ಎಂಇಎಸ್ ಮುಖಂಡರನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಸರಕಾರವನ್ನು ಆಗ್ರಹಿಸಿದರು.
ಎಂಇಎಸ್ ರ್ಯಾಲಿ‌ನಡೆಸಲು ಉದ್ದೇಶೀಶೀಧ ಠೀಲಕವಾಡಿ ಪ್ರದೇಶದತ್ತ ಹೋಗಲೆತ್ನಿಸಿದ‌ ಕರವೇ ಕಾರ್ಯಕರಗತರನ್ನು‌ನಗರ ಪೊಲೀಸರು ಬಂಧಿಸಿ ಎಪಿಎಂಸಿ ಠಾಣೆಯತ್ತ ಕರೆದೊಯ್ದರು.
ಬೆಳಗಾವಿ ನಗರದಲ್ಲಿ ದಶಕಗಳಿಂದ ಕಿತಾಪತಿ ಹಾಗೂ ಅಶಾಂತಿ ಉಂಟು ಮಾಡಿ‌ಕರ್ನಾಟಕ‌ಮತ್ತು ಮಹಾರಾಷ್ಟ್ರ ನಡುವೆ ಇಲ್ಲದ ದ್ವೇಷ ಬೆಳೆಸುವಲ್ಲಿ ಬೆಳಗಾವಿ‌ನಗರಕ್ಕೆ ಸೀಮಿತ ಫುಂಡರ ಹಾವಳಿ ಹೆಚ್ಚಾಗಿದ್ದು ಸರಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ದೀಪಕ ಗುಡಗನಟ್ಟಿ, ವಾಜೀದ್ ಹಿರೇಕೋಡಿ ಹಾಗೂ ಇತರ ನಾಯಕರನ್ನು‌ ಪೊಲೀಸರು ವಶಕ್ಕೆ‌ ತೆಗೆದುಕೊಂಡರು.

Leave a Reply

Your email address will not be published. Required fields are marked *

error: Content is protected !!