ಬೆಳಗಾವಿ-08: ಸೋಮವಾರ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ನಡೆಸುತ್ತಿರುವ ಕರ್ನಾಟಕ ಸರಕಾರದ ವಿರುದ್ಧ ಮಹಾಮೇಳಾವ್ ಹೆಸರಿನಲ್ಲಿ ಕಿತಾಪತಿ ಮಾಡಲೆತ್ನಿಸಿದ ಮಹಾರಾಷ್ಟ್ರ ಏಕೀಕರಣ ಸಮಿತಿ ( ಎಂಇಎಸ್ ) ಮುಖಂಡರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.
ನಗರದ ಟಿಳಕವಾಡಿ ಪ್ರದೇಶದ ಮೈದಾನದಲ್ಲಿ ಸೇರಿಕೊಂಡು ಬೃಹತ್ ಸಭೆ ನಡೆಸಲು ಯತ್ನಿಸಿದ ಮರಾಠಾ ಏಕೀಕರಣ ಸಮಿತಿ ಹಲವು ಮುಖಂಡರನ್ನು ಬೆಳಗಾವಿ ನಗರ ಪೊಲೀಸರು ಬಂಧಿಸಿ ಬಸ್ಸಿನಲ್ಲಿ ಕರೆದೊಯ್ದರು.
ಸಾಂಪ್ರದಾಯಿಕವಾಗಿ ರಾಜ್ಯ ಸರಕಾರದ ವಿರುದ್ಧ ಪ್ರತಿವರ್ಷ ಕಿತಾಪತಿ ಮಾಡಿ ಅಶಾಂತಿ ಮೂಡಿಸುವ ಎಂಇಎಸ್ ಜಿಲ್ಲಾಡಳಿತದ ನಿಷೇಧದ ಹೊರತಾಗಿಯೂ ಮೇಳಾವ್ ಆಯೋಜನೆ ಮಾಡುತ್ತದೆ. ಎಂಇಎಸ್ ಮುಖಂಡ ಮಾಲೋಜಿ ಅಷ್ಠೇಕರ ಸಹಿತ ಹಲವು ಮುಖಂಡರನ್ನು ವಶಕ್ಕೆ ಪಡೆದರು.
