29/01/2026
IMG-20251206-WA0002

ಬೆಳಗಾವಿ-06: ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಶುಕ್ರವಾರ ಸಂಜೆ ಬಸವನ ಕುಡಚಿಯ ದೇವರಾಜ ಅರಸ ಕಾಲೋನಿಯಲ್ಲಿರುವ ನಾಗನೂರ ಶ್ರೀ ಶಿವಬಸವೇಶ್ವರ ಟ್ರಸ್ಟ್ ನ ಶ್ರೀಮತಿ ಚನ್ನಮ್ಮ ಬಸವಂತಯ್ಯ ಹಿರೇಮಠ್ ವೃದ್ಧಾಶ್ರಮಕ್ಕೆ ಭೇಟಿ ನೀಡಿ, ಅಲ್ಲಿನ ಕುಂದುಕೊರತೆಗಳನ್ನು ಆಲಿಸಿದರು.

ಆಶ್ರಮದಲ್ಲಿ ತಂಗಿರುವ ವೃದ್ಧರ ಆರೋಗ್ಯ, ದಿನನಿತ್ಯದ ಆರೈಕೆ, ಉಟೋಪಚಾರ, ವಸತಿ ವ್ಯವಸ್ಥೆ ಕುರಿತು ಸಮಗ್ರ ಮಾಹಿತಿ ಪಡೆದರು.

ಹಿರಿಯ ನಾಗರಿಕರಿಗೆ ಹೆಚ್ಚು ಆರಾಮದಾಯಕ ಮತ್ತು ಗೌರವಯುತವಾಗಿ ಬದುಕಲು ಅಗತ್ಯವಾದ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಚನ್ನರಾಜ ಸೂಚನೆ ನೀಡಿದರು.

ಈ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಚೇತನಕುಮಾರ್ ಎಂ.ಎನ್, ಸಿಡಿಪಿಒ ಸುಮಿತ್ರಾ ಡಿ.ಬಿ, ಸುರೇಖಾ ಪಾಟೀಲ, ಕಿರಣ ಚೌಗಲಾ, ಮನೋಹರ್ ಬೆಳಗಾಂವ್ಕರ್, ಮಹೇಶ ಕೋಲಕಾರ, ಮಹೇಶ ಪಾಟೀಲ ಮುಂತಾದವರು ಹಾಜರಿದ್ದರು.

error: Content is protected !!