ಬೆಳಗಾವಿ-07 : ಕಳೆದ ಚಳಿಗಾಲದ ಅಧಿವೇಶನದಲ್ಲಿ ಪಂಚಮಸಾಲಿಗರು ತಮ್ಮ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡುತ್ತಿದ್ದವರ ಮೇಲೆ ಲಾಠಿ ಚಾರ್ಚ್ ಮಾಡಿ ಒಂದು ವರ್ಷ ಕಳೆಯಿತು, ಅದರ ಪ್ರತಿಯಾಗಿ ಲಿಂಗಾಯತ ಪಂಚಮಸಾಲಿ ಮೀಸಲಾತಿಗಾಗ ಆಗ್ರಹಿಸಿ ಕೂಡಲ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮತ್ತೆ ಹೋರಾಟ ನಡೆಸುವುದಾಗಿ ಹೇಳಿದ್ದಾರೆ.
ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಸೆಂಬರ್ ೮ ರಿಂದ ಬೆಳಗಾವಿಯಲ್ಲಿ ಅಧಿವೇಶನ ಆರಂಭವಾಗಲಿದೆ.ಡಿಸೇಂಬರ್ 10. ಬುಧವಾರ ದಂದು ಪಂಚಮಸಾಲಿ ಸಮುದಾಯದಿಂದ ಮೌನ ಪ್ರತಿಭಟನೆ ನಡೆಸಲಿದ್ದೇವೆ ಎಂದು ತಿಳಿಸಿದರು.
ಲಿಂಗಾಯತ ಪಂಚಮಸಾಲಿ ಮೀಸಲಾತಿಗಾಗಿ ನಾವು 5 ವರ್ಷದಿಂದ ಹೋರಾಟ ಮಾಡ್ತಿದ್ದೇವೆ. ಪ್ರತಿ ವರ್ಷ ಬೆಳಗಾವಿ ಅಧಿವೇಶನದಲ್ಲಿ ಸರಕಾರದ ಗಮನ ಸೆಳೆಯಲು ಹೋರಾಟ ಮಾಡ್ತಿದ್ದೇವೆ. 2012 ರಲ್ಲಿ ಅಧಿವೇಶನ ವೇಳೆ ಮುತ್ತಿಗೆ ಹಾಕಿದಾಗಲೂ ಸಿಎಂ ಆಗಿದ್ದ ಜಗದೀಶ್ ಶೆಟ್ಟರ್ ಸ್ಪಂದಿಸಲಿಲ್ಲ. 2020 ರಲ್ಲಿ ಉಪವಾಸ ಸತ್ಯಾಗ್ರಹ ಮಾಡಿದ್ರು ಯಡಿಯೂರಪ್ಪ ಸರಕಾರ ಸ್ಪಂದಿಸಲಿಲ್ಲ. ಕಳೆದ ಅಧಿವೇಶನದಲ್ಲಿ ಪಂಚಮಸಾಲಿಗಳ ಸಿಎಂ ಸಿದ್ದರಾಮಯ್ಯ ಸರಕಾರ ಲಾಠಿ ಚಾರ್ಜ್ ಮಾಡಿದೆ. ಪೊಲೀಸರು ನಿರ್ದಯವಾಗಿ ನಮ್ಮ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ. ಡಿಸೆಂಬರ್ 10 ಪಂಚಮಸಾಲಿಗಳಿಂದ ಮೌನ ಪ್ರತಿಭಟನೆ ಮಾಡುತ್ತೆವೆ ಎಂದು ಕರೆ ಕೊಟ್ಟಿದ್ದಾರೆ.
ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಬಾಯಿಗೆ, ಕೈಗೆ ಕಪ್ಪು ಪಟ್ಟಿಕೊಂಡು ಮೌನ ಪ್ರತಿಭಟನೆ ಮಾಡ್ತಿವಿ. ಜಿಲ್ಲಾಡಳಿತ ತೋರಿಸಿದ ಸ್ಥಳದಲ್ಲಿ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ಮಾಡುತ್ತೇವೆ, ನಗರದ ಗಾಂಧಿ ಭವನದಿಂದ ಮೌನ ಪ್ರತಿಭಟನೆ ಆರಂಭವಾಗಲಿದೆ. ಲಿಂಗಾಯತ ಪಂಚಮಸಾಲಿ ಸಮಾಜದ ಮೇಲೆ ಆಗಿರೋ ದೌರ್ಜನ್ಯ ದಿನವಾಗಿ ಪ್ರತಿಭಟನೆ ಮಾಡಲಾಗುವುದು ಎಂದರು.
ಸರಕಾರದಲ್ಲಿ ಇದ್ದವರು ಮೀಸಲಾತಿ ವಿಚಾರ ಮಾತನಾಡಲು ಆಗದಿದ್ದರೆ ಕನಿಷ್ಠ ಲಾಠಿ ಜಾರ್ಚ್ ಘಟನೆಯನ್ನಾದ್ರು ಖಂಡಿಸುವಂತೆ ಮನವಿ ಮಾಡಿದ್ದೇವೆ. ಬಿಜೆಪಿ ಸರಕಾರದಲ್ಲಿದ್ದ ಪಂಚಮಸಾಲಿ ಶಾಸಕರು ಮೀಸಲಾತಿ ಬಗ್ಗೆ ಮಾತನಾಡುತ್ತಿದ್ದರು. ಆದ್ರೆ ಕಾಂಗ್ರೆಸ್ ಸರಕಾರದಲ್ಲಿ ಇರೋ ಪಂಚಮಸಾಲಿ ಶಾಸಕರು ಮಾತನಾಡುತ್ತಿಲ್ಲ ಎನ್ನುವುದು ದುರಂತ ಎಂದು ಆಸಮಾಧಾನ ಹೊರ ಹಕಿದರು.
ಕೈ ಸರಕಾರದಲ್ಲಿ ಇರೋ ಸಚಿವರು, ಶಾಸಕರ ಮನೆ ಬಾಗಿಲಿಗೆ ಹೋಗಿ ಮನವಿ ಮಾಡಿಕೊಂಡಿದ್ದರು ಯಾವುದೇ ಪ್ರಯೋಜನೆ ಯಾಗಿಲ್ಲ ನಮ್ಮಗೆ ಅವರುಗಳು ಸ್ಪಂದಿಸುತ್ತಿಲ್ಲ ಹಾಗಾಗಿ ಅಧಿವೇಶನದ ವೇಳೆ ಸರಕಾರದ ವಿರುದ್ದ ಪ್ರತಿಭಟನೆ ಮಾಡಬೇಕಾಗಿದೆ ಎಂದು ಹೇಳಿದರು.
