29/01/2026
IMG-20251206-WA0001

ಬೆಳಗಾವಿ-06:ರಾಜ್ಯ ವಿಧಾನ ಮಂಡಳ ಅಧಿವೇಶನ ನಡೆಯುವ ಸಂದರ್ಭದಲ್ಲಿಯೇ ಮಹಾ ಮೇಳ ನಡೆಸಲು ಸಿದ್ಧತೆ ನಡೆಸಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಯ ನಾಯಕರನ್ನು ಮುಂಜಾಗ್ರತ ಕ್ರಮವಾಗಿ ಬಂಧಿಸಬೇಕು ಮತ್ತು ಮಹಾ ಮೇಳ ನಡೆಸುವ ಪ್ರದೇಶದಲ್ಲಿ ನಿಷೇಧ ಆದೇಶ ಜಾರಿ ಮಾಡಬೇಕೆಂದು ಗಡಿನಾಡು ಕನ್ನಡಿಗರ ಸೇನೆಯು ಶುಕ್ರವಾರ ಜಿಲ್ಲಾಧಿಕಾರಿ ಮೊಹಮದ ರೋಷನ್ ಅವರಿಗೆ ಮನವಿ ಅರ್ಪಿಸಿದರು.

ಈ ಸಂಬಂಧ ಮನವಿಯೊಂದನ್ನು ಸಲ್ಲಿಸಿರುವ ಗಡಿನಾಡು ಕನ್ನಡಿಗರ ಸೇನೆಯ ರಾಜ್ಯಾಧ್ಯಕ್ಷ ಬಲರಾಮ ಮಾಸೆನಟ್ಟಿ ಅವರು ನವೆಂಬರ್ ಒಂದರಂದು ಕಪ್ಪು ದಿನಾಚರಣೆಯನ್ನು ಆಚರಿಸದಂತೆ ಜಿಲ್ಲಾಡಳಿತವು ಎಚ್ಚರಿಕೆ ನೀಡಿದರು ಸಹ ಎಮ್. ಈ. ಎಸ್. ನಾಯಕರು ಸಹಸ್ರಾರು ಜನರ ಮೆರವಣಿಗೆ ನಡೆಸಿತು. ಈಗಲೂ ಅದೇ ರೀತಿ ಆಗುವ ಸಾಧ್ಯತೆ ಇದ್ದು ಅವರನ್ನು ಮುಂಜಾಗ್ರತೆ ಕ್ರಮವಾಗಿ ಬಂಧಿಸಬೇಕು ಹಾಗೂ ಅವರು ಕಾರ್ಯಕ್ರಮ ನಡೆಸುವ ಪ್ರದೇಶದಲ್ಲಿ ನಿಷೇಧ ಹೆರಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟ ಭೀಮಾಶಂಕರ್ ಗುಳೇದ ಅವರು ಸಹ ಹಾಜರಿದ್ದರು.
ಗಡಿನಾಡು ಕನ್ನಡಿಗರ ಸೇನೆಯ ಪದಾಧಿಕಾರಿಗಳಾದ ಸಂತೋಷ ಮಾಸೇನಟ್ಟಿ, ಆನಂದ ಬಿಲಾವರ, ಎಸ್. ಎಸ್. ಮೂಕನವರ, ಕಿರಣ ಚಿತಂಪಳೆ,
ಮಯೂರ್ ಕಾಂಬಳೆ, ಮಂಜುನಾಥ ಪಾಸ್ತೇ
ಉಪಸ್ಥಿತರಿದ್ದರು.

error: Content is protected !!