11/05/2026

ಬೆಳಗಾವಿ-10:ಲಿಂಗಾಯತಸಂಘಟನೆ ವತಿಯಿಂದ ಡಾ ಫ ಗು ಹಳಕಟ್ಟಿ ಭವನ ಮಹಾಂತೇಶ ನಗರದಲ್ಲಿ ದಿ.10.05.2026ರಂದು ದಾಂಪತ್ಯ ಜೀವನ ಕುರಿತು ಉಪನ್ಯಾಸದಲ್ಲಿ ಗೃಹಸ್ಥ ಜೀವನದ ಮಹತ್ವ, ಶರಣರ ವಚನಗಳಲ್ಲಿ ಸತಿ ಪತಿ ಧರ್ಮ ಮತ್ತು ಅವರಲ್ಲಿರಬೇಕಾದ ಸಮಾನತೆ ಕುರಿತಾಗಿ ವಚನಗಳನ್ನು ಉದಾಹರಿಸುವದರ ಮೂಲಕ ಕರಡಿಗುದ್ದಿಯಲ್ಲಿ ಪ್ರೌಢಶಾಲಾ ಶಿಕ್ಷಕರಾಗಿರುವ ಶ್ರೀಮತಿ ಗಂಗಾ ಚಕ್ರಸಾಲಿಯವರು ತಿಳಿಸಿದರು. ದಾಂಪತ್ಯದಲ್ಲಿ ಸತಿ ಪತಿಗಳಿಬ್ಬರ ನಡುವೆ ಇರಬೇಕಾದ ನಂಬಿಕೆ,ಸಹಬಾಳ್ವೆ, ಹೊಂದಾಣಿಕೆ,ತಾಳ್ಮೆ, ಸ್ವೀಕಾರ ಮನೋಭಾವ ಇತ್ಯಾದಿ ವಿಷಯಗಳ ಕುರಿತಾಗಿಯೂ ಅವರು ಮಾತನಾಡಿದರು.
ಆರoಭದಲ್ಲಿ ಮಹಾದೇವಿ ಅರಳಿ ವಚನ ಪ್ರಾಥ೯ನೆ ನಡಿಸಿಕೂಟ್ಟರು ಶಿವಕುಮಾರ ಪಾಟೀಲ ಹಾಗೂ ಮಹದೇವ ಕೆoಪಿಗೌಡರ ವಚನಗಳನ್ನು ಪ್ರಸ್ತುತಪಡಿಸಿದರು ಎಂ. ವೈ. ಮೆಣಸಿನಕಾಯಿ ಅತಿಥಿಗಳನ್ನು ಪರಿಚಯಸಿದರು ನೂತನ ದoಪತಿಗಳಾದ ಶಿವಕುಮಾರ ಹಾಗೂ ಮೀನಾಕ್ಷಿ ಅರಳಿಯವರನ್ನು ಇದೇ ಸoದಭ೯ದಲ್ಲಿ ಸತ್ಕರಿಸಲಾಯಿತು ಅಧ್ಯಕ್ಷತೆಯನ್ನು ಈರಣ್ಣ ದೇಯಣ್ಣವರು ವಹಿಸಿದ್ರು ಮುಖ್ಯ ಅತಿಥಿಯಾಗಿ ಜೋತಿ ಬಾದಾಮಿ ದಾಸೋಹ ಸೇವೆಯನ್ನು ವಿಜಯ ಹುದಲಿಮಠ ಸಲ್ಲಿಸಿದರು ಸುರೇಶ ನರಗುoದ ಸ್ವಾಗತಿಸಿದರು ಸoಗಮೇಶ ಅರಳಿ ನಿರೂಪಿಸಿದರು ಕಾಯ೯ಕ್ರಮದಲ್ಲಿ ಸುಜಾತಾ ಮತ್ತಿಕಟ್ಟಿ, ನೇತ್ರಾ ರಾಮಾಪೂರಿ, ಅಕ್ಕಮಹಾದೇವಿ ತೆಗ್ಗಿ, ಲಕ್ಸ್ಮಿ ಜೇವಣಿ, ಶಿವಾನoದ ನಾಯಕ, ಸಿದ್ದಪ್ಪ ಸಾರಾಪೂರಿ, ಬಸವರಾಜ ಬಿಜ್ಜರಗಿ,ಶಶಿಭೂಷಣ ಪಾಟೀಲ,ಆನoದ ಕರಕಿ,ಲಷ್ಮಿಕಾoತ ಗುರವ, ವಿ. ಕೆ.ಪಾಟೀಲ,ಶೇಖರ ವಾಲಿಇಟಗಿ, ವಿರೂಪಾಕ್ಸಿ ದೂಡ್ಡಮನಿ,ಶಂಕರಪ್ಪ ಮೆಣಸಗಿ, ಮ. ಬಿ. ಖಾಡೆ ಗುರಸಿದ್ದಪ್ಪ ರೇವಣ್ಣವರ, ಸುದೀರ ರಘಶೆಟ್ಟಿ, ಮ. ಬ.ಕರಿಕಟ್ಟಿ,ಇವರೆಲ್ಲರೂ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *

error: Content is protected !!