ಚಾಮರಾಜನಗರ-04 ಕಷ್ಟದ ಜೀವನವನ್ನು ನಡೆಸಿ ಬಡವರಿಗೆ ವಿದ್ಯಾದಾನ ಮಾಡಿದ ಮಾತೇ ಸಾವಿತ್ರಿ ಬಾಫುಲೆ, ೧೫೦ ವರ್ಷಗಳ ಹಿಂದೆ ವಿದ್ಯೆಯನ್ನು ಕಲಿಯಲು ಬಹಳ ಕಷ್ಟದ ಕಾಲವಾಗಿತ್ತು. ಅಂತಹ ಸಮಯದಲ್ಲಿ ಜ್ಯೋತಿ ಬಾಫುಲೆೆ ಅವರು ಸಾವಿತ್ರಿ ಬಾಫುಲೆ ಅವರಿಗೆ ವಿದ್ಯೆಯನ್ನು ಕಲಿಯಲು ಪ್ರೋತ್ಸಾಹ ಮಾಡಿದರು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಹಾಗೂ ನಾಡಿನ ಹಿರಿಯ ಸಾಹಿತಿ ಡಾ.ಮೂಡ್ನಕೂಡು ಚಿನ್ನಸ್ವಾಮಿ ಮುಖ್ಯ ಭಾಷಣ ಮಾಡುವುದರ ಮೂಲಕ ತಿಳಿಸಿದರು.
ನಗರದ ಜೆ.ಹೆಚ್.ಪಟೇಲ್ ಸಭಾಂಗಣದಲ್ಲ್ಲಿ ಪರಿಶಿಷ್ಟ ಜಾತಿ ಶಿಕ್ಷಕರ ಕ್ಷೇಮಾಭಿವೃದ್ದಿ ಸಂಘ ಚಾಮರಾಜನಗರ ಜಿಲ್ಲಾ ಘಟಕದಿಂದ ಶನಿವಾರ ನಡೆದ ಡಾ. ಬಿ.ಆರ್ ಅಂಬೇಡ್ಕರ್ ಮತ್ತು ಮಾತೇ ಸಾವಿತ್ರಿ ಬಾಫುಲೆ ಜಯಂತಿ ಹಾಗೂ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ಸಾವಿತ್ರಿ ಬಾಫುಲೆ ಅವರು ವಿದ್ಯೆಯನ್ನು ಕಲಿತದ್ದಲ್ಲದೆ ಸಾವಿರಾರು ಹೆಣ್ಣು ಮಕ್ಕಳು ಕಲಿಯಲು ಶಾಲೆಗಳನ್ನು ಸ್ಥಾಪಿಸಿದರು ಮತ್ತು ಮೌಢ್ಯ ಮತ್ತು ಕಂದಚಾರಗಳಿAದ ದೂರವಿರಲು ಶಿಕ್ಷಣದ ಪಾಠ ಹೇಳಿದರು. ಡಾ. ಬಿ,ಆರ್.ಅಂಬೇಡ್ಕರ್ ಸಾವಿತ್ರಿ ಬಾಫುಲೆಯವರನ್ನು ನೆನೆಯುತ್ತಲೆ ಇದ್ದರು. ಅಂಬೇಡ್ಕರ್ ಅವರ ಮನೆಯೇ ಒಂದು ಗ್ರಂಥಾಲಯವಾಗಿ ಜ್ಞಾನ ದೇಗುಲವೆನಿಸಿತ್ತು. ಓದಿನಿಂದ ಜೀವನ ಬದಲಾವಣೆಯಗುತ್ತದೆ. ಪೋಷಕರು ತಮ್ಮ ಮಕ್ಕಳನ್ನು ಹೆಚ್ಚು ಹೆಚ್ಚು ಅಧ್ಯಾಯನ ಮಾಡಲು ಉತ್ತೇಜನ ನೀಡಬೇಕು ಎಂದು ಹೇಳಿದರು.
ಆರಣ್ಯ ಇಲಾಖೆ ನಿವೃತ್ತ ಅಧಿಕಾರಿ ಡಾ. ಆರ್.ರಾಜು ಅವರು ಸಾವಿತ್ರಿ ಬಾಫುಲೆ, ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡುತ್ತಾ ಜ್ಞಾನವನ್ನು ಪಡೆಯುವ ವಿಚಾರದಲ್ಲಿ ಪ್ರತಿಯೊಬ್ಬರು ಪ್ರಯತ್ನಿಸಬೇಕಿದೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರು ಜ್ಞಾನವನ್ನು ಸಂಪಾದನೆ ಮಾಡಿ ನಮಗೆ ಹಂಚಿದ್ದಾರೆ. ಅವರು ನೀಡಿರುವ ಸಂವಿಧಾನದಿAದ ಈ ದಿನಗಳಲ್ಲಿ ಪ್ರತಿಯೊಬ್ಬರು ಸುಖದಿಂದ ಜೀವನ ನಡೆಸಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಅಂಬೇಡ್ಕರ್, ಸಾವೀತ್ರಿ ಬಾಪುಲೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು. ಜೀವನದಲ್ಲಿ ದಾನ ಧರ್ಮಗಳನ್ನು ಮಾಡುವುದರ ಜೊತೆಗೆ ಮಕ್ಕಳಿಗೆ ಶಿಕ್ಷಣ ನೀಡಿದರೆ ಅವರೆ ನಿಮಗೆ ಆಸ್ತಿಯಾಗುತ್ತಾರೆ. ಶಿಕ್ಷಣದಿಂದ ಏನನ್ನಾದರು ಸಾಧಿಸಬಹುದು ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಮಾಡುವುದರಿಂದ ಅವರ ಮನಸು ಸಾಧನೆಯ ಕಡೆಗೆ ಹೋಗುತ್ತದೆ. ಚಾಮರಾಜನಗರ ಜಿಲ್ಲೆಯು ಗಡಿಭಾಗದಲ್ಲಿ ಇದೆ, ಎರಡು ರಾಜ್ಯಗಳು ಜೊತೆಯಲ್ಲಿ ಇರುವುದು ಹೆಚ್ಚು ಕಾಡು ಪ್ರದೇಶವನ್ನು ಒಳಗೊಂಡಿದೆ. ಈ ಜಿಲ್ಲೆಯಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯ. ವಿದ್ಯಾರ್ಥಿಗಳ ಸಾಧನೆಗಳನ್ನು ಗುರುತಿಸುವುದು ಶಿಕ್ಷಕನ ಕರ್ತವ್ಯವಾಗಿದೆ ಎಂದು ಹೇಳಿದರು.
ಸಭೆಗೆ ತಡವಾಗಿ ಅಗಮಿಸಿದ ಕೊಳ್ಳೇಗಾಲ ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಮಾತನಾಡಿ ಜೋತಿ ಬಾಫುಲೆ ಅವರು ಸಾವಿತ್ರಿ ಬಾಪುಲೆಯವರಿಗೆ ದಾರಿ ದೀಪವಾಗಿ ಉತ್ತೇಜನ ನೀಡಿದರು. ಮಹಿಳೆಯರಿಗೆ ಶಿಕ್ಷಣ ಕೊಡಲು ದಂತಿಗಳ ಪಾತ್ರ ಬಹಳ ಮುಖ್ಯವಾಗಿದೆ. ಶಿಕ್ಷಣದಲ್ಲಿ ಮೀಸಲಾತಿ ಉದ್ಯೋಗದಲ್ಲಿ ಮೀಸಲಾತಿ ಸಿಗಲು ಡಾ.ಬಿ.ಆರ್.ಅಂಬೇಡ್ಕರ್ ಹೋರಾಟದ ಮೂಲಕ ದಾರಿ ತೋರಿದರು ಶಿಕ್ಷಣ ಕ್ಷೇತ್ರ ಬಹಳಷ್ಟು ಮುಂದೆ ಇದೆ. ಹಲವಾರು ಮಹಾನೀಯರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಸಂವಿಧಾನದಲ್ಲಿ ಶಿಕ್ಷಣ ಮುಖ್ಯವಾದ ಪಾತ್ರ ವಹಿಸಿದೆ ಎಂದು ಹೇಳಿದರು.
.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರ ರಾಜೇಅರಸು ಮಾತನಾಡಿದರು
ವೇದಿಕೆಯಲ್ಲಿ ನರಸಿಪುರ ಬೌದ್ದ ವಿಹಾರದ ಬೋಧಿರತ್ನ ಬಂತೇಜಿ ಅವರು ಆರ್ಶಿವಚನ ನೀಡಿದರು, ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ ಪ್ರಸನ್ನ, ಪ್ರಸೂತಿ ತಜ್ಞರಾದ ಡಾ. ರೇಣುಖದೇವಿ, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಣ್ಣೇಗೌಡ, ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮೈಸೂರು ವಿಭಾಗೀಯ ಉಪಾಧ್ಯಕ್ಷ ಲಲಿಂಗಸ್ವಾಮಿ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಮಹದೇವಸ್ವಾಮಿ, ಸವಿತ್ರಿ ಬಾಫುಲೆ ಸಂಘದ ಜಿಲ್ಲಾಧ್ಯಕ್ಷೆ ಭವಾನಿದೇವಿ, ಪರಿಶಿಷ್ಟ ಜಾತಿ ಶಿಕ್ಷಕರ ಕ್ಷೇಮಾಭಿವೃದ್ದಿ ಸಂಘದ ಜಿಲ್ಲಾಧ್ಯಕ್ಷ ಸಿ.ಕೆಂ.ರಾಮಸ್ವಾಮಿ,ಜಿಲ್ಲಾ ಪ್ರದಾನ ಕಾರ್ಯದಶಿಸ ನಂಜುಂಡಸ್ವಾಮಿ, ತಾಲ್ಲೂಕುಗಳ ಅಧ್ಯಕ್ಷರಾದ ಎಂ.ಡಿ,ಮಹದೇವಯ್ಯ, ಶಿವರಾಮು, ಗುರುಶಂಕರಯ್ಯ, ಶಂಕರ್‌ಬಾಬು, ಹಾಗೂ ಜಿಲ್ಲಾ ಹಾಗೂ ತಾಲ್ಲೂಕು ಸಂಘದ ಪದಾಧಿಕರಿಗಳು, ನಿರ್ದೇಶಕರುಗಳು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು ಈ ಸಂದರ್ಭದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.