23/12/2024
IMG-20240205-WA0050

ಯರಗಟ್ಟಿ-05: ಭಾರತಕ್ಕೆ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಲು ಲೊಕಸಭೆ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರು ಅವಿರತ ಶ್ರಮವಹಿಸುವಂತೆ ಬೆಳಗಾವಿ ಗ್ರಾಮಾಂತರ ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ ಹೇಳಿದರು.

ಸಮೀಪದ ಸತ್ತಿಗೇರಿ ಗ್ರಾಮದ ದಲಿತ ಕಾಲೋನಿಯಲ್ಲಿ ಬುಧವಾರದಂದು ಏರ್ಪಡಿಸಿದ್ದ ಮತ್ತೊಮ್ಮೆ ಮೋದಿ ಗೊಡೆ ಬರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ,
ಜನಸಾಮನ್ಯರ ಸೇವೆಗೆ ಸದಾ ಸಿದ್ದವಿರುವ ಬಿಜೆಪಿ ಪಕ್ಷದ ಅಭ್ಯರ್ಥಿಗೆ ಲೊಕಸಭಾ ಚುನಾವಣೆಯಲ್ಲಿ ಮತ ನೀಡಬೇಕು.
ಅಂಬೇಡ್ಕರ್ ಅವರ ನೀಡಿದ ಸಂವಿಧಾನದಿಂದ ಎಲ್ಲರಿಗೂ ಸಮಬಾಳು ನೀಡಿ ಸಮಾಜಿಕ ಭದ್ರತೆ, ರಾಜಕೀಯ ಸ್ಥಾನಮಾನ ನೀಡಿದ ಮಹಾನ ವ್ಯಕ್ತಿ ಡಾ.ಅಂಬೇಡ್ಕರ್ ರವರು. ಹಿಂದೂ ವಿರೋಧಿ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್ ಪಕ್ಷದ ನೀಲುವು ಖಂಡನೀಯ ಎಂದರು.
ಬಿಜೆಪಿ ಮುಖಂಡ ವೀರುಪಾಕ್ಷ ಮಾಮನಿ ಮಾತನಾಡಿ, ಡಾ.ಅಂಬೇಡ್ಕರ್ ಅವರನ್ನ ಲೊಕಸಭೆಯಲ್ಲಿ ಎರಡು ಬಾರಿ ಸೋಲಿಸಿದ್ದ ಕಾಂಗ್ರೆಸ್ ಅವರ ಅಂತ್ಯಕ್ರಿಯೆಗೆ ದೆಹಲಿಯಲ್ಲಿ ಜಾಗ ನೀಡದೆ ಯಾವಾಗಲು ದಲಿತವಿರೋಧಿ ನೀತಿ ಅನುಸರಿಸುತ್ತದೆ ಎಂದು ಕಾಂಗ್ರೆಸ್ ವಿರುದ್ದ ಕಿಡಿ ಕಾರಿದರು.
ಜಿಲ್ಲಾ ಮಾಧ್ಯಮ ಸಂಚಾಲಕ ಎಫ್.ಎಸ್.ಸಿದ್ದನಗೌಡರ ಪ್ರಸ್ಥಾವಿಕವಾಗಿ ಮಾತನಾಡಿ, ಭಾರತವನ್ನು ಜಗದ್ಗುರು ಸ್ಥಾನದಲ್ಲಿ‌ ನಿಲ್ಲಿಸಲು‌ ದೇಶದ ಜನತೆಗಾಗಿ ಹಗಲಿರುಳು ಶ್ರಮಸುತ್ತಿರುವ ದೇಶದ ನೆಚ್ಚಿನ ಪ್ರಧಾನಿ‌ ಅಂತರಾಷ್ಟ್ರೀಯ ನಾಯಕ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬಿಜೆಪಿ ಮತ್ತೊಮ್ಮೆ ಕೇಂದ್ರದಲ್ಲಿ ಬಾರಿ ಬಹುಮತದಿಂದ ಅಧಿಕಾರಕ್ಕೆ ಬರಲಿದೆ ಎಂದರು.
ಯಲ್ಲಮ್ಮ ದೇವಸ್ಥಾನದ ಸೇವಾ ಟ್ರಸ್ಟ್ ಅಧ್ಯಕ್ಷ ಬಸಯ್ಯ ಹೀರೆಮಠ, ಜಗದೀಶ್ ಕೌಜಗೇರಿ, ಗುರು ವಾಲಿ, ಗೌಡಪ್ಪ ಸವದತ್ತಿ, ಮಾತನಾಡಿದರು. ದಲಿತ ಮುಖಂಡರು ನೂತನ ಜಿಲ್ಲಾಅಧ್ಯಕ್ಷರನ್ನು ಸತ್ಕರಿಸಿದರು.
ಕಾರ್ಯಕ್ರಮದಲ್ಲಿ ಮಹಾಂತೇಶ
ಗೋಡಿ, ಜಯಪ್ರಕಾಶ್ ಎಮ್.ಸಿ. ಸಂದೀಪ ದೇಶಪಾಂಡೆ, ನೀತಿನ ಚೌಗಲೆ, ಸಂತೋಷ ದೇಶನೂರ, ಯಲ್ಲೇಶ ಕೊಲಕಾರ, ಪರ್ವತಗೌಡ ಪಾಟೀಲ, ಬಸನಗೌಡ ಪಾಟೀಲ, ಯಲ್ಲಪ್ಪ ಪಟ್ಟೆಪ್ಪನ್ನವರ, ಗ್ರಾಪಂ ಅಧ್ಯಕ್ಷೆ ಬಂಗಾರವ್ವ ಮಾದರ, ಹಣಮಂತ‌ ಪಟ್ಟಪ್ಪನವರ.ಚಂದ್ರು ಅಳಗೋಡಿ, ಹಣಮಂತ ಕಳಸಪ್ಪನವರ, ಸೋಮಲಿಂಗ ಬಡ್ಡೆಪ್ಪನವರ, ಸುನೀಲ ಮಾಮನಿ, ಹಾಗೂ ಅಪಾರ ಬಿಜೆಪಿ ಕಾರ್ಯರ್ತರು ಉಪಸ್ಥಿತಿರಿದ್ದರು.

error: Content is protected !!