29/01/2026
IMG-20251127-WA0017

ಬೆಳಗಾವಿ-29 : ಡಿಸೆಂಬರ್ 8 ರಿಂದ ಚಳಿಗಾಲದ ವಿಧಾನದ ಮಂಡಳ ಅಧಿವೇಶನ ಪ್ರಾರಂಭದ ವೇಳೆ ಕಲಾಪದಲ್ಲಿ ಗೋಕಾಕ್ ಜಿಲ್ಲೆಯನ್ನಾಗಿ ಘೋಷಣೆ ಮಾಡುವುದಂತೆ ಆಗ್ರಹಿಸಿ ರಾಷ್ಟ್ರೀಯ ಮಜದೂರ್ ಕಾಂಗ್ರೆಸ್ ಕಲಾರ್ಯಕರ್ತರಿಂದ ಪ್ರತಿಭಟನೆ ನಡೆಸಿದರು.

ಗುರುವಾರ ರಾಷ್ಟ್ರೀಯ ಮಜದೂರ್ ಕಾಂಗ್ರೆಸ್ ಕಾರ್ಯಕರ್ತರು, ಗೋಕಾಕ್ ಜಿಲ್ಲೆಯನ್ನಾಗಿ ಮಾಡುವ ಉದ್ದೇಶದಿಂದ ತಾಲೂಕಿನಿಂದ ಬೆಳಗಾವಿ ಡಿಸಿ ಕಛೇರಿಯ ವರೆಗೆ ಪಾದಯಾತ್ರೆ ಮೂಲಕ ಆಗಮಿಸಿ , ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಅಧಿವೇಶನದ ವೇಳೆ ಗೋಕಾಕ್ ಜಿಲ್ಲೆಯನ್ನಾಗಿ ಘೋಷಣೆ ಮಾಡುವಂತೆ ಆಗ್ರಹಿಸಿ ಧರಣಿ ಪ್ರತಿಭಟನೆ ನಡೆಸಿದರು.
ಜೆ.ಎಚ್ ಪಟೇಲ್ ಅವರ ಕಾಲದಲ್ಲಿ ಗೋಕಾಕ್ ಜಿಲ್ಲೆಯನ್ನಾಗಿ ಘೋಷಣೆ ಮಾಡಲಾಗಿತ್ತು, ಆದರೆ ಅದು ಕೆಲವು ಕಾರಣಾಂತರಗಳಿಂದ ಜಿಲ್ಲೆಯನ್ನಾಗಿಸುವುದು ರದ್ದು ಮಾಡಲಾಗಿದೆ. ಅಂದಿನಿಂದ ಇಲ್ಲಿಯ ವರೆಗೆ ಗೋಕಾಕ್ ತಾಲೂಕಿಗಿನಲ್ಲಿ ಸರಿಯಾಗಿ ಯಾವುದೇ ಮೂಲಕಭೂತ ಸೌಕರ್ಯ ಇಲ್ಲಿದೆ ಇರುವುದರಿಂದ ಜನತೆಯು ವಂಚಿತರಾಗಿದ್ದಾರೆ. ಜಿ.ಎಚ್ ಪಟೇಲ್ರ ಹಾಗೂ ಇಲ್ಲಿನ ಜನತೆಯ ಆಸೆ ಪೂರೈಸಬೇಕು, ಚಳಿಗಾಲದ ಅಧಿವೇಶನದ ವೇಳೆ ಗೋಕಾಕ್ ತಾಲೂಕನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರಕಾರಕ್ಕೆ ಮನಿವಿ ಮಾಡಿಕೊಂಡರು. ಇದೇ ವಿಚಾರವನ್ನು ಇಟ್ಟುಕೊಂಡು ಅಧಿವೇಶನದ ವೇಳೆ ಪ್ರತಿಭಟನೆ ಮಾಡಲಾಗುವುದು ಎಂದು ಧರಣಿ ಪ್ರತಿಭಟನೆಯಲ್ಲಿ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಈ ವೇಳೆ ರಾಷ್ಟ್ರೀಯ ಮಜದೂರ್ ಕಾಂಗ್ರೆಸ್ ಪದಾಧಿಕಾರಿಗಳು, ಸಂಚಾಲಕರು, ಜಿಲ್ಲಾಧ್ಯಕ್ಷರುಗಳು ಕಾರ್ಯಕರ್ತರು ಸೇರಿದಂತೆ ಮತ್ತಿತ್ತರರು ಧರಣಿ ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.

error: Content is protected !!