ಬೆಳಗಾವಿ-29: ಬೆಳೆ ಸಮೀಕ್ಷೆದಾರರಿಗೆ ಸೇವಾ ಭದ್ರತೆಯೊಂದಿಗೆ ಸುರಕ್ಷತೆ ನೀಡಬೇಕು ಇಲ್ಲವಾದಲ್ಲಿ ಚಳಿಗಾಲದ ಅಧಿವೇಶನದ ವೇಳೆ ಉಗ್ರ ಹೋರಾಟ ಮಾಡುವುದಾಗಿ ಕರ್ನಾಟಕ ಬೆಳೆ ಸಮೀಕ್ಷೆದಾರರ ಸಂಘದ ಕಾರ್ಯಕರ್ತರು ಒತ್ತಾಯಿಸಿದರು.
ಗುರುವಾರ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿಗಳ ಕಛೇರಿಗೆ ಆಗಮಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರಕಾರಕ್ಕೆ ತಮ್ಮ ಸಮಸ್ಯೆಗಳ ಬಗ್ಗೆ ಅಳಲು ತೋಡಿಕೊಂಡರು.
ಸತತವಾಗಿ ಕೃಷಿ, ಕಂದಾಯ, ತೋಟಗಾರಿಕೆ ಇಲಾಖೆಗಳು ಜಂಟಿಯಾಗಿ ಬೆಳೆಹಾನಿ ನಾಶದ ಸರ್ವೇ ಕಾರ್ಯ ಮಾಡುತ್ತಿದ್ದೇವೆ. ಆದರೇ 8ರಿಂದ10 ವರ್ಷಗಳಿಂದ ಇಲ್ಲಿಯ ವರೆಗೆ ಯಾವುದೇ ಮೂಲಭೂತ ಸೌಲಭ್ಯಗಳು ನಮ್ಮಗೆ ನೀಡುತ್ತಿಲ್ಲವೇಂದು ಪ್ರತಿಭಟನೆಯಲ್ಲಿ ಸರಕಾರದ ವಿರುದ್ದ ಆಕ್ರೊಶ ವ್ಯಕ್ತಪಡಿಸಿದರು. ನಾವುಗಳು ಬೆಳೆ ಹಾನಿಯ ಸಮೀಕ್ಷೆಗೆ ತೆರಳಿದ ವೇಳೆ ಭೂಮಿಗಳಲ್ಲಿ ಪ್ರಾಣಿಗಳಿಂದ ಹಲ್ಲೆಗೊಳಗಾಗಿರುವ ಅದೆಷ್ಟೋ ಘಟನೆಗಳು ನಡೆದು ಹೋಗಿವೆ. ಈ ವಿಚಾರದ ಬಗ್ಗೆ ಸರಕಾರದ ಗಮನಕ್ಕೆ ತಂದರು ಇಲ್ಲಿಯವರೆಗೆ ಯಾವುದೇ ಪ್ರಯೋಜನೆ ಹೋಗಿಲ್ಲ ಎಂದು ಇಲಾಖೆ ಹಾಗೂ ಸರಕಾರದ ವಿರುದ್ದ ಅಸಮಾಧಾನ ಹೋರ ಹಾಕಿದರು.
ಸರ್ವೇ ನಡೆಸಲು ತೆರಳುತ್ತಿರುವ ಕಾರ್ಮಿಕರಿಗೆ ಯಾವುದೇ ಐಡಿ ಕಾಡ್೯, ಜೀವ ವಿಮೆ, ಸೇವಾಭದ್ರತೆ, ಗಂಬೂಟ್ ನೀಡಬೇಕು ಹಾಗೂ ಸಂಭಾವಣೆ ಹೆಚ್ಚಿಸಬೇಕು. ಹಾಗೂ ಪ್ರತಿಯೊಂದು ಗ್ರಾಮಕ್ಕೆ ಜನ ಸಂಪರ್ಕ ಅಧಿಕಾರಿಗಳನ್ನು ನೇಮಿಸಬೇಕು. ಕೆಲವ ಮೂರು ತಿಂಗಳು ಕೆಲಸ ನೀಡದೆ ವರ್ಷಪೂರ್ತಿಯಾಗಿ ಕೆಲಸ ನೀಡಬೇಕೆಂದು ಪ್ರತುಭಟನೆಯ ವೇಳೆ ಜಿಲ್ಲಾ ಬೆಳೆ ಸಮೀಕ್ಷೆದಾರರ ಸಂಘಟ ಜಿಲ್ಲಾಧ್ಯಕ್ಷ ಕುಮಾರ ಸುಳಗೇಕರ್ ಪ್ರತಿಠನೆಯಲ್ಲಿ ಆಗ್ರಹಿಸಿದರು.
ಇದೇ ವಿಚಾರವನ್ನು ಇಟ್ಟುಕೊಂಡು ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಚಳಿಗಾಲ ಅಧಿವೇಶನದ ವೇಳೆ ಮತ್ತೊಂದು ಭಾರಿ ರಾಜ್ಯ ಸರಕಸರಕ್ಕೆ ಎಚ್ಚಿರಿಸಿತ್ತೇವೆ ಎಂದು ಪ್ರತಿಭಟನೆಯಲ್ಲಿ ಆಗ್ರಹಿಸಿದರು.
ಈ ವೇಳೆ ಕರ್ನಾಟಕ ಬೆಳೆ ಸಮೀಕ್ಷದಾರರ ಸಂಘದ ಜಿಲ್ಲಾದ್ಯಕ್ಷ ಕುಮಾರ ಸುಳಗೇಕರ್, ಪದಾಧಿಕಾರಿ ಸಂಚಾಲಕರು ಸೇರಿದಂತೆ ಜಿಲ್ಲಾಯ ೧೫ ತಾಲೂಕುಗಳಿಂದ ಆಗಮಿಸಿದ ಕಾರ್ಮಿಕರು ಮತ್ತಿತರರು ಉಪಸ್ಥಿತರಿದ್ದರು.
