oplus_0
ಬೆಳಗಾವಿ-29: ಕಾಯಕಯೋಗಿ ಶ್ರೀ ಡಾ. ಶಿವಬಸವ ಮಹಾಸ್ವಾಮಿಗಳ 136 ನೇಯ ಜಯಂತಿ ಮಹೋತ್ಸವ ಪ್ರಯುಕ್ತ ಭವ್ಯ ಮೆರವಣಿಗೆಯೊಂದಿಗೆ ಚಾಲನೆ ನೀಡಲಾಯಿತು.
ಶನಿವಾರ ಬೆಳಗಾವಿಯ ನಗರದಲ್ಲಿರುವ ಶ್ರೀನಗರ ಉದ್ಯಾನ ವನದಿಂದ ಆರಂಭವಾದ ಭವ್ಯ ಮೆರವಣಿಗೆ ಆರ್ ಎನ್ ಶೆಟ್ಟಿ ಪಾಲಿಟೆಕ್ನಿಕ್ ಆವರಣದಲ್ಲಿ ಬಂದು ಸೇರಿತು. ಮೆರವಣಿಗೆಯಲ್ಲಿ ನಾಗನೂರು ಶ್ರೀ ರುದ್ರಾಕ್ಷಿಮಠದ ಶ್ರೀ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಹಾಗೂ ಗಣ್ಯರು ಕಾಯಕಯೋಗಿ ಶ್ರೀ ಡಾ. ಶಿವಬಸವ ಮಹಾಸ್ವಾಮಿಗಳ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅಲಂಕರಿಸಿದ ವಾಹನದಲ್ಲಿ ಪುಜ್ಯರ ಭಾವ ಚಿತ್ರದ ಮೆರವಣಿಗೆ ನಡೆಸಿದರುಮ
ಬಸವಾದಿ ಶರಣರ ವಚನ ಕಟ್ಟುಗಳು ಮೆರವಣಿಗೆಯ ಮೆರಗು ಹೆಚ್ಚಿಸಿದರೆ ಮಾಧ್ಯ ಮೇಳಗಳು, ಜಾನ ಪದ ಕಲಾ ತಂಡಗಳು ಎಲ್ಲರ ಆಕರ್ಷಣೆಯ ಬಿಂದು ಆಗಿತ್ತು.
ಮೆರವಣಿಗೆಯಲ್ಲಿ 20 ಕ್ಕೂ ಅಧಿಕ ಪೂಜ್ಯರ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಬಸವರಾಜ ರೋಟ್ಟಿ ಹಾಗೂ ಪದಾದಿಕಾರಿಗಳು ಎಲ್ಲಾ ಬಸವಪರ ಸಂಘಟನೆಗಳ ಸದಸ್ಯರು, ಮಾತೃ ಮಂಡಳಿಗಳು, ಮಹಿಳಾ ಮಂಡಳಿಗಳು ಸಾವಿರಾರು ಸಂಖ್ಯೆಯಲ್ಲಿ ಹಾಜರಿದ್ದರು.
