09/12/2025
IMG-20251027-WA0000

ಬೆಳಗಾವಿ-27:ಸನಾತನ ಭಾರತೀಯ ಸಂಸ್ಕೃತಿಯಲ್ಲಿ ಜನ್ಮದಿನಕ್ಕೆ ಅತ್ಯಂತ ಪಾವಿತ್ರತೆ ಇದ್ದು ಅದನ್ನು ಮರೆತು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೊಗದೆ, ದಿನ‌ ದುರ್ಬಲರಿಗೆ ಸಹಾಯ ಸಹಕಾರದೊಂದಿಗೆ ಸಮಾಜಿಕ ಸೇವೆ ಮಾಡುವದರೊಂದಿಗೆ ಮಾಡುವ ಜನ್ಮದಿನಾಚರಣೆಯಿಂದ ಜೀವನ ಸಾರ್ಥಕವಾಗುತ್ತದೆ ಎಂದು ಗ್ರಾಮಾಂತರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಮಾದಮ್ಮನವರ ಹೇಳಿದರು.

IMG 20251022 125735 - IMG 20251022 125735
ಸಮೀಪದ ಬಸವಣ ಕುಡಚಿಯಲ್ಲಿರುವ ವೃದ್ದಾಶ್ರಮದಲ್ಲಿ 51ನೇ ಹುಟ್ಟುಹಬ್ಬದ ನಿಮಿತ್ತ ಬೆಳಗಿನ ಉಪಹಾರ ಅಯೋಜಿಸಿ ತಮ್ಮ ಜನ್ಮದಿನಾಚರಣೆ ಆಚರಿಸಿಕೊಂಡು ಮಾತನಾಡಿ, ಸಮಾಜದಲ್ಲಿ ಮಕ್ಕಳ ಪ್ರೀತಿ ವಂಚಿತ ಹಾಗೂ ಅಸಾಹಯಕರಾದ ವೈದ್ದರಿಗೆ ಗೌರವ ಕೊಡಬೇಕಾಗಿರುವದು ನಾಗರಿಕ‌ಸಮಾಜದ ಪ್ರತಿಯೊಬ್ಬರ ಕರ್ತವ್ಯ ಅಂತಹ ವಾತ್ಸಲ್ಯತೊರ್ಪಡಿಸಲು ಅವಕಾಶ ಇಲ್ಲದವರ ಮಧ್ಯದಲ್ಲಿ ಅವರಿಗೆ ಮಗನ‌ ಸ್ಥಾನದಲ್ಲಿ ನಿಂತು ಉಪಹಾರ ಬಡಿಸಿ ಅವರ ಸಮ್ಮುಖದಲ್ಲಿ ಕೇಕ್ ಕಟ್ ಮಾಡಿ ಸಿಹಿ ವಿತರಿಸಿ ಜನ್ಮದಿನ ಅಚರಿಸುತ್ತಿರುವದು ನನ್ನ ಪೂರ್ವ ಜನ್ಮದ ಪುಣ್ಯ.‌ ದೇವರು ಕೊಟ್ಟ ಸಂಪತ್ತಿನ‌ಕೆಲ ಭಾಗವನ್ನು ಇಂತಹ ಸಂದರ್ಭಗಳಲ್ಲಿ ಸತ್ಕಾರ್ಯಕ್ಕೆ ಉಪಯೋಗ ಪಡಿಸಿದರೆ ಮಾನಸಿಕ‌ ನೆಮ್ಮದಿ ಹಾಗೂ ಐಶ್ವರ್ಯ ದ್ವಿಗುಣವಾಗುವ ಭರವಸೆ ಇದೆ ಎಂದರು.

ಜನ್ಮದಿನದ ನಿಮಿತ್ತ ವಿದ್ಯಾರ್ಥಿಗಳ ಉಚಿತ ಅರೋಗ್ಯ ಶಿಬಿರ ಮತ್ತು ನೊಟ್ ಬುಕ್ ವಿತರಣೆ:

ಪಂತನಗರದ ಶಿವಾಲಯದಲ್ಲಿ ಕಾಲೇಜು ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಡಾ ಗುರುಪ್ರಸಾದ ಕೋತಿನ್ ನಡೆಸಿದರು. ವಿದ್ಯಾರ್ಥಿಗಳಲ್ಲಿರುವ ಪೌಷ್ಟಿಕ ಆಹಾರದ ಕೊರತ, ಕಡಿಮೆ ತೂಕ ಹಾಗೂ ಆರೋಗ್ಯದ ಸಮಸ್ಯೆ ಎದುರಿಸುತ್ತಿದ್ದ ವಿದ್ಯಾರ್ಥಿಗಳಿಗೆ ಪ್ರೋಟಿನ್ ಪೌಡರ ಹಾಗೂ ಪೌಷ್ಟಿಕಾಂಶದ ಮಾತ್ರೆ ಮತ್ತು ಸಿರಪ್ ನೀಡಿ ಮಕ್ಕಳಲ್ಲಿ ಅರೋಗ್ಯದ ಜಾಗೃತಿ ಮೂಡಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಸಮಯದ ಮಹತ್ವ ಅರಿತು ಮೋಜು ಮಸ್ತಿ ಎನ್ನದೆ ಸತತ ವ್ಯವಸ್ಥಿತ ಅಧ್ಯಯನದಿಂದ‌ ಅಂದುಕೊಂಡ ಗುರಿ‌ಮುಟ್ಟುಲು ಸಾಧ್ಯ. ಜೀವನದಲ್ಲಿ ಅಂದುಕೊಂಡದ್ದನ್ನು ಸಾಧಿಸಬೇಕಾದರೆ ನಿರಂತರ ಶ್ರಮವಹಿಸಿ ಶ್ರದ್ಧೆಯಿಂದ ಕಾರ್ಯ ನಿರ್ವಹಿಸಬೇಕು ಅಂದಾಗ ಸಾಧನೆಯ ಶಿಖರ‌ವೆರಲು ಸಾಧ್ಯ ಎಂದರು.
ನಿವೃತ್ತ ಶಿಕ್ಷಕರಾದ ದಯಾನಂದ ದಯಣ್ಣವರ, ಮಾತನಾಡಿ ಹದಿನಾರದಿಮದ ಇಪ್ಪತ್ತೊಂದು ವರ್ಷದವರಡಗೆ ತಾರುಣ್ಯದಲ್ಲಿ ಮನಸ್ಸು ಮಂಗನ ತರ ವರ್ತಿಸಿದರು ಅದನ್ನು ಹತೋಟಿಗೆ ತಂದಾಗ ಸಾಧನೆ ಸಾಧ್ಯವಾಗಲಿದೆ ಅಂತಹ ಸಾಧನೆಗೈದ ಮಲ್ಲಿಕಾರ್ಜುನ ‌ಮಾದಮ್ಮನವರ ಸಾಧನೆ ಅತ್ಯಂತ ಯಶಸ್ವಿಯಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಹೊಲಮನೆಯಲ್ಲಿ ಕಾರ್ಯ ನಿರ್ವಹಿಸುತ್ತಾ ಅವರ ತಂದೆಯ ಹೊಟೆಲದಲ್ಲಿ ಕೆಲಸ ನಿರ್ವಹಿಸಿ ಉತ್ತಮ ಶಿಕ್ಷಣದೊಂದಿಗೆ ಆತ ಕಷ್ಟಪಟ್ಟು ಮಾಡಿದ ಶ್ರಮದಿಂದ ಸಮಾಜದಲ್ಲಿ ಉನ್ನತ‌ ಸ್ಥಾನದಲಿದ್ದು ಸಮಾಜಿಕ‌, ರಾಜಕೀಯ ಹಾಗೂ ಆರ್ಥಿಕವಾಗಿ ಸಭಲತೆ ಸಾಧಿಸಿ‌ ತಮ್ಮ ಇಬ್ಬರ ಸುಪುತ್ರರಲ್ಲಿ ಒರ್ವನನ್ನು ವೈದ್ಯರನ್ನಾಗಿ ಇನ್ನೊರ್ವನನ್ನು ಇಂಜಿನಿಯರನ್ನಾಗಿ ಮಾಡಿದ್ದಾರೆ ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶ್ರಮ ಪಡಬೇಕೆಂದರು.
ವೇದಿಕೆಯ ಮೇಲೆ ಸಂತೋಷ ದೇಶನೂರ, ಯಲ್ಲೇಶ ಕೊಲಕಾರ, ಈರಣ್ಣ ವೀರಶೆಟ್ಟಿ, ಆನಂತ ಸಾಳುಂಕೆ, ಸಿದ್ದ್ರಾಮ ತಲ್ಲೂರ ಡಾ.ಎಮ್.ಸಿ ಹೀರೆಮಠ,‌ ಆನಂದ ನಿರ್ವಾಣಿ, ಬಸವರಾಜ ಗಣಿಕೊಪ್ಪ, ಕಾಡಯ್ಯ ಸಾಲಿಮಠ ಹಾಗೂ ನೂರಾರು ವಿದ್ಯಾರ್ಥಿಗಳು ಇದ್ದರು.
ಮಾರಿಹಾಳ ಪಿಕೆಪಿಎಸ್ ನಿರ್ದೇಶಕರು ಸಿಬ್ಬಂದಿ ಸತ್ಕರಿಸಿ ಹುಟ್ಟುಹಬ್ಬದ ಶುಭಕೊರಿದರು.
ಜನ್ಮದಿನದ ನಿಮಿತ್ತ ಕಾರ್ಮಿಕರು, ಜನಪ್ರತಿನಿಧಿಗಳು ಹಾಗೂ ಹಿತೈಷಿಗಳು ಅವರ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಅನೇಕ‌ಕಡೆ ಆಚರಿಸಿದರು ಶುಭಾಶಯ ಮಾಹಾಪೂರೆ ಹರಿದು ಬಂತು.

error: Content is protected !!